Advertisements

ತಪ್ಪು ಉತ್ತರ ಕೊಟ್ಟರೂ ಪರವಾಗಿಲ್ಲ, ಅದೊಂದು ಮಾತು ಹೇಳಬಾರದಿತ್ತು

ಬಿಗ್ ಬಾಸ್ ಮನೆಗೆ ಹೋಗಿ ಬಂದ ಮಂದಿ ಹೊರಗಡೆ ಬಂದ ಮೇಲೆ ಎಡವಟ್ಟು ಮಾಡಿಕೊಂಡಿಲ್ಲ ಅಂದರೆ ನಿದ್ದೆ ಹತ್ತುವುದಿಲ್ಲ ಅನ್ನಿಸುತ್ತದೆ.

ಒಂದಲ್ಲ ಒಂದು ಸೀಸನ್ ತೆಗೆದು ನೋಡಿ, ಸುದ್ದಿಯಾಗದೆ ಉಳಿದವರು ಬೆರಳೆಣೆಕೆಯ ಮಂದಿ. ಒಂದಿಷ್ಟು ಮಂದಿ ಮಾತ್ರ ಪಾಸಿಟಿವ್ ಆಗಿ ಸುದ್ದಿಯಾಗಿದ್ದಾರೆ.

ಇದೀಗ ಸಮೀರ್ ಆಚಾರ್ಯ ಸರದಿ. ಕಾಮನ್ ಮ್ಯಾನ್ ಅನ್ನುವ ಪಟ್ಟ ಹೊತ್ತು ಬಿಗ್ ಬಾಸ್ ಮನೆಗೆ ಹೋದ ಆಚಾರ್ಯ ಮನೆಯೊಳಗಡೆ ಸಾಕಷ್ಟು ಸದ್ದು ಮಾಡಿದ್ದರು. ಜನ ಇಷ್ಟ ಪಟ್ಟಿದ್ದರೂ ಕೂಡಾ. ಸಂಯುಕ್ತಾ ಹೆಗ್ಡೆ ಕೊಟ್ಟ ಪೆಟ್ಟು ಅವರ ಮೇಲೆ ಮತ್ತಷ್ಟು ಕರುಣೆ ಉಕ್ಕುವಂತೆ ಮಾಡಿತು.

ಆದರೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ಸಮೀರ್ ಆಚಾರ್ಯ ಮಾಡಿದ್ದು ಮಾತ್ರ ಸರಣಿ ಎಡವಟ್ಟು.

ನಿವೇದಿತಾ ಗೌಡ ಕಿಕಿ ಚಾಲೆಂಜ್ ಮಾಡಿದಾಗ, ಅದು ಸರಿ ಎಂದು ವಾದ ಮಂಡಿಸಿದ್ದರು. ಆಕೆಯ ಮೇಲೆ ಕೇಸು ಹಾಕುವುದು ಸರಿಯಲ್ಲ ಅಂದಿದ್ದರು. ತಲೆಯಲ್ಲಿ ಬುದ್ದಿ ಇದೆಯೋ ಇಲ್ಲವೋ. ಪೊಲೀಸರೇ ಹೇಳುತ್ತಿದ್ದಾರೆ ಅದು ಕಾನೂನಿಗೆ ವಿರುದ್ಧ ಎಂದು ಆದರೂ ಬೆಂಬಲಕ್ಕೆ ನಿಂತ ಆಚಾರ್ಯರನ್ನು ಏನು ಹೇಳಲಿ.

ಹೋಗ್ಲಿ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಹೋದ ಆಚಾರ್ಯ ಗೊತ್ತಿದಷ್ಟು ಹೇಳಿ ಬಂದಿದ್ದರೆ ಸಾಕಿತ್ತು. ಆದರೆ ತನಗೆಲ್ಲ ಗೊತ್ತು ಅನ್ನುವಂತೆ ಫೋಸು ಕೊಟ್ಟು ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.

ಹೋಗ್ಲಿ ತಪ್ಪು ಉತ್ತರ ಕೊಟ್ಟರೆ ಪರವಾಗಿರಲಿಲ್ಲ. ಪಕ್ಕದಲ್ಲೇ ಕೂತಿದ್ದ ಹೆಂಡತಿ ಉತ್ತರ ಕೊಟ್ಟರೆ ರಾಮಾಯಣ ಓದಿದ್ದು ನಾನಾ ನೀನಾ ಎಂದು ಕೇಳಿದ್ದಾರೆ. ಓದಿದರೆ ಸಾಲದು ಆಚಾರ್ಯರೇ ತಲೆಯಲ್ಲಿ ಸೇವ್ ಮಾಡಿಟ್ಟುಕೊಳ್ಳಬೇಕು ಎಂದು ಜನ ಇದೀಗ ಸಾಮಾಜಿಕ ಜಾಲತಾಣದಲ್ಲಿ ಉಗಿಯುತ್ತಿದ್ದಾರೆ.

ರಾಮಾಯಣ ಧರ್ಮಗ್ರಂಥ ಎನ್ನಿಸಿಕೊಳ್ಳುವ ಮನೆಯಲ್ಲಿ ಆಚಾರ್ಯರ ಹೆಂಡತಿ ರಾಮಾಯಣ ಓದಿಲ್ಲ ಎನ್ನುವುದು ಆಚ್ಚರಿ ಮೂಡಿಸುವ ವಿಷಯ. ಮನೆಯವರಿಗೇ ಓದಿಸದಿದ್ದರೆ ಮತ್ತೆ ಯಾವ ರಾಮನನ್ನು ನಮ್ಮಂಥ ಸಾಮಾನ್ಯರ ಮುಂದೆ ಇಡುತ್ತಿದ್ದೀರಿ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಬೇಕಿತ್ತಾ ಇವೆಲ್ಲಾ……

Advertisements

One Comment on “ತಪ್ಪು ಉತ್ತರ ಕೊಟ್ಟರೂ ಪರವಾಗಿಲ್ಲ, ಅದೊಂದು ಮಾತು ಹೇಳಬಾರದಿತ್ತು

  1. Pingback: ಸಮೀರ್ ಆಚಾರ್ಯರಿಗೆ ಟ್ರೋಲ್ ಅನ್ನು ಸಹಿಸಿಕೊಳ್ಳುವ ಶಕ್ತಿಯೇ ಇಲ್ಲ…. – torrentspree

Leave a Reply

%d bloggers like this: