Advertisements

ಸದಾನಂದಗೌಡರೇ ಫ್ಲೈಟ್ ಚಾರ್ಜ್ ಜಾಸ್ತಿಯಾದರೆ ರೇವಣ್ಣ ಏನು ಮಾಡಲು ಸಾಧ್ಯ..?

ನಮ್ಮ ರಾಜಕಾರಣಿಗಳು ಕೆಲವೊಮ್ಮೆ ನಮ್ಮನ್ನು ಹೇಗೆ ಬಕ್ರ ಮಾಡುತ್ತಾರೆ ಅನ್ನುವುದೇ ಗೊತ್ತಾಗುವುದಿಲ್ಲ.

ಇದಕ್ಕೊಂದು ನಿದರ್ಶನ ಕೇಂದ್ರ ಸಚಿವ ಡಿವಿ ಸದಾನಂದಗೌಡ ರಾಜ್ಯ ಲೋಕೋಪಯೋಗಿ ಸಚಿವ ರೇವಣ್ಣ ಅವರಿಗೆ ಬರೆದಿರುವ ಪತ್ರ. ಇಲ್ಲೇ ಕೆಳಗಡೆ ಆ ಪತ್ರವಿದೆ.

39959090_1860421030693535_7602317999134998528_n

ಸದಾನಂದ ಗೌಡ ಅವರು ಆಗ್ರಹಿಸಿರುವ ಎಲ್ಲಾ ಅಂಶಗಳು ಸರಿ ಇದೆ. ಆದರೆ ಕೇಂದ್ರದಿಂದ ಸಹಾಯಧನ ಅನ್ನುವುದು ಬಂದರೆ ತಾನೇ ರಾಜ್ಯ ಏನಾದರೂ ಮಾಡಲು ಸಾಧ್ಯ. ಅದನ್ನು ಬಿಟ್ಟು ಕೇಂದ್ರದಿಂದ ಒಂದು ರೂಪಾಯಿ ಕೊಡದಿದ್ದರೆ ನಮ್ಮನಾಳುವ ಮಂದಿಯಾದರು ಏನು ಮಾಡಿಯಾರು.

ಹೋಗ್ಲಿ ರಾಜ್ಯದಿಂದ ಪ್ರಸ್ತಾಪವೇ ಬರಲಿಲ್ಲ ಅಂದುಕೊಳ್ಳೋಣ.

ಅಲ್ಲ ವಿಮಾನಯಾನವಂತೂ ಯಾರಿಗೂ ಕೈಗೆಟುಕದ ವಿಚಾರವಾಗಿದೆ ಅಂದಿರುವುದೇ ನಮಗೆಲ್ಲಾ ಮಿಲಿಯನ್ ಡಾಲರ್ ಪ್ರಶ್ನೆ. ಮಂಗಳೂರು ಬೆಂಗಳೂರು ನಡುವೆ ಬಸ್ ಇಲ್ಲ, ರೈಲು ಓಡಾಡುತ್ತಿಲ್ಲ ಅನ್ನುವುದನ್ನೇ ಬಂಡವಾಳ ಮಾಡಿಕೊಂಡಿರುವ ವಿಮಾನ ಸಂಸ್ಥೆಗಳು ದುಪ್ಪಟ್ಟು ವಸೂಲಿ ಮಾಡುತ್ತಿದೆ. ಬಾಯಿಗೆ ಬಂದ ದರವನ್ನು ವಿಧಿಸುತ್ತಿದೆ.

ಎಲ್ಲವೂ ಸರಿ ಇದ್ದಾಗ ಇದ್ದ ದರಕ್ಕೂ, ಎಲ್ಲವೂ ಸರಿ ಇಲ್ಲ ಅಂದಾಗ ವಿಧಿಸುತ್ತಿರುವ ದರಕ್ಕೆ ಸಾಕಷ್ಟು ವ್ಯತ್ಯಾಸವಾಗಿದೆ. ಹಾಗೆಲ್ಲ ಮಾಡಬಾರದು ಎಂದು ವಿಮಾನಯಾನ ಸಂಸ್ಥೆಗಳ ಕಿವಿ ಹಿಂಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು ತಾನೇ. ಕೇಂದ್ರ ಸಚಿವರಾಗಿರುವ ಸದಾನಂದಗೌಡರು ಕೇಂದ್ರ ವಿಮಾನಯಾನ ಸಚವರಿಗೆ ಹೋಗಿ ತನ್ನೂರಿನಲ್ಲಿ ಆಗುತ್ತಿರುವ ಸಮಸ್ಯೆಯನ್ನು ವಿವರಿಸಬೇಕು ತಾನೇ.

ಕೇಂದ್ರ ಸರ್ಕಾರ ವಿಮಾನ ಯಾನ ಸಂಸ್ಥೆಗಳ ಕಿವಿ ಹಿಂಡಿದ್ದರೆ ತುರ್ತಾಗಿ ಮಂಗಳೂರು ಬೆಂಗಳೂರು ನಡುವೆ ಓಡಾಡಬೇಕಾಗಿದ್ದ ಮಂದಿ ಹೋಗಿ ಬರುತ್ತಿದ್ದರು. ಇದೀಗ ತುರ್ತು ಕೆಲಸವಿದ್ದರೂ ವಿಮಾನ ಹತ್ತುವುದೇ ಅಸಾಧ್ಯವಾಗಿದೆ. ಇದು ಯಾವ ನ್ಯಾಯ ಸರ್.

Advertisements

Leave a Reply

%d bloggers like this: