Advertisements

ಹುಟ್ಟು ಹಬ್ಬದ ದಿನದಂದು ಕಂಡ ಒಂದು ದೃಶ್ಯ ಸುದೀಪ್ ಕರುಳು ಹಿಂಡಿತ್ತು…

ಮನುಷ್ಯ ಬೆಳೆದಂತೆ ಪಕ್ವವಾಗುತ್ತಾನೆ ಅನ್ನುವುದು ಸುಳ್ಳಲ್ಲ. ಇದಕ್ಕೆ ಬೆಸ್ಟ್ ಉದಾಹರಣೆ ಅಂದರೆ ಅಭಿನಯ ಚಕ್ರವರ್ತಿ, ಅಭಿಮಾನಿಗಳ ಪಾಲಿನ ಕಿಚ್ಚ ಸುದೀಪ್.

ನೀವು ಬೇಕಿದ್ರೆ ಸುದೀಪ್ ಅವರ ಹಳೆಯ ಸಂದರ್ಶನಗಳನ್ನು ನೋಡಿ, ಏನಪ್ಪ ಈ ಮನುಷ್ಯ ಗತ್ತು ಅಂದುಕೊಳ್ಳಬೇಕು. ಈಗಿನ ಸಂದರ್ಶನಗಳನ್ನು ನೋಡಿ ವಂಡರ್ ಫುಲ್ ಅನ್ನುತ್ತೀರಿ. ಹೌದು ಸುದೀಪ್ ಸಿಕ್ಕಾಪಟ್ಟೆ ಬದಲಾಗಿದ್ದಾರೆ. ಅನುಭವ ಬದಲಾಗುವಂತೆ ಮಾಡಿದೆ.

ಕಿಚ್ಚನ ಹುಟ್ಟು ಹಬ್ಬ ಅಂದರೆ ಸಾಕು ಒಡ ಹುಟ್ಟಿದ ಸಹೋದರನ ಹುಟ್ಟಿ ಹಬ್ಬ ಅನ್ನುವಂತೆ ಅಭಿಮಾನಿಗಳು ಚಪ್ಪರ ಹಾಕಿ, ಕಟೌಟ್ ಏರಿಸಿ,ಹಾರ ತಂದು ಕೇಕ್ ಇಟ್ಟು ಸಂಭ್ರಮಿಸುತ್ತಾರೆ.

ಈ ನಡುವೆ ಕಳೆದ ಬಾರಿ ಸುದೀಪ್ ಹುಟ್ಟಿದ ಹಬ್ಬವನ್ನೇ ಆಚರಿಸಿರಲಿಲ್ಲ.ಈ ಬಾರಿ ಅಭಿಮಾನಿಗಳ ಮನ ನೋಯಿಸದಿರಲು ನಿರ್ಧರಿಸಿರುವ ಸುದೀಪ್ ಸಪ್ಟೆಂಬರ್ 2 ರಂದು ಹುಟ್ಟು ಹಬ್ಬ ಆಚರಿಸಲು ನಿರ್ಧರಿಸಿದ್ದಾರೆ. ಆದರೆ ಈ ಹಿಂದಿನಂತೆ ಕೇಕ್ ಹಾರ ತಂದು ಸಂಭ್ರಮಿಸುವ ಹಾಗಿಲ್ಲ. ಜಸ್ಟ್ ಶೇಕ್ ಹ್ಯಾಂಡ್ ಒಂದೇ ಗಿಫ್ಟ್.

ಹಾಗಾದರೆ ಅಭಿನಯ ಚಕ್ರವರ್ತಿ ಅಭಿಮಾನಿಗಳಿಗೆ ಅದ್ಯಾಕೆ ಹೀಗೆ ನಿರಾಶೆ ಮಾಡಿದರು. ಖಂಡಿತಾ ಇದು ನಿರಾಶೆಯಲ್ಲ ಹೃದಯ ವೈಶಾಲ್ಯತೆ. ತನ್ನ ಹುಟ್ಟು ಹಬ್ಬದಂದು ಕಂಡ ಒಂದು ದೃಶ್ಯ ಫಲಿತಾಂಶವಿದು.

ಅದೊಂದು ಹುಟ್ಟು ಹಬ್ಬದ ದಿನದಂದು ಅಭಿಮಾನಿಗಳು ತಂದ ಕೇಕ್, ಹಾಕಿದ ಹಾರ, ಕೊಟ್ಟ ಗಿಫ್ಟ್ ಗಳಿಗೆ ಲೆಕ್ಕವಿಲ್ಲ. ಅವರ ಅಭಿಮಾನಿದ ಅಲೆಯ ಮುಂದೆ ಕಿಚ್ಚ ಕೂಡಾ ಕರಗಿ ಹೋಗಿದ್ದರು. ಆದರೆ ಸಂಭ್ರಮ ಎಲ್ಲಾ ಮುಗಿದ ಮೇಲೆ ನೋಡಿದರೆ ತಂದ ಕೇಕ್ ಗಳನ್ನು ಯಾರೊಬ್ಬರು ತಿಂದಿರಲಿಲ್ಲ. ಮನೆ ಮುಂದೆ ಬಿಸಾಡಿ ಹೋಗಿದ್ದರು. ಅಪಾರ್ಟ್ ಮೆಂಟ್ ಗಳಲ್ಲಿ ಕೆಲಸ ಮಾಡುವವರ ಮಕ್ಕಳು ಅದನ್ನು ಹೆಕ್ಕಿ ತಿನ್ನುತ್ತಿದ್ದರು.

ಈ ದೃಶ್ಯ ಕಂಡ ಕಿಚ್ಚನ ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ಹೀಗಾಗಿ ಅಂದೇ ಅವರು ನಿರ್ಧರಿಸಿದರು. ಅಭಿಮಾನವನ್ನು ಕೆಜಿ ಗಟ್ಟೆಲೆ ಕೇಕ್ ನಲ್ಲಿ ತೋರಿಸುವ ಸಂಪ್ರದಾಯಕ್ಕೆ ಬ್ರೇಕ್ ಹಾಕಬೇಕೆಂದು.

ಹೀಗಾಗಿ ಈ ಬಾರಿಯ ಕಿಚ್ಚೋತ್ಸವದಲ್ಲಿ ಕೇಕ್, ಗಿಫ್ಟ್, ಹಾರಗಳಿಗೆ ಅವಕಾಶವಿಲ್ಲ. ಬದಲು ಈ ಹಣವನ್ನು ಒಳ್ಳೆಯ ಕೆಲಸಗಳಿಗೆ ಬಳಸಿ, ಸಂಕಷ್ಟದಲ್ಲಿರುವ ಮಂದಿ ಕಣ್ಣೀರು ಒರೆಸಿ ಎಂದು ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ.

ನಿಜಕ್ಕೂ ಸುದೀಪ್ ಗ್ರೇಟ್ ಅನ್ನುವುದು ಇದಕ್ಕೆ. ನೂರಾರು ಕೇಜಿ ಕೇಕ್, ಸಾವಿರಾರು ಹಾರ, ಗಿಫ್ಟ್ ಗೆ ಕೊಡುವ ಕಾಸನ್ನು ಸಂಕಷ್ಟದಲ್ಲಿರುವ ಮಂದಿಗೆ ಹಂಚಿದರೆ ಅದೆಷ್ಟು ಮಂದಿಗೆ ಅನುಕೂಲವಾಗುವುದಿಲ್ಲ ಹೇಳಿ. ಸುದೀಪ್ ಅವರಂತೆ ಉಳಿದವರೂ ಯೋಚಿಸಿದರೆ ಹಸಿದ ಹಲವು ಹೊಟ್ಟೆಗಳು ತುಂಬ ಬಹುದಲ್ಲವೇ….

Kiccha

Advertisements

Leave a Reply

%d bloggers like this: