Advertisements

ಟೈಗರ್ ಹಿಲ್ ಪಾಕಿಸ್ತಾನ ಕೈಯಿಂದ ಕಸಿದುಕೊಂಡ ವೀರ ಸೇನಾನಿಗೆ ಮತ್ತೊಂದು ಗೌರವ

1999ರ ಕಾರ್ಗಿಲ್ ಯುದ್ಧದ ವೇಳೆ ತಮ್ಮ ಪ್ರಾಣ ಲೆಕ್ಕಿಸದೆ ಪಾಪಿ ಪಾಕಿಸ್ತಾನ ಸೈನಿಕರ ವಿರುದ್ಧ ಹೋರಾಡಿ ಟೈಗರ್ ಹಿಲ್ ಅನ್ನು ಗೆದ್ದುಕೊಟ್ಟಿದ್ದ ವೀರ ಯೋಧ ಲೆಫ್ಟಿನೆಂಟ್ ಜನರಲ್ ವೈಕೆ ಜೋಷಿ ಅವರು ಇಂದು ಸೇನೆಯ 14ನೇ ಕಾರ್ಪೋರೇಷನ್ ನ ಕಮಾಂಡಿಂಗ್ ಚೀಫ್ ಆಗಿ ಅಧಿಕಾರ ಸ್ವೀಕರಿಸಿದರು.

1999ರ ಕಾರ್ಗಿಲ್ ಯುದ್ಧದ ವೇಳೆ ಸೇನೆಯ 13ನೇ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ ತಂಡವನ್ನು ಟೈಗರ್ ಹಿಲ್ ನಲ್ಲಿ ಯಶಸ್ವಿಯಾಗಿ ಮುನ್ನಡೆಸಿದ್ದರು

ವಿಶೇಷ ಅಂದರೆ ವೈಕೆ ಜೋಷಿ ಅವರು ಲಡಾಖ್ ವ್ಯಾಪ್ತಿಯಲ್ಲಿ ಇನ್ನು ಮುಂದೆ ಸೇನೆಯನ್ನು ಮುನ್ನಡೆಸಲಿದ್ದು, ಲಡಾಖ್ ಕಾರ್ಯ ವ್ಯಾಪ್ತಿಗೆ ಕಾರ್ಗಿಲ್ ಯುದ್ಧದ ವೇಳೆ ವಶಪಡಿಸಿಕೊಂಡ ಕಾರ್ಗಿಲ್ ಬೆಟ್ಟ ಕೂಡ ಸೇರುತ್ತದೆ.

ಅಂದು ಆ ಶಿಖರವನ್ನು ವಶಪಡಿಸಿಕೊಳ್ಳುವಲ್ಲಿ 24 ವರ್ಷದ ಲೆಫ್ಟಿನೆಂಟ್ ವಿಕ್ರಮ್ ಬಾತ್ರಾ ಮತ್ತು ಕ್ಯಾಪ್ಟನ್ ಸಂಜೀವ್ ಜಾಮ್ವಾಲ್ ಗೆ ನೀಡಲಾಗಿತ್ತು. ಟೈಗರ್ ಹಿಲ್ ವಶಪಡಿಸಿಕೊಂಡು ಬಂದಿದ್ದ ವಿಕ್ರಮ್ ಬಾತ್ರಾ ಬಳಿಕ ಮತ್ತೊಂದು ಶಿಖರವನ್ನು ವಶಪಡಿಸಿಕೊಳ್ಳಲು ಹೋಗಿದ್ದರು. ಆಗ ಐವರು ಎದುರಾಳಿಗಳನ್ನು ಹೊಡೆದುರಿಳಿಸಿ ದೇಶಕ್ಕಾಗಿ ಮಡಿದರು. ವಿಕ್ರಮ ಭಾತ್ರಾನ ತೇಜಸ್ಸಿಗೆ ಸೇನೆಯ ಪರಮೋಚ್ಛ ಪ್ರಶಸ್ತಿಯಾದ ಪರಮ ವೀರ ಚಕ್ರವನ್ನು ನೀಡಿ ಸರ್ಕಾರ ಗೌರವಿಸಿತು.

Advertisements

Leave a Reply

%d bloggers like this: