Advertisements

ಮಾಲೆ ಪಟಾಕಿ ಮೇಲೆ ನಿಷೇಧ ಹೇರುತ್ತಾರಂತೆ ಮೋದಿ

ದೀಪಾವಳಿ ಹಬ್ಬ ಸೇರಿದಂತೆ ಇತರ ಸಂದರ್ಭದಲ್ಲಿ ಸಿಡಿಸುವ ಪಟಾಕಿಯಿಂದ ಸಮಸ್ಯೆಯಾಗುತ್ತಿದೆ. ಹೀಗಾಗಿ ಪಟಾಕಿಗಳ ಮೇಲೆ ರಾಷ್ಟ್ರೀಯ ನಿಷೇಧ ಹೇರಬೇಕೆಂಬ ಒತ್ತಾಯ ಸಾಕಷ್ಟು ಸಮಯದಿಂದ ಕೇಳಿ ಬಂದಿದೆ.

ಈ ಸಂಬಂಧ ಸಲ್ಲಿಕೆಯಾದ ದೂರನ್ನು ಸುಪ್ರಿಂಕೋರ್ಟ್ ವಿಚಾರಣೆ ಕೂಡಾ ನಡೆಸುತ್ತಿದೆ. ಮಾಲಿನ್ಯ ತಡೆಗಾಗಿ ಎಲ್ಲಾ ರೀತಿಯ ಪಟಾಕಿ ಉತ್ಪಾದನೆ, ಮಾರಾಟ ಹಾಗೂ ಬಳಕೆ ಮೇಲೆ ನಿಷೇಧ ಕುರಿತ ಅರ್ಜಿಯ ವಿಚಾರಣೆ ಸರ್ವೋಚ್ಛ ನ್ಯಾಯಾಲಯದಲ್ಲಿ ಮುಂದುವರಿದಿದೆ.

ಸುಳ್ಳುಗಾರ ಪಿಣರಾಯಿ ವಿಜಯನ್..? ಯುಎಇ 700 ಕೋಟಿ ಕೊಟ್ಟೇ ಇಲ್ಲ…!

ಈ ಕುರಿತಂತೆ ಕೇಂದ್ರ ಸರ್ಕಾರಕ್ಕೆ ನೋಟೀಸ್ ಕೂಡಾ ರವಾನೆಯಾಗಿತ್ತು, ಇದಕ್ಕೆ ಅಫಿದವಿತ್ ಸಲ್ಲಿಸಿರುವ ಕೇಂದ್ರ ಸರ್ಕಾರ ಪಟಾಕಿ ಮೇಲೆ ಸಂಪೂರ್ಣ ನಿಷೇಧ ಸಾಧ್ಯವಿಲ್ಲ. ಬದಲಾಗಿ ಪರಿಸರ ಸ್ನೇಹಿ ಪಟಾಕಿ ಉತ್ಪಾದನೆ ಹಾಗೂ ಮಾಲೆ ಪಟಾಕಿ ಉತ್ಪಾದನೆ ಮೇಲಿನ ನಿಷೇಧಕ್ಕೆ ಸಮ್ಮತಿಸಿದೆ.

ಜೊತೆಗೆ ಪರಿಸರ ಮಾಲಿನ್ಯ ತಡೆಗಾಗಿ 5 ಸಲಹೆಗಳನ್ನು ಕೂಡಾ ಕೇಂದ್ರ ಸರ್ಕಾರ ಕೊಟ್ಟಿದೆ. ಕೈಗಾರಿಕಾ ಸಂಶೋಧನೆ ಹಾಗೂ ವಿಜ್ಞಾನ ಮಂಡಳಿ, ರಾಷ್ಟ್ರೀಯ ಪರಿಸರ ಸಂಶೋಧನಾ ಸಂಸ್ಥೆ, PESO ಹಾಗೂ CPCB ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತೇವೆ ಎಂದಿದೆ.

Advertisements

Leave a Reply

%d bloggers like this: