Advertisements

ಕನ್ನಡ ಹೋರಾಟಕ್ಕೆ ರಾಜಕೀಯ ಬಲ… ನಾರಾಯಣಗೌಡ ನೇತೃತ್ವದಲ್ಲಿ ಹೊಸ ಪ್ರಾದೇಶಿಕ ಪಕ್ಷ…?

ಕನ್ನಡಪರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಇದೀಗ ರಾಜಕೀಯ ಪಕ್ಷವಾಗಿ ಬದಲಾಗುವ ಸಾಧ್ಯತೆಗಳು ಗೋಚರಿಸುತ್ತಿದೆ.

ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ಪ್ರತ್ಯೇಕ ಪ್ರಾದೇಶಿಕ ಪಕ್ಷ ಸ್ಥಾಪಿಸಬೇಕು ಅನ್ನುವ ಒತ್ತಡ ಮತ್ತೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ನಾರಾಯಣ ಗೌಡ ಈ ಬಗ್ಗೆ ಗಂಭೀರ ಚಿಂತನೆಯಲ್ಲಿ ತೊಡಗಿದ್ದಾರೆ.ಎಲ್ಲವೂ ಅಂದುಕೊಂಡಂತೆ ನಡೆದರೆ ಲೋಕಸಭಾ ಚುನಾವಣೆ ಬಳಿಕ ನಾರಾಯಣ ಗೌಡ ನೇತೃತ್ವದಲ್ಲಿ ಪ್ರಾದೇಶಿಕ ಪಕ್ಷ ಉದಯಿಸಲಿದೆ.

ಹಾಗಂತ ರಕ್ಷಣಾ ವೇದಿಕೆಯಿಂದ ಪ್ರಾದೇಶಿಕ ಪಕ್ಷ ಸ್ಥಾಪಿಸುವುದು ಹೊಸ ಚಿಂತನೆಯಲ್ಲ. ಹಲವು ವರ್ಷಗಳಿಂದ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಟ್ರಯಲ್ ಅನ್ನುವಂತೆ ಬಿಬಿಎಂಪಿ ಚುನಾವಣೆಯಲ್ಲಿ ಕರವೇಯ ಅಭ್ಯರ್ಥಿಗಳು ಹತ್ತು ವಾರ್ಡ್‌ಗಳಲ್ಲಿ ಕಣಕ್ಕಿಳಿದರು.

ಆದರೆ ಬೆಂಗಳೂರು ಜನ ಆಶೀರ್ವಾದ ಮಾಡಲಿಲ್ಲ. ಹೀಗಾಗಿ ಪಕ್ಷ ಸ್ಥಾಪಿಸುವ ಯೋಚನೆಯಿಂದ ನಾಯಕರು ಹಿಂದೆ ಸರಿದರು.
ಇದೀಗ ಮತ್ತೆ ಈ ಚರ್ಚೆ ಮುನ್ನಲೆಗೆ ಬಂದಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಪ್ರಾದೇಶಿಕ ಪಕ್ಷವಾಗಿ ಕೆಲಸ ಮಾಡುತ್ತಿರುವಂತೆ ಕರ್ನಾಟಕದಲ್ಲೂ ಪ್ರಬಲ ಪ್ರಾದೇಶಿಕ ಪಕ್ಷ ಬೇಕು ಎಂದು ಕರವೇ ಜಿಲ್ಲಾ ಮುಖಂಡರು ಮತ್ತು ರಾಜ್ಯ ನಾಯಕರು ನಾರಾಯಣಗೌಡ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ.

TA Narayana gowda

ಈ ಬಗ್ಗೆ ನಾರಾಯಣ ಗೌಡ ಅವರನ್ನು ‘ಕನ್ನಡಪ್ರಭ’ ಪತ್ರಿಕೆ ಮಾತನಾಡಿಸಿದ್ದು ಪ್ರಾದೇಶಿಕ ಪಕ್ಷ ಸ್ಥಾಪಿಸ ಬೇಕು ಅನ್ನುವ ಆಗ್ರಹ ಬರುತ್ತಿದೆ. ಪದಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸುತ್ತೇವೆ.ಪಕ್ಷ ಸ್ಥಾಪಿಸುವುದು ಸುಲಭವಲ್ಲ. ದೊಡ್ಡ ಪ್ರಮಾಣದ ಆರ್ಥಿಕ ಸಂಪನ್ಮೂಲ ಬೇಕು. ಹೀಗಾಗಿ ಯೋಚಿಸಿ ಹೆಜ್ಜೆ ಇಡುವುದಾಗಿ ಹೇಳಿದ್ದಾರೆ.

Advertisements

Leave a Reply

%d bloggers like this: