ಸುಳ್ಳುಗಾರ ಪಿಣರಾಯಿ ವಿಜಯನ್..? ಯುಎಇ 700 ಕೋಟಿ ಕೊಟ್ಟೇ ಇಲ್ಲ…!

ಯುಎಇ ಕೊಟ್ಟ 700 ಕೋಟಿ ಹಣವನ್ನು ಕೇಂದ್ರ ಸರ್ಕಾರ ಸ್ವೀಕರಿಸುತ್ತಿಲ್ಲ ಅನ್ನುವ ಆರೋಪ ಕೆಲ ದಿನಗಳ ಹಿಂದೆ ಸಾಕಷ್ಟು ಸುದ್ದಿ ಮಾಡಿತ್ತು. ಕೇರಳ ಸಂಕಷ್ಟದಲ್ಲಿದೆ ಕನಿಷ್ಟ ಪಕ್ಷ ಹಳೆಯ ನಿಯಮಗಳಿಗೆ ತಿದ್ದುಪಡಿ ತಂದು ದೊಡ್ಡ ಮೊತ್ತದ ಸಹಾಯ ಸ್ವೀಕರಿಸಿ ಅನ್ನುವ ಒತ್ತಾಯ ಕೇಳಿ ಬಂದಿತ್ತು.

ಆದರೆ ಇದೀಗ 700 ಕೋಟಿ ರೂಪಾಯಿ ದೇಣಿಗೆ ವಿವಾದಕ್ಕೆ ದೊಡ್ಡದೊಂದು ಟ್ವಿಸ್ಟ್ ಸಿಕ್ಕಿದೆ. ನಿನ್ನೆಯಿಂದ ಇದೊಂದು ಸುಳ್ಳು ಸುದ್ದಿ ಅನ್ನುವ ಮಾಹಿತಿ ಸಿಕ್ಕಿತ್ತು. ಆದರೆ ಇದಕ್ಕೊಂದು ಕ್ಲಿಯಾರಿಟಿ ಸಿಕ್ಕಿದ್ದು, ಯುಎಇ ಕೇರಳಕ್ಕೆ 700 ಕೋಟಿ ಕೊಡುತ್ತೇವೆಎಂದು ಹೇಳಿಯೇ ಇಲ್ವಂತೆ.

ಇದನ್ನು ಯುಎಇ ರಾಯಭಾರಿಯೇ ಸ್ಪಷ್ಟಪಡಿಸಿದ್ದು, ನಾವು ಸಹಾಯ ಮಾಡುತ್ತೇವೆ ಎಂದು ಹೇಳಿದ್ದು ನಿಜ, ಜೊತೆಗೆ ನಮ್ಮ ನಾಯಕರು ಭಾರತದ ಪ್ರಧಾನಮಂತ್ರಿಗಳೊಂದಿಗೆ ಮಾತನಾಡಿದ್ದು ಕೂಡಾ ಸತ್ಯ. ಆದರೆ ಹಣಕಾಸು ಕೊಡುವುದರ ಕುರಿತಂತೆ ಯಾವುದೇ ಮಾತುಕತೆಗಳಾಗಿಲ್ಲ. ಮಾತ್ರವಲ್ಲದೆ ನಾವು ಮೊತ್ತವನ್ನು ನಮೂದಿಸಿಯೇ ಇಲ್ಲ ಅಂದಿದ್ದಾರೆ.

r3

ಅಲ್ಲಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದೇಶದ ಜನತೆಯ ಹಾದಿ ತಪ್ಪಿಸಿದ್ದಾರೆ ಎಂದಾಯ್ತು. ಅವರೇ ಮಾಧ್ಯಮಗೋಷ್ಟಿಯಲ್ಲಿ ಯುಎಇ 700 ಕೋಟಿ ಹಣಕಾಸು ನೆರವು ನೀಡಲಿದೆ ಎಂದು ಘೋಷಿಸಿದ್ದಾರೆ. ಜೊತೆಗೆ ಪ್ರಧಾನಮಂತ್ರಿ ಜೊತೆಗೆ ಯುಎಇ ಮುಖ್ಯಸ್ಥರು ಮಾತನಾಡಿದ್ದಾರೆ ಎಂದಿದ್ದರು.

ಬಳಿಕ ಕೇಂದ್ರ ಸರ್ಕಾರ ಹಣ ಸ್ವೀಕರಿಸುತ್ತಿಲ್ಲ ಅನ್ನುವ ಆರೋಪ ಕೇಳಿ ಬಂದಿತ್ತು. ಜೊತೆಗೆ ಕೇರಳ ಸರ್ಕಾರ ಕೂಡಾ ಕೇಂದ್ರ ಮೇಲೆ ವಾಗ್ದಾಳಿ ನಡೆಸಿತ್ತು. ಕಾಂಗ್ರೆಸ್ ನಾಯಕರು ಕೂಡಾ ಹಿಂದೆ ಮುಂದೆ ನೋಡಲಿಲ್ಲ, ಕೇರಳದ ನೆರೆಯಲ್ಲಿ ರಾಜಕೀಯ ಶುರುವಿಟ್ಟುಕೊಂಡಿದ್ದರು. ಜನತೆ ಸಂಕಷ್ಟದಲ್ಲಿದ್ದು ಸ್ಪಂದಿಸುವ ಬದಲು ಕೇಂದ್ರ ಸರ್ಕಾರ ಮೇಲೆ ಗೂಬೆ ಕೂರಿಸಲು ಮುಂದಾಗಿದ್ದು ದುರಂತವೇ ಸರಿ.

r1

ಈ ನಡುವೆ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿರುವ ಲೆಫ್ಟ್ ಪಾರ್ಟಿ ಮುಖಂಡ ರಾಜಾ, ಯುಎಇ ಸಹಾಯ ಮಾಡುವುದಾಗಿ ಹೇಳಿತ್ತು. ಅದು 700 ಕೋಟಿಯೋ 7 ಕೋಟಿಯೋ ಅನ್ನುವುದು ಮುಖ್ಯವಲ್ಲ ಎಂದಿದ್ದಾರೆ.

ಇನ್ನು ಈ ಬೆಳವಣಿಗೆ ಕುರಿತಂತೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಸುಳ್ಳು ಹೇಳುವ ಮೂಲಕ ಎರಡು ರಾಷ್ಟ್ರಗಳ ನಡುವೆ ಸಂಬಂಧ ಹಾಳು ಮಾಡುವ ಪ್ರಯತ್ನ ಸಾಗುತ್ತಿದೆ. ಪ್ರಧಾನಮಂತ್ರಿಗಳನ್ನು ಮುಜುಗರಕ್ಕೆ ಈಡು ಮಾಡುವ ಪ್ರಯತ್ನವನ್ನು ಕೇರಳ ಸರ್ಕಾರ ಮಾಡಿದೆ ಎಂದಿದ್ದಾರೆ.

r2

ಹಾಗಾದ್ರೆ ವಿಜಯ್ ಪಿಣರಾಯಿ ಸುಳ್ಳು ಹೇಳಿದ್ಯಾಕೆ…. ಇದೀಗ ಕ್ಷಮೆ ಕೇಳದಿದ್ದರೆ ದೇವರನಾಡಿನ ಜನ ಮಾತ್ರವಲ್ಲ ದೇಶದ ಜನ ಪಿಣರಾಯಿ ವಿಜಯನ್ ಅವರನ್ನು ಕ್ಷಮಿಸಲು ಸಾಧ್ಯವೇ.

r4

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: