Advertisements

ದಮಯಂತಿಯಾದ ರಾಧಿಕಾ ಕುಮಾರಸ್ವಾಮಿ – ಫಸ್ಟ್ ಲುಕ್ ಹೇಗಿದೆ ಗೊತ್ತಾ…?

ರಾಜ್ಯದ ಮುಖ್ಯಮಂತ್ರಿಗಳ ಪತ್ನಿ ರಾಧಿಕಾ ಕುಮಾರಸ್ವಾಮಿ ದಮಯಂತಿ ಚಿತ್ರದಲ್ಲಿ ನಟಿಸುತ್ತಾರೆ ಅನ್ನುವ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿತ್ತು. ಆದರೆ ಸ್ಪಷ್ಟ ಚಿತ್ರಣ ಸಿಕ್ಕಿರಲಿಲ್ಲ. ಇದೀಗ ಚಿತ್ರಕ್ಕೊಂದು ಸ್ಪಷ್ಟತೆ ಸಿಕ್ಕಿದೆ.

ನವರಸನ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. “ದಮಯಂತಿ’ ಚಿತ್ರ ಅಕ್ಟೋಬರ್‌ನಲ್ಲಿ ಸೆಟ್ಟೇರಲಿದ್ದು, ಶೀರ್ಷಿಕೆ ಹೇಳುವಂತೆ, ಇದೊಂದು ಎಪ್ಪತ್ತರ ದಶಕದ ಕಥೆ. ಈಗಿನ ವಾಸ್ತವ ಚಿತ್ರಣವನ್ನೂ ಬೆರೆಸಿ ಮಾಡುತ್ತಿರುವ ಚಿತ್ರ ಅನ್ನುವುದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ.

ಮಹಿಳಾ ಪ್ರಧಾನವಾಗಿರುವ ದಮಯಂತಿ ಚಿತ್ರಕ್ಕೆ ಹೈ ಬಜೆಟ್‌ ಮೀಸಲಿಡಲಾಗಿದ್ದು,ಅರುಂಧತಿ, ಭಾಗಮತಿ ಮಟ್ಟದಲ್ಲಿ ಮೂಡಿ ಬರಲಿದೆಯಂತೆ, ಬಹುತೇಕ ಚಿತ್ರೀಕರಣ ಸೆಟ್‌ನಲ್ಲೇ ನಡೆಯಲಿದ್ದು, ಮೈಸೂರು, ಮಂಡ್ಯ ಸುತ್ತಮುತ್ತ ಸ್ವಲ್ಪ ದಿನಗಳ ಚಿತ್ರೀಕರಣ ನಡೆಯಲಿದೆ. ಬಾಹುಬಲಿ ಚಿತ್ರಕ್ಕೆ ಗ್ರಾಫಿಕ್ಸ್‌ ಕೆಲಸ ಮಾಡಿದ ತಂಡವೇ ದಮಯಂತಿ ಚಿತ್ರಕ್ಕೂ ಗ್ರಾಫಿಕ್ಸ್ ಮಾಡಲಿದೆ.

ಸುಳ್ಳುಗಾರ ಪಿಣರಾಯಿ ವಿಜಯನ್..? ಯುಎಇ 700 ಕೋಟಿ ಕೊಟ್ಟೇ ಇಲ್ಲ…!

ಪಿಕೆಎಚ್‌ ದಾಸ್‌ ಛಾಯಾಗ್ರಾಹಕರಾಗಿರುವ ಚಿತ್ರಕ್ಕೆ ಗಣೇಶ್‌ ನಾರಾಯಣ್‌ ಸಂಗೀತ ನೀಡುತ್ತಿದ್ದು, ಮಾಸ್ತಿ ಅವರ ಸಂಭಾಷಣೆ ಬರೆದಿದ್ದಾರೆ.

ಇನ್ನು ಚಿತ್ರದಲ್ಲಿ ತಬಲಾ ನಾಣಿ, ವಿಜಯ್‌ ಚೆಂಡೂರ್‌, ಕೆಂಪೇಗೌಡ, ಗಿರಿ, ಕಾರ್ತಿಕ್‌, ಮಜಾ ಟಾಕೀಸ್‌ ಪವನ್‌, ಸಾಧುಕೋಕಿಲ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಇನ್ನು ರಾಧಿಕಾ ಈ ಚಿತ್ರಕ್ಕೆ ಸಹಿ ಹಾಕಿದ್ದೇ ಇಂಟ್ರರೆಸ್ಟಿಂಗ್ ಪಾಯಿಂಟ್. ರಾಧಿಕಾರ ಅವರ ಮಾತಿಗಳಲ್ಲೇ ಹೇಳುವುದಾದರೆ

“ದಮಯಂತಿ ಶೀರ್ಷಿಕೆಯೇ ನನಗೆ ಈ ಪ್ರಾಜೆಕ್ಟ್ ಗೆ ಸಹಿ ಮಾಡುವಂತೆ ಆಕರ್ಷಿಸಿತು. 1980 ರ ದಶಕದ ರೀತಿಯ ಕಥೆ ಇದಾಗಿದ್ದು, ಹಾಸ್ಯಭರಿತ ಭಯಾನಕ ಸಿನಿಮಾವಾಗಿದೆ. ದಮಯಂತಿ ಹೆಸರಿಗೆ ಆಕರ್ಷಿತವಾಗಿ ನಾನು ಸಹಿ ಹಾಕಿದ್ದೇನೆ , ಈ ಪಾತ್ರಕ್ಕೆ ನಾನು ಸೂಕ್ತ ಎಂದು ಅನ್ನಿಸುತ್ತಿದೆ.ತಮಿಳು ನಟ ವಿಶಾಲ್ ತಂದೆ ಈ ಸಿನಿಮಾದಲ್ಲಿ ರಾಧಿಕಾ ತಂದೆಯಾಗಿ ಪಾತ್ರ ಮಾಡುತ್ತಿದ್ದಾರೆ. ಜಿಕೆ ರೆಡ್ಡಿ ಅವರಿಗಾಗಿ ನಾನು ಈ ಪಾತ್ರಕ್ಕೆ ಸಹಿ ಮಾಡಿದೆ.

ಅಂದ ಹಾಗೇ ಸೆಪ್ಟಂಬರ್ ತಿಂಗಳಿಂದ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆ.

Advertisements

Leave a Reply

%d bloggers like this: