Advertisements

ಇರುವುದೆಲ್ಲವ ಬಿಟ್ಟು – ಮೈ ಚಳಿ ಬಿಟ್ಟು ನಟಿಸಿದ ಮೇಘನಾ ರಾಜ್

ಕೆಲವು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಮೇಘನಾ ರಾಜ್ ಪಡ್ಡೆ ಹುಡುಗರ ನಿದ್ದೆಗೆಡಿಸಲು ಆನ್ ಲೈನ್ ಗೆ ಲಗ್ಗೆ ಇಟ್ಟಿದ್ದಾರೆ. ಅವರ ನಟನೆಯ ‘ಇರುವುದೆಲ್ಲವ ಬಿಟ್ಟು’ ಚಿತ್ರದ ಹಾಡೊಂದು ಯೂ ಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಲಾರಂಭಿಸಿದೆ.

ಇರುವುದೆಲ್ಲವ ಬಿಟ್ಟು ಕವಿರಾಜ್ ಬರೆದು, ಸಂಜಿತ್ ಹೆಗ್ಡೆ ಹಾಡಿರುವ  “ಕಣ್ಣುಗಳೇ ಹೇಳಿ ನಿಮ್ಮ ಕೆಲಸ ಏನು ಅಂತಾ” ಹಾಡಿನಲ್ಲಿ  ಮೇಘನಾ ಸಖತ್‌ ಹಾಟ್‌ ಆಗಿ ನಟಿಸಿದ್ದು, ಚಿತ್ರ ಪೂರ್ತಿ ಪಡ್ಡೆಗಳ ನಿದ್ದೆ ಕೆಡಿಸುವ ನಟನೆಯ ಮುನ್ಸೂಚನೆ ಕೊಟ್ಟಿದ್ದಾರೆ.

Photo - youtube
Iruvudellava Bittu Kannada Moive

ಈ ಚಿತ್ರ ಕಾರ್ಪೋರೇಟ್‌ ಲೈಫ್‌ನ ಬದುಕನ್ನು ತೆರೆದಿಡೋ ಕಥಾ ಹಂದರ ಹೊಂದಿದೆ.ಕಾಂತಾ ಕನ್ನಲಿ ನಿರ್ದೇಶನ ಮಾಡಿರುವ ಈ ಸಿನಿಮಾಗೆ ದೇವರಾಜ್‌ ದಾವಣಗೆರೆ ಹಣ ಹಾಕಿದ್ದಾರೆ. ಶ್ರೀಧರ್ ಸಂಭ್ರಮ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ತಮ್ಮ ಪ್ರತಿಭೆಯಿಂದ ಸಾಕಷ್ಟು ಪಾತ್ರಗಳಿಗೆ ನ್ಯಾಯ ಒದಗಿಸಿರುವ ಮೇಘನಾ ಇದೇ ಮೊದಲ ಬಾರಿ ತಿಲಕ್‌ ಜೊತೆ ಇರುವುದೆಲ್ಲವ ಬಿಟ್ಟು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisements

Leave a Reply

%d bloggers like this: