Advertisements

ಪತ್ನಿಗೆ ಮತ್ತೊಬ್ಬ ಕಿಸ್ ಕೊಟ್ರೆ ಪತಿ ಸುಮ್ಮನಿರುತ್ತಾನೆಯೇ..? ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಕಿಸ್ಸಿಂಗ್ ಕಥೆ

ಈ ಬಿಗ್ ಬಾಸ್ ಅನ್ನುವ ಶೋ ಕಿರಿಕ್ ಎಬ್ಬಿಸದಿದ್ದರೆ TRP ಬರುವುದಾದರು ಹೇಗೆ. ಅದರಲ್ಲೂ ಒಂದಿಷ್ಟು ಮಸಾಲೆ ಇದ್ರೆ ಮಾತ್ರ ಶೋ ಜನರಿಗೆ ಇಷ್ಟವಾಗುತ್ತದೆ. ಹೀಗಾಗಿಯೇ ವಾಹಿನಿ ಮಂದಿ ಕೂಡಾ ಉಪ್ಪು,ಖಾರ ಹಾಕಿ ಮಸಾಲ ಅರೆದು ಶೋ ರೆಡಿ ಮಾಡ್ತಾರೆ.

ಕನ್ನಡ ಬಿಗ್ ಬಾಸ್ ಮನೆಯಲ್ಲಿ ಕಿಸ್ಸಿಂಗ್ ಕಥೆಗಳು ಹಲವು ರಾಡಿ ರಂಪಾಟ್ಟೆ ಕಾರಣವಾಗಿದೆ. ಇದೀಗ ತೆಲುಗು ಬಿಗ್ ಬಾಸ್ ಸರದಿ.

ನಟ ನಾಣಿ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ತೆಲುಗಿನ ಬಿಗ್ ಬಾಸ್ ಶೋನಲ್ಲಿ ಬಿಗ್ ಬಾಸ್ ನೀಡಿದ ಸೀಕ್ರೆಟ್ ಕಿಸ್ ಟಾಸ್ಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮಾತ್ರವಲ್ಲದೆ ಬಿಗ್ ಬಾಸ್ ಮನೆಯಲ್ಲಿ ಸಹ ಸ್ಪರ್ಧಿಯಿಂದ ವಿವಾಹಿತ ಮಹಿಳೆಗೆ ಮುತ್ತು ನೀಡಿದ್ದು ಇದನ್ನು ಕಂಡಿರುವ ಪತಿ ಕೂಡಾ ಗರಂ ಆಗಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಯಾಗಿರುವ ಗಾಯಕಿ, ಕಂಠದಾನ ಕಲಾವಿದೆ ಗೀತಾ ಮಾಧುರಿ ಅವರಿಗೆ ಕಿಸ್ ಮಾಡುವಂತೆ ಸ್ಪರ್ಧಿ ರೋಲ್ ರಿಡಾಗೆ ಬಿಗ್ ಬಾಸ್ ನಿಂದ ಸೀಕ್ರೆಟ್ ಟಾಸ್ಕ್ ನೀಡಲಾಗಿತ್ತು. ಬಿಗ್ ಬಾಸ್ ಆದೇಶದಂತೆ ರೋಲ್ ರಿಡಾ ಗೀತಾ ಅವರ ಹಣೆಗೆ ಮುತ್ತು ನೀಡಿದ್ದರು.

ಈ ವೇಳೆ ಪಕ್ಕದಲ್ಲಿದ್ದ ಮತ್ತೊಬ್ಬ ಸ್ಪರ್ಧಿ ಸಾಮ್ರಾಟ್ ಸುಮ್ಮನಿರಬೇಕು ತಾನೇ. ಟಾಸ್ಕ್ ಇಲ್ಲದಿದ್ದರೂ ಸಾಮ್ರಾಟ್ ಕೂಡಾ ಗೀತಾ ಕೆನ್ನೆಗೆ ಮುತ್ತು ಕೊಟ್ಟಿದ್ದಾನೆ. ಇದೇ ಮುತ್ತು ಇದೀಗ ವಿವಾದಕ್ಕೆ ಕಾರಣವಾಗಿದೆ.

ಟಾಸ್ಕ್ ನಲ್ಲಿ ಇಲ್ಲದಿದ್ದರು ಸಾಮ್ರಾಟ್ ಗೀತಾ ಅವರಿಗೆ ಕಿಸ್ ಮಾಡಿದ್ದು ಸರಿಯಲ್ಲ. ವಿವಾಹಿತ ಮಹಿಳೆಗೆ ಹೀಗೆ ಮುತ್ತು ನೀಡುವ ಮುನ್ನ ಸಾಮ್ರಾಟ್ ಯೋಚಿಸಬೇಕು ಅನ್ನುತ್ತಿದ್ದಾರೆ ನೆಟ್ಟಿಗರು. ಆದರೆ ಗೀತಾ ಇವರಿಬ್ಬರ ಕಿಸ್ ಸ್ವೀಕರಿಸಿ ಸೈಲೆಂಟ್ ಆಗಿದ್ದಾರೆ.
ಈ ಎಪಿಸೋಡ್ ನೋಡಿದ ಗೀತಾ ಅವರ ಪತಿ ಕೂಡ ಕೆಂಡಾ ಮಂಡಲರಾಗಿದ್ದು, ಬಿಗ್ ಬಾಸ್ ಶೋ ವಿರುದ್ಧ ಅವರು ಗರಂ ಆಗಿದ್ದಾರೆ.

Advertisements

Leave a Reply

%d bloggers like this: