Advertisements

ಜಯಲಲಿತಾ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲ ಕರಾವಳಿ ಕುವರಿ ಯಾರು..?

ಆದಿತ್ಯ ಭಾರಧ್ವಾಜ್‌ ನಿರ್ಮಾಣದ ಜಯಲಲಿತಾ ಬಯೋಪಿಕ್ ಗಾಗಿ ಭರದ ಸಿದ್ದತೆಗಳು ನಡೆಯುತ್ತಿದೆ. ಈಗಾಗಲೇ ಕಥೆ ಸಿದ್ದವಾಗಿದೆ. ತಾಂತ್ರಿಕ ತಂಡವೂ ತಯಾರಿದೆ. ಆದರೆ ಬಯೋಪಿಕ್‌ನಲ್ಲಿ ಜಯಲಲಿತಾ ಪಾತ್ರವನ್ನು ಯಾರು ಮಾಡುತ್ತಾರೆ ಅನ್ನುವುದೇ ಈಗಿನ ಕುತೂಹಲ.

ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅಥವಾ ಬಾಲಿವುಡ್‌ ತಾರೆ ಐಶ್ವರ್ಯಾ ರೈ ಜಯಲಲಿತಾ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತಿದೆ.ಹೀಗಾಗಿ ಇಬ್ಬರ ಜೊತೆಯೂ ಮಾತುಕತೆ ನಡೆಯುತ್ತಿದ್ದು, ಯಾರು ಒಪ್ಪಿಕೊಳ್ಳುತ್ತಾರೆ ಅನ್ನುವುದು ಗೊತ್ತಿಲ್ಲ.

ಅಂದ ಹಾಗೇ  ಅಮ್ಮ-ಪುರಚ್ಚಿ ತಲೈವಿ ಹೆಸರಿನ ಈ ಬಯೋಪಿಕ್‌ ಅನ್ನು ಭಾರತಿರಾಜ ನಿರ್ದೇಶಿಸಲಿದ್ದು, ಇಳಯರಾಜ ಸಂಗೀತ ನಿರ್ದೇಶನ ಮಾಡಲಿದ್ದಾರೆ.

ಈ ಸಿನಿಮಾದಲ್ಲಿ ಎಂಜಿಆರ್‌ ಪಾತ್ರವನ್ನು ಕಮಲ್‌ ಹಾಸನ್‌ ಅಥವಾ ಮೋಹನ್‌ಲಾಲ್‌ ಮಾಡುವ ಸಾಧ್ಯತೆಗಳಿದೆ.  ಈ ನಡುವೆ ವಿಜಯ್‌ ನಿರ್ದೇಶನದಲ್ಲಿಯೂ ಜಯಲಲಿತಾ ಬಯೋಪಿಕ್‌ ಬರುತ್ತಿದ್ದು, ಇದರಲ್ಲಿ ಜಯಲಲಿತಾ ಪಾತ್ರಕ್ಕೆ ವಿದ್ಯಾ ಬಾಲನ್‌ ಹೆಸರು ಕೇಳಿಬರುತ್ತಿದೆ.

Advertisements

One Comment on “ಜಯಲಲಿತಾ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲ ಕರಾವಳಿ ಕುವರಿ ಯಾರು..?

  1. Pingback: ರಮ್ಯರನ್ನು ಕೆಲಸದಿಂದ ಕಿತ್ತು ಹಾಕಿದ್ರಂತೆ ರಾಹುಲ್…!

Leave a Reply

%d bloggers like this: