Advertisements

ಜಾನಕಿಯ ತಾಯಿ ಬದಲಾದ್ರು – ಸೀತಾರಾಮ್ ಟೀಂ ತೊರೆದ್ರ ರಶ್ಮಿ ಹರಿಪ್ರಸಾದ್

ಟಿಎನ್ ಸೀತಾರಾಂ ನಿರ್ದೇಶನದ ಮಗಳು ಜಾನಕಿ ಧಾರವಾಹಿ ದಿನದಿಂದ ದಿನಕ್ಕೆ ಕುತೂಹಲ ಘಟಕ್ಕೆ ಬರುತ್ತಿದೆ. ಒಂದು ಸಲ ನೋಡಿದವರು ಮುಂದಿನ ಕಂತುಗಳನ್ನು ತಪ್ಪಿಸಿಕೊಳ್ಳುವಂತಿಲ್ಲ ಅನ್ನುವಂತೆ ಕಥೆ ಸಾಗುತ್ತಿದೆ.

ಈ ನಡುವೆ ಭಾರ್ಗಿ ಪತ್ನಿಯಾಗಿ, ಜಾನಕಿ ತಾಯಿಯಾಗಿ ರಶ್ಮಿ ಪಾತ್ರದಲ್ಲಿ ನಟಿಸುತ್ತಿದ್ದ ರಶ್ಮಿ ಹರಿಪ್ರಸಾದ್ ಮಗಳು ಜಾನಕಿ ತಂಡ ತೊರೆದಿದ್ದಾರೆ. ಗುರುವಾರ ಪ್ರಸಾರವಾದ ಸಂಚಿಕೆಯಲ್ಲಿ ರಶ್ಮಿ ಪಾತ್ರವನ್ನು ಹೊಸ ಕಲಾವಿದರು ನಿಭಾಯಿಸಿದ್ದಾರೆ.

ಬೆಸ್ಟ್ ಸೀರಿಯಲ್ ಅನ್ನಿಸಿಕೊಂಡಿದ್ದರೂ, ರಶ್ಮಿ ಹರಿಪ್ರಸಾದ್, ಮಗಳು ಜಾನಕಿಯಿಂದ ಹೊರ ನಡೆದಿರುವುದು ಯಾಕೆ ಅನ್ನುವುದೇ ಸದ್ಯದ ಕುತೂಹಲ. ಸೆಟ್ ನಲ್ಲಿ ಸರಿ ಹೊಂದಿ ಬರಲಿಲ್ಲವೋ, ಬೇರೆ ಯಾವುದಾದರೂ ಕಾರಣಗಳಿತ್ತೇ ಅನ್ನುವ ಕುರಿತಂತೆ ರಶ್ಮಿ ಹರಿಪ್ರಸಾದ್ ಅವರೇ ಉತ್ತರಿಸಬೇಕಾಗಿದೆ.

ಮಲಯಾಳಂ ಧಾರವಾಹಿ ಒಂದರ ಕಾರಣಕ್ಕಾಗಿ ಅವರು ಮಗಳು ಜಾನಕಿಯಿಂದ ಹೊರ ನಡೆದಿದ್ದಾರೆ ಅನ್ನುವುದು ಈಗಿನ ಸುದ್ದಿ.

 

This slideshow requires JavaScript.

Advertisements

Leave a Reply

%d bloggers like this: