Advertisements

ಚಕ್ರವರ್ತಿ ಸೂಲಿಬೆಲೆ ಮುಸ್ಲಿಮರ ಜೊತೆಗೆ ಹೆಚ್ಚು ಓಡಾಡುತ್ತಿರುವುದ್ಯಾಕೆ…?

ಚಕ್ರವರ್ತಿ ಸೂಲಿಬೆಲೆ, ಅದ್ಭುತ ವಾಗ್ಮಿ, ಹಿಂದುತ್ವವಾದಿ, ಡಿಫರೆಂಟ್ ಸಮಾಜ ಸೇವಕ ಹೀಗೆ ಬಿರುದು ಕೊಡುತ್ತಾ ಹೋದರೆ ನಿಲ್ಲಿಸುವುದು ಕಷ್ಟ.

ಹಿಂದುತ್ವವಾದಿ ಅಂದ ತಕ್ಷಣ ಅವರು ಮತ್ತೊಂದು ಧರ್ಮವನ್ನು ದ್ವೇಷಿಸಿ ಎಂದು ಹೇಳಿದವರಲ್ಲ. ಅವರವರ ಧರ್ಮವನ್ನು ಪ್ರೀತಿಸುವ ಪ್ರತಿಪಾದಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಭಾರತದ ತಿರಂಗದಡಿ ಬಂದರೆ ನಾವೆಲ್ಲರೂ ಭಾರತೀಯರೂ ಅನ್ನುವುದು ಅವರ ವಾದ.

ಆದರೆ ಇತ್ತೀಚೆಗೆ ಸೂಲಿಬೆಲೆ ವಿರುದ್ಧವೂ ಟೀಕೆಗಳು ಬರಲಾರಂಭಿಸಿದೆ. ಕಲ್ಯಣಿ, ನದಿ ಸ್ವಚ್ಛ ಮಾಡಿದ ಅದ್ಭುತ ಕೆಲಸವನ್ನು ಮರೆತ ಜನ ಸೂಲಿಬೆಲೆಯ ಬೆನ್ನು ಹತ್ತಿದ್ದಾರೆ.

ಅವರು ಕಾಂಗ್ರೆಸ್ ಸೇರುತ್ತಾರೆ..ಮುಸ್ಲಿಂರ ಜೊತೆ ಸಿಕ್ಕಾಪಟ್ಟೆ ಬೆರೆಯುತ್ತಾರೆ ಅನ್ನುವ ಟೀಕೆ ಮಾಡುತ್ತಿದ್ದಾರೆ. ಆದರೆ ಈ ಸುದ್ದಿಗಳನ್ನು ಹಬ್ಬಿಸುವ ಮಂದಿ ಹಿಂದೂ, ಮುಸ್ಲಿಂ, ಕ್ರೈಸ್ತರ ನಡುವೆ ಕಂದಕ ತರುವ ಮಂದಿ ಅನ್ನುವುದನ್ನು ಮರೆತಿರುವುದೇ ನಮ್ಮ ದುರಂತ.

ಈ ಕುರಿತಂತೆ ಚಕ್ರವರ್ತಿ ಸೂಲಿಬೆಲೆ ಬೆಂಗಳೂರಿನಲ್ಲಿ ಮಾತನಾಡಿದ್ದಾರೆ. SSF ಸಂಘಟನೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ಟೀಕೆ ಹಾಗೂ ಕಂದಕ ಕುರಿತಂತೆ ಅವರು ಬೆಳಕು ಚೆಲ್ಲಿದ್ದಾರೆ.

Advertisements

Leave a Reply

%d bloggers like this: