Advertisements

ಮಜಾ ಟಾಕೀಸ್ ಹೆಸರಲ್ಲಿ ಭರ್ಜರಿ ಮೋಸ – ಇಕ್ಕಟ್ಟಿನಲ್ಲಿ ಸೃಜನ್

ಸೃಜನ್ ಲೋಕೇಶ್… ಕಲಾ ಕುಟುಂಬದಿಂದ ಪ್ರತಿಭಾವಂತ. ತಂದೆ ತಾಯಿಯನ್ನು ಕನ್ನಡಿಗರು ಮೆಚ್ಚಿಕೊಂಡಿದ್ದರು. ಆದರೆ ಸೃಜನ್ ಲೋಕೇಶ್ ಗೆ ಆರಂಭದ ದಿನಗಳು ಹೂವಿನ ಹಾದಿಯಾಗಿರಲಿಲ್ಲ. ಅವರು ಪಟ್ಟ ಕಷ್ಟಗಳನ್ನು ಮತ್ತೊಂದು ದಿನ ಬರೆಯುತ್ತೇವೆ.

ಆದರೆ ಇದೀಗ ಮಜಾ ಸರಣಿಯಲ್ಲಿ ಗೆದ್ದಿರುವ ಸೃಜನ್ ಅವರಿಗೆ ಸಂಕಷ್ಟ ಶುರುವಾಗಿದೆ. ಮಜಾ ಟಾಕೀಸ್ ಕಾರ್ಯಕ್ರಮ ಯಶಸ್ಸು ಕಾಣುತ್ತಿರುವಂತೆ ಹಿತ ಶತ್ರುಗಳ ಕಾಟ ಕೂಡಾ ಶುರುವಾಗಿದೆ. ಕನ್ನಡ ಚಿತ್ರಗಳನ್ನು ಶೋನಲ್ಲಿ ಪ್ರಮೋಟ್ ಮಾಡಲು ಅವರು ಕಾಸು ತೆಗೆದುಕೊಳ್ಳುತ್ತಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ. ಮಾತ್ರವಲ್ಲದೆ ಮಜಾ ಟಾಕೀಸ್ ನಲ್ಲಿ ವೀಕ್ಷಕರಾಗಿ ಪಾಲ್ಗೊಳ್ಳಲು ಕಾಸು ಪಡೆಯಲಾಗುತ್ತಿದೆ ಅನ್ನುವ ದೂರು ಕೇಳಿ ಬಂದಿದೆ.

ಆದರೆ ಇದನ್ನು ಹತ್ತು ಹಲವು ಬಾರಿ ಸೃಜನ್ ನಿರಾಕರಿಸಿದ್ದಾರೆ. ತಮ್ಮ ಕಾರ್ಯಕ್ರಮದಲ್ಲೇ ಅವರು ವಿವರ ಕೊಟ್ಟಿದ್ದಾರೆ. ಆದರೆ ಪರದೆ ಹಿಂದೆ ನಿಂತು, ಮುಖ ಮುಚ್ಚಿ ಕಲ್ಲು ಎಸೆಯುವ ಮಂದಿ ಕಡಿಮೆಯಾಗಿಲ್ಲ. ಯಾರೊಬ್ಬರೂ ಕೂಡಾ ಮುಖ ತೋರಿಸಿ ಸೃಜನ್ ಕಾಸು ತೆಗೆದುಕೊಂಡಿದ್ದಾರೆ ಎಂದು ಹೇಳುವ ಧೈರ್ಯ ಮಾಡಿಲ್ಲ. ಅಲ್ಲಿಗೆ ಸೃಜನ್ ಮೇಲೆ ಬಂದಿರುವುದು ಬರೀ ಆರೋಪ. ಅದರಲ್ಲಿ ಸತ್ಯ ಎಳ್ಳಷ್ಟು ಇಲ್ಲ ಅನ್ನುವುದು ಸ್ಪಷ್ಟ.

ಒಂದು ವೇಳೆ ಸೃಜನ್ ಮಜಾ ಟಾಕೀಸ್ ಹೆಸರಿನಲ್ಲಿ ಕಾಸು ಪಡೆದಿದ್ದರೆ, ಹೌದು ಅವರು ನಮ್ಮಿಂದ ಕಾಸು ತೆಗೆದುಕೊಂಡಿದ್ದಾರೆ ಎಂದು ಯಾರಾದರೊಬ್ಬರು ಹೇಳಬಹುದಿತ್ತು. ಆ ಕೆಲಸವನ್ನು ಯಾರೊಬ್ಬರೂ ಮಾಡಿಲ್ಲ.

ಇನ್ನು ಕಾರ್ಯಕ್ರಮ ನೋಡಲು ಶೂಟಿಂಗ್ ಸ್ಥಳಕ್ಕೆ ಹೋದವರನ್ನೂ ಕೂಡಾ ನಾವು ಮಾತನಾಡಿಸಿದಾಗ ಅಲ್ಲಿ ಉಚಿತ ಪ್ರವೇಶ ಅನ್ನುವ ಸ್ಪಷ್ಟವಾಗಿದೆ.

ಹಾಗಾದರೆ ಇಂಥ ಆರೋಪಗಳಿಗೆ ಕಾರಣ….? ಒಂದು ಸೃಜನ್ ಅವರ ಬೆಳವಣಿಗೆಯನ್ನು ಕಂಡು ಸಹಿಸದ ಮಂದಿ ಈ ಕೆಲಸ ಮಾಡುತ್ತಿರಬೇಕು. ಮತ್ತೊಂದು ಕಾಸು ಮಾಡುವ ಅಡ್ಡ ಕಸುಬಿಗೆ ಯಾರೋ ಇಳಿದಿದ್ದಾರೆ. ಮಜಾ ಟಾಕೀಸ್ ಗೆ ಎಂಟ್ರಿ ಕೊಡಿಸುತ್ತೇವೆ ಎಂದು ಚಂದಾ ಎತ್ತುವ ಮಂದಿ ಹುಟ್ಟಿಕೊಂಡಿರುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ.

ಈ ಎಲ್ಲಾ ಆರೋಪಗಳಿಗೆ ಇಲ್ಲಿ ಸೃಜನ್ ಲೋಕೇಶ್ ಉತ್ತರಿಸಿದ್ದಾರೆ.

Advertisements

Leave a Reply

%d bloggers like this: