ಕೊಡಗಿನವರು ಮನುಷ್ಯರಲ್ವ ಮೋದಿಯವರೇ…?

ಕರ್ನಾಟಕವನ್ನು ಮೋದಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಅನ್ನುವ ಆರೋಪ ಇಂದು ನಿನ್ನೆಯದಲ್ಲ. ಹಲವಾರು ಬಾರಿ ಇಂತಹ ಆರೋಪಗಳು ಕೇಳಿ ಬಂದಿದೆ.

ಇದೀಗ ಕೊಡಗು ಜನರ ಆಕ್ರೋಶ ಮೋದಿಯತ್ತ ತಿರುಗಿದೆ. ಕೇರಳ ಹೋಗಿ ಬಂದ ಮೋದಿ 500 ಕೋಟಿ ಮಧ್ಯಂತರ ಘೋಷಣೆ ಮಾಡಿ ಬಂದಿದ್ದಾರೆ. ಆದರೆ ಕರ್ನಾಟಕ ಕಡದ ಮೋದಿ ನೋಡಿಯೇ ಇಲ್ಲ. ನಾವೇನೂ ಮನುಷ್ಯರಲ್ವ, ಕರ್ನಾಟಕ ಭಾರತದಲ್ಲಿ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಹೀಗೆ ಪ್ರಶ್ನೆ ಮಾಡಿದ್ದು ಬಿಜೆಪಿ ನಾಯಕರಿಗೆ ಅನ್ನುವುದು ಗಮನಾರ್ಹ. ಇಂದು ಕೊಡಗಿನ ನಿರಾಶ್ರಿತರ ಕೇಂದ್ರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿದಾಗ ಮನೆ ಮಠ ಕಳೆದುಕೊಂಡವರು ಕೆರಳಿ ಕೆಂಡವಾದರು. “ನೀವು ಬರ್ತಿರಿ ಸಮಾಧಾನ ಮಾಡಿ ಹೋಗ್ತಿರಿ. ಆದರೆ ನಮ್ಮ ಮನೆ ಎಲ್ಲಿದೆ, ಎಲ್ಲಿತ್ತು ಅನ್ನುವುದೇ ಗೊತ್ತಿಲ್ಲ. ಮುಂದೇನು ಅನ್ನುವ ಚಿಂತೆ ನಮ್ಮನ್ನು ಕಾಡುತ್ತಿದೆ. ಮೋದಿ ಕೇರಳಕ್ಕೆ ಹೋಗ್ತಾರೆ ವೈಮಾನಿಕ ಸಮೀಕ್ಷೆ ಮಾಡುತ್ತಾರೆ. ಆದರೆ ನಮ್ಮ ಕಡೆ ಯಾಕೆ ನೋಡುತ್ತಿಲ್ಲ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Weather: Floods in Kochi

ಹೌದು ತಾನೇ.. ಕೊಡಗು ಬಿಜೆಪಿ ಸಂಸದರನ್ನು ಗೆಲ್ಲಿಸಿದೆ, ಅನೇಕ ಶಾಸಕರನ್ನು ಕೊಟ್ಟಿದೆ. ಆ ಕಾರಣಕ್ಕಾದರೂ ಮೋದಿ ಬರಬೇಕಿತ್ತು. ಹೋಗ್ಲಿ ಒಂದಿಷ್ಟು ಅನುದಾನವನ್ನಾದರೂ ಘೋಷಣೆ ಮಾಡಬೇಕಿತ್ತು ತಾನೇ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: