ಮಂಡ್ಯದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆಯಿಲ್ಲ – ಇದು ರಮ್ಯ ಮದರ್ ಸ್ಟೇಟ್ ಮೆಂಟ್

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಮಕಾಡೆ ಮಲಗಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಬೇಕು ಅನ್ನುವುದು ಜೆಡಿಎಸ್ ನಾಯಕರ ಒತ್ತಡವಾಗಿತ್ತು. ಆದರೆ ಕಾಂಗ್ರೆಸ್ ನಾಯಕರು ಹಾಸನ ಮತ್ತು ಮಂಡ್ಯ ಎರಡನ್ನೂ ಜೆಡಿಎಸ್ ಗೆ ಬಿಟ್ಟುಕೊಡಲು ಸಾಧ್ಯವಿಲ್ಲ. ಯಾವುದಾದರೂ ಒಂದನ್ನು ಆಯ್ಕೆ ಮಾಡಿ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಸಂದೇಶ ರವಾನಿಸಿದ್ದರು.

ಜೊತೆಗೆ ಹಾಸನದಲ್ಲಿ ಲೋಕಸಭೆಗೆ ಪ್ರಜ್ವಲ್ ರೇವಣ್ಣ ಕಣಕ್ಕಿಳಿಯುತ್ತಿರುವುದರಿಂದ ದೇವೇಗೌಡರನ್ನು ಮಂಡ್ಯಕ್ಕೆ ಕರೆ ತರಲು ನಿರ್ಧರಿಸಲಾಗಿತ್ತು. ಒಂದು ವೇಳೆ ದೇವೇಗೌಡರು ಸ್ಪರ್ಧಿಸದಿದ್ದರೆ ಶಿವರಾಮೇಗೌಡ, ಐ ಆರ್ ಎಸ್ ತೊರೆದು ಜೆಡಿಎಸ್ ಸೇರಿರುವ ಅಶ್ವಿನಿ ಗೌಡ ಸೇರಿದಂತೆ ಹಲವಾರು ಮಂದಿ ಕಣಕ್ಕಳಿಯರು ಸಜ್ಜಾಗಿದ್ದಾರೆ.

ಈ ನಡುವೆ ಕಾಂಗ್ರೆಸ್ ನಿಂದ ಮಂಡ್ಯದಲ್ಲಿ ಕಣಕ್ಕೆ ಇಳಿಯುವವರಾರು ಅನ್ನುವ ಪ್ರಶ್ನೆ ಎದ್ದಿತ್ತು. ಇದೀಗ ಇದಕ್ಕೆ ತೆರೆ ಬಿದ್ದಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಸಾಮಾಜಿಕ ಜಾಲತಾಣಗಳ ವಿಭಾಗದ ಮುಖ್ಯಸ್ಥೆ ರಮ್ಯಾ ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಿದ್ದಾರಂತೆ. ಇದನ್ನು ರಮ್ಯಾ ತಾಯಿ ರಂಜಿತಾ ಅವರೇ ಸ್ಪಷ್ಟ ಪಡಿಸಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆ ನಿಮಿತ್ತ ಮಂಗಳವಾರ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಸ್ಪರ್ಧೆ ಖಚಿತ ಎಂದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್ ನ ರಾಷ್ಟ್ರೀಯ ಮುಖಂಡರು ರಮ್ಯಾಗೆ ಸೂಚನೆ ನೀಡಿದ್ದಾರೆ. ರಮ್ಯಾ ಕೂಡ ಒಪ್ಪಿಗೆ ಸೂಚಿಸಿದ್ದು ಮಂಡ್ಯಕ್ಕೆ ಭೇಟಿ ನೀಡುವ ರಮ್ಯ ಸ್ಥಳೀಯ ಮುಖಂಡರ ಸಭೆ ನಡೆಸಲಿದ್ದಾರೆ ಎಂದಿದ್ದಾರೆ.

ಮಾತ್ರವಲ್ಲದೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ರಂಜಿತಾ ಸ್ಪಷ್ಟ ಪಡಿಸಿದ್ದಾರೆ.

ರಂಜಿತಾ ಹೇಳಿಕೆಯನ್ನು ಈಗ ಲಘುವಾಗಿ ಸ್ವೀಕರಿಸುವಂತಿಲ್ಲ. ಜೆಡಿಎಸ್ ಜೊತೆ ಹೊಂದಾಣಿಕೆ ಇಲ್ಲ ಅನ್ನುವುದಾದರೆ, ಸಮ್ಮಿಶ್ರ ಸರ್ಕಾರ ಬಹು ದಿನಗಳ ಕಾಲ ಉಳಿಯುವುದಿಲ್ಲ ಅನ್ನುವ ಉಹಾಪೋಹಗಳು ಸತ್ಯವಾಗುವ ಲಕ್ಷಣವಿದೆ. ಹಾಗಂತ ರಮ್ಯ ಮಂಡ್ಯದಲ್ಲಿ ಗೆಲ್ಲುವುದು ಸುಲಭವಿಲ್ಲ. ಅಲ್ಲಿರುವುದೆಲ್ಲಾ ಜೆಡಿಎಸ್ ಶಾಸಕರು. ರಮ್ಯ ಬಗ್ಗೆ ಮಂಡ್ಯ ಕಾಂಗ್ರೆಸ್ ನಾಯಕರಿಗೆ ಕಾರ್ಯಕರ್ತರಿಗೆ ಒಲವಿಲ್ಲ.

ರಮ್ಯ ಮಂಡ್ಯವನ್ನು ಮರೆತು ಹಲವು ವರ್ಷಗಳೇ ಸಂದಿದೆ. ಅಂದ ಮೇಲೆ ಅವರು ಗೆಲ್ಲುವುದಾದರೂ ಹೇಗೆ.

Advertisements

2 Comments on “ಮಂಡ್ಯದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆಯಿಲ್ಲ – ಇದು ರಮ್ಯ ಮದರ್ ಸ್ಟೇಟ್ ಮೆಂಟ್

  1. Pingback: ನಾನು ರಾಜಿನಾಮೆ ಕೊಟ್ಟಿಲ್ಲ..ರಜೆಯಲ್ಲಿದ್ದೇನೆ…. – torrentspree

  2. Pingback: ರಮ್ಯಳಿಗೊಂದು ಬೇಡಿಕೆ ಇಟ್ಟ ತುಪ್ಪದ ಬೆಡಗಿ ರಾಗಿಣಿ – torrentspree

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: