Advertisements

ನೆರವು ನಿರಾಕರಿಸಲು ಸಾವಿರ ಕಾರಣವಿದೆ…. ಮನಮೋಹನ್ ಮಾಡಿದ್ದನ್ನೇ ಮೋದಿ ಮಾಡಿದ್ದು

ಕೇರಳದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರ ಜೋರಾಗಿದೆ. ವಿದೇಶಗಳಿಂದ ಕೇರಳದ ಸಂಕಷ್ಟಕ್ಕೆ ಹರಿದು ಬಂದ ದೇಣಿಗೆಯನ್ನು ಮೋದಿ ಸರ್ಕಾರ ತಿರಸ್ಕರಿಸುವ ಮೂಲಕ ಅನ್ಯಾಯ ಎಸಗಲಾಗುತ್ತಿದೆ ಅನ್ನುವ ದೂರುಗಳು ಕೇಳಿ ಬರುತ್ತಿದೆ.

ಸುಳ್ಳುಗಾರ ಪಿಣರಾಯಿ ವಿಜಯನ್..? ಯುಎಇ 700 ಕೋಟಿ ಕೊಟ್ಟೇ ಇಲ್ಲ…!

ಆದರೆ ಹಣಕಾಸು ಸಹಾಯ ನಿರಾಕರಿಸಿರುವುದರ ಹಿಂದೆ ಸಾವಿರ ಕಾರಣಗಳಿದೆ ಅನ್ನುವ ಅರಿವು ಯಾರಿಗೂ ಇಲ್ಲ. ದೇಶದ ಆರ್ಥಿಕತೆಯ ಮೇಲೂ ಈ ಹಣಕಾಸು ಸ್ವೀಕಾರ ಪರಿಣಾಮ ಬೀರಬಹುದು ಅನ್ನುವುದು ಅನೇಕರಿಗೆ ಗೊತ್ತಿಲ್ಲ. ಹೀಗಾಗಿಯೇ ಮೋದಿ ಹಣಕಾಸು ನೆರವು ತಿರಸ್ಕಾರ ಮಾಡಿರುವುದು ಸರಿಯಲ್ಲ, ಹಣಕಾಸು ಪಡೆದುಕೊಂಡಿದ್ದರೆ ಕಳೆದುಕೊಳ್ಳುವುದು ಏನಿತ್ತು. ಅನ್ನುವ ಪ್ರಶ್ನೆಗಳ ಸರಮಾಲೆ ಎಸೆಯಲಾಗುತ್ತಿದೆ.

ಆದರೆ ಒಂದು ನೆನಪಿಡಿ ವಿಪತ್ತು ಪರಿಹಾರಕ್ಕೆ ವಿದೇಶಗಳಿಂದ ದೇಣಿಗೆ ಪಡೆಯುತ್ತಿರುವುದನ್ನು ನಿರಾಕರಿಸುತ್ತಿರುವುದು ಮೋದಿ ಮೊದಲಲ್ಲ. ವಿದೇಶಗಳಿಂದ ದೇಣಿಗೆ ಪಡೆಯುವುದನ್ನು ನಿಲ್ಲಿಸಿ 14 ವರ್ಷಗಳೇ ಕಳೆದು ಹೋಗಿದೆ.2004 ಸುನಾಮಿ ವೇಳೆಯಲ್ಲಿ ವಿದೇಶಗಳು ಭಾರತದ ನೆರವಿಗೆ ಧಾವಿಸಿದಾಗ ಆಗ ಪ್ರಧಾನ ಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ನಿರಾಕರಿಸಿದ್ದರು. ಜೊತೆಗೆ ಹಣಕಾಸು ಸಚಿವರಾಗಿದ್ದ ಚಿದಂಬರಂ ಕೂಡಾ ಹಣಕಾಸು ನೆರವು ನಿರಾಕರಿಸಿ ಹೇಳಿಕೆ ಕೊಟ್ಟಿದ್ದರು.

ಹಾಗದರೆ ಅವರು ಮಾಡಿದ ತಪ್ಪನ್ನು ಈಗ್ಲೂ ಮಾಡಬೇಕೇ ಎಂದು ಪ್ರಶ್ನೆ ಕೇಳಬಹುದು. ಆಗ ಮನಮೋಹನ್ ಸಿಂಗ್ ಮಾಡಿದ್ದು ತಪ್ಪಲ್ಲ. ವಿದೇಶಿ ದೇಣಿಗೆ ನಿರಾಕರಿಸುವ ಮೂಲಕ ಸಿಂಗ್ ತೋರಿದ್ದು ದಿಟ್ಟತನ.

1991 ಉತ್ತರಕಾಳಿಯ ಭೂಕಂಪ, 1993ರ ಲಾತೋರ್ ಭೂಕಂಪ, 2001 ರ ಗುಜರಾತ್ ಭೂಕಂಪ, 2002 ಪಶ್ಚಿಮ ಬಂಗಾಳ ಚಂಡಮಾರುತ, 2004ರ ಬಿಹಾರದ ನೆರೆ ಹಾನಿ ಹೀಗೆ ಸಾಕಷ್ಟು ಬಾರಿ ವಿದೇಶಗಳಿಂದ ಭಾರತ ನೆರವು ಸ್ವೀಕರಿಸಿತ್ತು. ಆದರೆ ನೆರವು ಸ್ವೀಕರಿಸಿದ ಆಫ್ಟರ್ ಎಫೆಕ್ಟ್ ಏನು ಅನ್ನುವುದು ಆರ್ಥಿಕ ತಜ್ಞರಾದ ಮನಮೋಹನ್ ಸಿಂಗ್ ಅವರಿಗೆ ಅರಿವಾಗಿತ್ತು. ಹೀಗಾಗಿಯೇ 2004 ಸುನಾಮಿ ವೇಳೆ  ವಿಪತ್ತು ಪರಿಹಾರಕ್ಕೆ ಎಂದು ದೇಣಿಗೆ ಕೊಡಲು ವಿದೇಶಗಳು ಮುಂದೆ ಬಂದಾಗ ಅವರು ನಯವಾಗಿ ನಿರಾಕರಿಸಿ, ಧನ್ಯವಾದ ಸಲ್ಲಿಸಿದ್ದರು.

MM Singh

ಹಾಗಾದರೆ ವಿದೇಶಿ ದೇಣಿಗೆ ಸ್ವೀಕರಿಸಿರುವುದರಿಂದ ಅಷ್ಟೊಂದು ಸಮಸ್ಯೆಯಾಗುತ್ತದೆಯೇ ಎಂದು ನೀವು ಪ್ರಶ್ನಿಸಬಹುದು. ಖಂಡಿತಾ ಹೌದು. ಒಂದು ವೇಳೆ ವಿದೇಶಗಳಿಂದ ವಿಪತ್ತು ಪರಿಹಾರ ಸಲುವಾಗಿ ದೊಡ್ಡ ಮೊತ್ತದ ದೇಣಿಗೆ ಸ್ವೀಕರಿಸಿದರೆ ಭಾರತ ಆರ್ಥಿಕತೆ ಬಗ್ಗೆ ಜಗತ್ತು ಅನುಮಾನದಿಂದ ನೋಡುವ ಅಪಾಯವಿದೆ. ಇಂತಹ ಸಂದರ್ಭದಲ್ಲಿ ಭಾರತದ ಆರ್ಥಿಕತೆ ಸದೃಢವಾಗಿದೆ ಎಂದು ಸಂದೇಶ ರವಾನಿಸುವುದು ಅಗತ್ಯ. ನಮ್ಮಲಾದ ಹಾನಿಯನ್ನು ನಾವೇ ಸರಿಪಡಿಸಿಕೊಳ್ಳುತ್ತಿದ್ದೇವೆ ಅನ್ನುವ ವಿಶ್ವಾಸ ವಿಶ್ವಕ್ಕೆ ಬಂದರೆ ಭಾರತದ ಆರ್ಥಿಕತೆ ಬಗ್ಗೆ ಯಾರೊಬ್ಬರೂ ಅನುಮಾನ ಪಡುವುದಿಲ್ಲ.

ಇನ್ನು ಒಂದು ದೇಶದಿಂದ ದೇಣಿಗೆ ಸ್ವೀಕರಿಸಿದ ತಕ್ಷಣ ಬೇರೆ ಬೇರೆ ದೇಶಗಳು ಸಹಾಯ ಹಸ್ತ ಚಾಚಲು ಕ್ಯೂ ನಿಲ್ಲುತ್ತದೆ. ಆಗ ಭಾರತ ಯಾವ ದೇಶದ ಜೊತೆಗೆ ಉತ್ತಮ ರಾಜತಾಂತ್ರಿಕ ಬಾಂಧವ್ಯ ಹೊಂದಿಲ್ಲವೋ ಆ ದೇಶದಿಂದ ದೇಣಿಗೆ ಸ್ವೀಕರಿಸುವ ಒತ್ತಡಕ್ಕೆ ಸಿಲುಕುತ್ತದೆ.

ಸಂಕಷ್ಟ ಕಾಲದಲ್ಲಿ ಮನಸ್ತಾಪ ಹೊಂದಿರುವ ವ್ಯಕ್ತಿಯಿಂದ ನಾವು ನೆರವನ್ನು ಪಡೆಯಲು ಸ್ವಾಭಿಮಾನ ಹೇಗೆ ಅಡ್ಡ ಬರುತ್ತದೋ ಹಾಗೇ ಇಲ್ಲೂ.

ಒಂದು ದೇಶದಿಂದ ಹಣಕಾಸು ನೆರವನ್ನು ಪಡೆದು ಮತ್ತೊಂದು ದೇಶದ ನೆರವನ್ನು ನಿರಾಕರಿಸುವುದು ಸರಿಯಾಗುವುದಿಲ್ಲ. ಈ ಕಾರಣದಿಂದಲೇ ಮನಮೋಹನ್ ಸಿಂಗ್ ಕಾಲದಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಹಾಗಂತ ವಿದೇಶಿ ಪ್ರಜೆಗಳ ನೆರವನ್ನು ನಿರಾಕರಿಸಿಲ್ಲ.

ಹಾಗಾದರೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೆರವು ಸ್ವೀಕರಿಸಿ ಎಂದು ಒತ್ತಡ ಹೇರುವುದರಲ್ಲಿ ಅರ್ಥವಿದೆಯೇ ಖಂಡಿತಾ ಇದೆ. ಮಹಾ ಮಳೆಗೆ ಕೇರಳ ಛಿದ್ರವಾಗಿದೆ. ಅಲ್ಲಿನ ಜನರಿಗೆ ಮತ್ತೆ ಬದುಕು ಕಟ್ಟಿಕೊಡುವ ಒತ್ತಡ ಅವರದ್ದು. ಈಗ ಎಡವಿದರೆ ರಾಜಕೀಯವಾಗಿಯೂ ಅವರಿಗೆ ಮತ್ತು ಪಕ್ಷಕ್ಕೆ ಹಿನ್ನಡೆಯಾಗಬಹುದು. ಹೀಗಾಗಿ ಅವರು ಒತ್ತಡ ಹೇರುತ್ತಿದ್ದಾರೆ.

kerala

Advertisements

Leave a Reply

%d bloggers like this: