Advertisements

ವಿಲನ್ ಆಡಿಯೋ ಲಾಂಚ್ – ಅನುಶ್ರೀ Anchoring ನೋಡಿ ಕೆಂಡಾಮಂಡಲರಾದ ರೆಬೆಲ್ ಸ್ಟಾರ್

ಅನುಶ್ರೀ ಯಾರಿಗೆ ಇಷ್ಟವಿಲ್ಲ ಹೇಳಿ. ಅವರ Anchoring ಶೈಲಿ ನೋಡಿಯೇ ಕರ್ನಾಟಕ ಅವರಿಗೆ ಫಿದಾ ಆಗಿದೆ.

ಆದರೆ ವಿಲನ್ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಅನುಶ್ರೀ ಎಡವಟ್ಟು ಮಾಡಿಕೊಂಡಿದ್ದಾರೆ. ಕಾರ್ಯಕ್ರಮದ ನಡುವೆ ಪುನೀತ್ ಅವರ ನಟನೆಯ ಭಕ್ತ ಪ್ರಹ್ಲಾದ ಚಿತ್ರದ ಕುರಿತಂತೆ ಅನುಶ್ರೀ ಮಾತನಾಡುತ್ತಿದ್ದರು. ಈ ವೇಳೆ ಕಲವೊಂದು ಆಫ್ ದಿ ರೆಕಾರ್ಡ್ ಪಾಯಿಂಟ್ ಗಳನ್ನು ಅನುಶ್ರೀ ಪ್ರಸ್ತಾಪಿಸಿದರು.

ಅನುಶ್ರೀ ಇವುಗಳನ್ನು ಹೇಳುತ್ತಿದ್ದಂತೆ ವೇದಿಕೆ ಕೆಳಗಡೆ ಕೂತಿದ್ದ ಅಂಬರೀಶ್ ಅನುಶ್ರೀ ಅವರನ್ನು ತರಾಟೆಗೆ ತೆಗೆದುಕೊಂಡರು.ನಿನ್ನ ಯಾರು ಇಲ್ಲಿ ಕರೆಸಿದವರು,ಯಾಕಮ್ಮ ಅದೆಲ್ಲಾ ಹೇಳಿದೆ.ನಾನೇ ಬಂದು ಅದನ್ನು ಹೇಳಬೇಕು ಅಂದುಕೊಂಡಿದ್ದೆ.ನೀನು ಎಲ್ಲಾ ಹೇಳಿ ಬಿಟ್ಟರೆ.ನಾವು ಬಂದಿರೋದು ಎನೋ ಹೇಳೋದಿಕ್ಕೆ.ನಿನ್ನ ಮಾತು ಕೇಳಿಕೊಂಡು ಇರಲು ಅಲ್ಲ. ಪರವಾಗಿಲ್ಲ ಮುಂದುವರಿಸು,ನಾನು ಬೇರೆ ಹೇಳ್ತಿನಿ ಎಂದು ಕೂಲ್ ಆದರು.

ಹಾಗಂತ ಅಂಬರೀಶ್ ಗಂಭೀರವಾಗಿ ಹೇಳಿದ ಮಾತು ಇದಲ್ಲ. ಅಂಬರೀಶ್ ಪ್ರೀತಿಯಿಂದ ಹೊಗಳುವ ಪರಿಯೇ ಹೀಗೆ. ರೆಬೆಲ್ ಸ್ಟಾರ್ ಬೈಯುವ ಶೈಲಿಯಲ್ಲಿ ಹೊಗಳಿದರೆ ಚೆಂದ.ಹೀಗೆ ಅನುಶ್ರೀಯವರ ಕಾಲನ್ನು ಅಂಬರೀಶ್ ಎಳೆದಿದ್ದಾರೆ.

Advertisements

One Comment on “ವಿಲನ್ ಆಡಿಯೋ ಲಾಂಚ್ – ಅನುಶ್ರೀ Anchoring ನೋಡಿ ಕೆಂಡಾಮಂಡಲರಾದ ರೆಬೆಲ್ ಸ್ಟಾರ್

  1. Pingback: ನಿಖಿಲ್ ಆಯ್ತು..ಇದೀಗ ಅಂಬಿ ಪುತ್ರನ ಜೊತೆ ರಚಿತಾ….. – torrentspree

Leave a Reply

%d bloggers like this: