Advertisements

ನಿರ್ಮಲ ನಮ್ಮ MPಯಲ್ಲ…ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಕೊಟ್ಟಿದ್ದಕ್ಕೆ ಕನ್ನಡಿಗರಿಗೆ ಸಿಕ್ಕ ಉಡುಗೊರೆಯೇನು..?

ಕನ್ನಡಿಗರಿಗೆ ನೆನಪಿರಬಹುದು..ಹಲವು ಸಲ ವೆಂಕಯ್ಯ ನಾಯ್ಡು ರಾಜ್ಯದಿಂದ ರಾಜ್ಯಸಭೆ ಆಯ್ಕೆ ಹೋಗಿದ್ದರು. ಆದರೆ ಕಳೆದ ಬಾರಿ ಅದ್ಯಾಕೋ ವೆಂಕಯ್ಯ ನಾಯ್ಡು ಕನ್ನಡಿಗರ ಕೆಂಗಣ್ಣಿಗೆ ಗುರಿಯಾದರು. ವೆಂಕಯ್ಯ ಸಾಕಯ್ಯ ಅನ್ನುವ ಆಂದೋಲನ ಶುರುವಾಯ್ತು.

ಸಾಮಾಜಿಕ ಜಾಲತಾಣದಲ್ಲಿ ಹೋರಾಟ, ಆಕ್ರೋಶ ನೋಡಿದ ಬಿಜೆಪಿ ಅವರನ್ನು ಕರ್ನಾಟಕದಿಂದ ಕರ್ನಾಟಕದಿಂದ ಕಣಕ್ಕಿಳಿಸಲಿಲ್ಲ. ತೆಲುಗು ವ್ಯಕ್ತಿಯನ್ನು ಮತ್ತೆ ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸಿದರೆ ಎಡವಟ್ಟು ಗ್ಯಾರಂಟಿ ಎಂದು ಅವರನ್ನು ಬೇರೆ ರಾಜ್ಯದಿಂದ ಆಯ್ಕೆ ಮಾಡಲಾಯ್ತು.

ಬದಲಾಗಿ ಬಂದವರು ನಿರ್ಮಲಾ ಸೀತಾರಾಮನ್. ಪರವಾಗಿಲ್ಲ ತಮಿಳುನಾಡಿನವರು, ಪ್ರಾದೇಶಿಕ ತಾರತಮ್ಯ ಮಾಡಲಾರರು ಎಂದು ಭಾವಿಸಲಾಗಿತ್ತು. ಬಳಿಕ ಅವರನ್ನು ನಾವೇ ಗೆಲ್ಲಿಸಿದ ಶಾಸಕರು ಮತ ಚಲಾಯಿಸಿ ರಾಜ್ಯಸಭೆಗೆ ಕಳುಹಿಸಿ ಕೊಟ್ಟರು.

ಜುಲೈ 2016ರ ರಲ್ಲಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ಕನ್ನಡಿಗರಿಂದ ಭೇಷ್ ಅನ್ನಿಸಿಕೊಂಡರು. ಬಳಿಕ ಅವರು ದೇಶದ ರಕ್ಷಣಾ ಮಂತ್ರಿಯೂ ಆದರು. ಕರ್ನಾಟಕದವರು ರಕ್ಷಣಾ ಮಂತ್ರಿಯಾದರು ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಂಡೆವು.

ರಕ್ಷಣಾ ಮಂತ್ರಿಯಾಗಿ ಖಾತೆಗೆ ನ್ಯಾಯವನ್ನೂ ಕೂಡಾ ಅವರು ಒದಗಿಸುತ್ತಿದ್ದಾರೆ.

ಆದರೆ ಕೊಡಗಿನಲ್ಲಿ ಪ್ರವಾಹ ಬಂತು, ರಾಜ್ಯದಿಂದ ಆಯ್ಕೆಯಾದ ರಾಜ್ಯಸಭೆ ಸದಸ್ಯೆ ನಿರ್ಮಲಾ ಸೀತಾರಾಮನ್ ಕರ್ನಾಟಕದ ಕಡೆಗೆ ಮುಖ ಮಾಡಲೇ ಇಲ್ಲ. ನನ್ನನ್ನು ಗೆಲ್ಲಿಸಿದ ರಾಜ್ಯ ಸಂಕಷ್ಟದಲ್ಲಿದೆ ಅನ್ನುವುದನ್ನು ಅವರು ಗಮನಿಸಲೇ ಇಲ್ಲ. ಅನ್ಯ ಭಾಷಿಕರನ್ನು ರಾಜ್ಯದಿಂದ ಕಳುಹಿಸಿದ ತಪ್ಪಿಗೆ ನಾವೇ ಕಣ್ಣೀರು ಹಾಕಬೇಕಾಯ್ತು. ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾದವರಿಗೆ ರಾಜ್ಯದ ದುಸ್ಥಿತಿ ಬೇಡವಾಯ್ತೇ ಅನ್ನುವಂತಾಯ್ತು.

ಸರಿ ಮಳೆ ಮುಗಿದ ಮೇಲೆ ಮೇಡಂ ಬಂದ್ರು, ಆದರೆ ಮಾಡಿದ್ದೇನು..ಸಂಸದರ ನಿಧಿಯಿಂದ ಒಂದು ಕೋಟಿ ಬಿಟ್ಟರೆ ಏನೂ ಸಿಗಲಿಲ್ಲ.

39957070_1780234832030682_3645625492758855680_n

ಹೋಗ್ಲಿ ನನ್ನ ರಾಜ್ಯ ಅನ್ನುವ ಪ್ರೀತಿ ತೋರಿದರೆ ಇಲ್ಲ. ಬದಲಿಗೆ ಪ್ರತಾಪ್ ಸಿಂಹ ಸಿಕ್ಕಾಪಟ್ಟೆ ಒತ್ತಡ ಹೇರಿದರು ಅದಕ್ಕೆ ಬಂದೆ ಅಂದಿದ್ದಾರೆ.

ಅರೆ, ನಿಮ್ಮನ್ನು ಆಯ್ಕೆ ಮಾಡಿದ ರಾಜ್ಯದ ದುಸ್ಥಿತಿ ನೋಡಲು ಮತ್ತೊಬ್ಬ ಸಂಸದರು ಬೇಡುವಂತಾಯ್ತಲ್ಲ. ಪ್ರತಾಪ್ ಸಿಂಹರಿಗಾಗಿ ಬಂದ್ರಿ ಅನ್ನುವುದಾದರೆ ಕನ್ನಡಿಗರು ನಿಮಗೇನು ಅನ್ನುವುದನ್ನು ನೀವೇ ಹೇಳಬೇಕು.

ಈಗ ಹೇಳಿ ಮುಂದಿನ ಚುನಾವಣೆಯಲ್ಲಿ ನಿರ್ಮಲ ಸೀತಾರಾಮನ್ ನಮ್ಮ ರಾಜ್ಯವನ್ನು ಪ್ರತಿನಿಧಿಸಬೇಕಾ…ಬದಲಿಗೆ ಕರ್ನಾಟಕದಿಂದ ಕನ್ನಡಿಗರೇ ಆಯ್ಕೆಯಾದವರೇ ಚೆಂದ ಅಲ್ವ…?

Advertisements

Leave a Reply

%d bloggers like this: