Advertisements

30 ವರ್ಷಗಳ ನಂತ್ರ ಬೆಳ್ಳಿ ತೆರೆಗೆ ಮರಳಿದ ಅಪರ್ಣಾ

ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಧೂಳೆಬ್ಬಿಸುತ್ತಿರುವ ಅಪರ್ಣಾ, ಕಿರು ತೆರೆ ಮತ್ತು ಕಾರ್ಯಕ್ರಮ ನಿರ್ವಹಣೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

ಈ ನಡುವೆ ಬೆಳ್ಳಿ ತೆರೆಗೆ ಮರಳಲು ದೊಡ್ಡ ಮನಸ್ಸು ಮಾಡಿರುವ ಅಪರ್ಣಾ ಗ್ರಾಮಾಯಣ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಮೂಲಕ ಬರೋಬ್ಬರಿ 30 ವರ್ಷಗಳ ನಂತರ ಅಪರ್ಣಾ ಚಂದನವನಕ್ಕೆ ಕಾಲಿಡುತ್ತಿದ್ದಾರೆ.

ದೇವರ್ನೂರು ಚಂದ್ರು ನಿರ್ದೇಶನ ಮಾಡಲಿರುವ ಗ್ರಾಮಾಯಣ ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ನಾಯಕನಾಗಿ ಮತ್ತು ಅಮೃತಾ ಐಯ್ಯರ್ ನಾಯಕಿಯಾಗಿ ಅಭಿನಯಿಸಲಿದ್ದಾರೆ.

Gramayana

ಪುಟ್ಟಣ್ಣ ಕಣಗಾಲ್ ಅವರ 1984ರಲ್ಲಿ ತೆರೆಕಂಡ ಮಸಣದ ಹೂವು ಚಿತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸಿದ್ದ ಅಪರ್ಣಾ ನಂತರ 1989ರಲ್ಲಿ ಇನ್ಸ್ ಪೆಕ್ಟರ್ ವಿಕ್ರಮ್, ನಮ್ಮೂರ ರಾಜ ಮತ್ತು ಒಂದಾಗಿ ಬಾಳುವಿನಲ್ಲಿ ನಟಿಸಿದ್ದರು.

ಬಳಿಕ ಅಪರ್ಣಾ ಒಂದಿಷ್ಟು ವರ್ಷ ವೈಯುಕ್ತಿಕ ಕಾರಣದಿಂದ ಬಣ್ಣದ ಲೋಕದಿಂದ ದೂರವಾಗಿದ್ದರು. ನಂತರ ಸಿನಿಮಾ ತೊರೆದು ರೇಡಿಯೊ, ಧಾರವಾಹಿಗಳಲ್ಲಿ ಮತ್ತು ಕಾರ್ಯಕ್ರಮ ನಿರೂಪಣೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರು.

2005 ರಲ್ಲಿ ಮೂಡಲ ಮನೆ, 2008ರಲ್ಲಿ ಮುಕ್ತ ಸೇರಿ ಹಲವು ಧಾರವಾಹಿಗಳಲ್ಲಿ ನಟಿಸಿದ್ದ ಅಪರ್ಣಾ ಬಿಗ್ ಬಾಸ್ ಸೀಸನ್ ಒಂದರಲ್ಲಿ ಪಾಲ್ಗೊಂಡಿದ್ದರು.

ಗ್ರಾಮಾಯಣದ ಚಿತ್ರೀಕರಣ ಸೆಪ್ಟೆಂಬರ್ 18ರಿಂದ ಆರಂಭವಾಗಲಿದ್ದು. ಸೆಪ್ಟೆಂಬರ್ 6ರಂದು ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಲಿದೆ.

Advertisements

Leave a Reply

%d bloggers like this: