Advertisements

ಯಶ್ ಮನೆಯಲ್ಲಿ ಇವತ್ತು ಗಡ್ಡ ತೆಗೆಯುವ ಕಾರ್ಯಕ್ರಮ…

ಚಂದನವನದಲ್ಲಿ ಯಶ್ ಗಡ್ಡದ ಚರ್ಚೆಯಾದಷ್ಟು ಮತ್ಯಾರ ಗಡ್ಡದ ಬಗ್ಗೆ ಚರ್ಚೆಯಾಗಿರಲಿಲ್ಲ. ಟಿವಿ ವಾಹಿನಿಗಳ ಸಿನಿಮಾ ಕಾರ್ಯಕ್ರಮಗಳಲ್ಲಿ ಸಾಕಷ್ಟು ಸಗ್ಮೆಂಟ್ ಗಳು ಯಶ್ ಗಡ್ಡದ ಕುರಿತಾಗಿಯೇ ಪ್ರಸಾರವಾಗಿದೆ. ಅಷ್ಟೇ ಮಾತ್ರವಲ್ಲ ರೆಬೆಲ್ ಸ್ಟಾರ್ ಅಂಬರೀಶ್ ಕೂಡಾ ಯಶ್ ಗಡ್ಡದ ಬಗ್ಗೆ ಕಮೆಂಟ್ ಮಾಡಿದ್ರು ಅಂದ್ರೆ, ಗಡ್ಡ ಅದೆಷ್ಟು ಸದ್ದು ಮಾಡಿರಬೇಕು.

ಅದರಲ್ಲೂ ರಾಧಿಕಾ ಗಂಡ ಅದ್ಯಾವ ಗಂಡ ತೆಗೆಯುವ ಕಾಲ ಬರುತ್ತದೋ ಎಂದು ಕಾದಿದ್ದರು. ಇದೀಗ ಎರಡು ವರ್ಷಗಳ ನಂತರ ರಾಕಿಂಗ್ ಸ್ಟಾರ್ ಯಶ್ ಕೊನೆಗೂ ತಮ್ಮ ಉದ್ದನೆಯ ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ.

ಯಶ್ ತಮ್ಮ ಗಡ್ಡ ಹಾಗೂ ಉದ್ದನೆಯ ಕೂದಲಿಗೆ ಕತ್ತರಿ ಹಾಕುತ್ತಿರುವ ವಿಡಿಯೋವನ್ನು ರಾಧಿಕಾ ಪಂಡಿತ್ ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಇದೇ ವಿಡಿಯೋದಲ್ಲಿ ರಾಧಿಕಾ ಈಗ ನನಗೆ ತುಂಬಾ ಖುಷಿಯಾಗುತ್ತಿದೆ. ನನ್ನ ಜೊತೆ ನೀವೆಲ್ಲರೂ ಕಾಯುತ್ತಿರುವ ಉದ್ದನೆಯ ಕೂದಲು ಹಾಗೂ ಗಡ್ಡಕ್ಕೆ ಮುಕ್ತಿ ಸಿಗುತ್ತಿದೆ. ನನ್ನ ಗಂಡ ಹೇಗೆ ಕಾಣಿಸುತ್ತಿದ್ದರು ಎಂದು ನನಗೆ ನೆನಪಿಲ್ಲ. ಸದ್ಯ ಕಿರಾತಕ ಚಿತ್ರತಂಡಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.

ಎರಡು ವರ್ಷದಿಂದ ಜೊತೆಗಿದ್ದ ಗಡ್ಡ, ಕೂದಲಿಗೆ ವಿದಾಯ ಹೇಳಲು ತುಂಬಾ ಬೇಸರ ಮಾಡಿಕೊಂಡಿರುವ ಯಶ್, ನನ್ನ ಗಡ್ಡ ತೆಗೆಯಲು ಇಷ್ಟವಿಲ್ಲ. ಎರಡು ವರ್ಷದಿಂದ ನನ್ನ ಗಡ್ಡ ನನ್ನ ಜೊತೆಯಲ್ಲೇ ಇತ್ತು. ನನ್ನ ಗಡ್ಡ ಬೇರೆಯವರಿಗೆ ಇಷ್ಟವಿಲ್ಲ. ಹಾಗಾಗಿ ನಾನು ಗಡ್ಡ ತೆಗೆಯುತ್ತಿದ್ದೇನೆ ಎಂದಿದ್ದಾರೆ.

ಅಂದ ಹಾಗೇ ಯಶ್ ಕೆಜಿಎಫ್ ಚಿತ್ರಕ್ಕಾಗಿ ಉದ್ದನೆಯ ಗಡ್ಡ ಹಾಗೂ ತಲೆ ಕೂದಲನ್ನು ಬೆಳೆಸಿಕೊಂಡಿದ್ದರು.

Advertisements

Leave a Reply

%d bloggers like this: