Advertisements

ದೇವರು ಮುನಿದ ನಾಡು – ನಾಯಿ ರಕ್ಷಿಸಲು ಹೋಗಿ ಒಂದೇ ಕುಟುಂಬದ 9 ಸಾವು

ಕೇರಳದಲ್ಲಿ ಮರಣ ಮಳೆ ಅಬ್ಬರಿಸುತ್ತಿದೆ. ಈ ನಡುವೆ ಪ್ರಕೃತಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಮಾಡುತ್ತಿದೆ. ಆದರೆ ಅಪಾಯವನ್ನು ಲೆಕ್ಕಿಸದ ರಕ್ಷಣಾ ಪಡೆಗಳು ಜನರತ್ತ ಧಾವಿಸುತ್ತಿದೆ.

ಈ ನಡುವೆ ಪ್ರವಾಹಕ್ಕೆ ಸಿಲುಕಿದ್ದ ಸಾಕು ನಾಯಿಗಳನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ 9 ಮಂದಿ ಮೃತಪಟ್ಟಿರುವ ದಾರುಣ ಘಟನೆ ರಾಜ್ಯದ ಮಲಪ್ಪುರಂನ ಪೆರಿಗಂವು ಎಂಬಲ್ಲಿ ನಡೆದಿದೆ.

ಮನೆ ಮಾಲೀಕ ಶುಭ ಸಮಾರಂಭಕ್ಕೆ ಎಂದು ಹೊರಗಡೆ ಹೋಗಿದ್ದರು. ಈ ವೇಳೆ ಮನೆ ಸಮೀಪ ಮಳೆಯಾಗುತ್ತಿದೆ ಅನ್ನುವ ಮಾಹಿತಿ ಪಡೆದ ಅವರು ತಮ್ಮ ಸಹೋದರನಿಗೆ ಕರೆ ಮಾಡಿ ಕೋಳಿ ಫಾರಂನಲ್ಲಿ ಕಟ್ಟಿ ಹಾಕಿರುವ ನಾಯಿಗಳನ್ನು ಸುರಕ್ಷಿತ ಸ್ಥಳಕ್ಕೆ ಒಯ್ಯುವಂತೆ ಹೇಳಿದ್ದಾರೆ.

ಸಹೋದರನ ಮನವಿಯಂತೆ ಸ್ಥಳಕ್ಕೆ ಬಷೀರ್ ಧಾವಿಸಿದ್ದಾರೆ. ಆದರೆ ಈ ವೇಳೆ ಭೂಕುಸಿತ ಉಂಟಾಗಿ ಬಷೀರ್ ಹಾಗೂ ಅವರ 9 ಕುಟುಂಬ ಸದಸ್ಯರು ಮೃತಪಟ್ಟಿದ್ದಾರೆ.

ಈ ನಡುವೆ ಪ್ರವಾಹಕ್ಕೆ ಸಿಲುಕಿದ್ದ ಮಹಿಳೆಯೊಬ್ಬರು ತನ್ನ ಮನೆಯಿಂದ 25 ನಾಯಿಗಳನ್ನು ಬಿಟ್ಟು ಬರಲಾರೆ ಎಂದು ಪಟ್ಟು ಹಿಡಿದ ಘಟನೆ ತ್ರಿಶೂರ್ ನಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಸುನೀತಾ ಸಹಾಯಕ್ಕೆ ರಕ್ಷಣಾ ತಂಡಗಳು ಧಾವಿಸಿತ್ತು.  ಪ್ರವಾಹಮಟ್ಟ ಹೆಚ್ಚಾಗುತ್ತಿದೆ, ಮನೆಯಿಂದ ಹೊರ ಬನ್ನಿ ಎಂದು ರಕ್ಷಣಾ ಕಾರ್ಯಾಚರಣೆ ತಂಡ ಮನವಿ ಮಾಡಿದೆ. ಆದರೆ ಸುನೀತಾ ತನ್ನ ಮನೆಯಲ್ಲಿ ಆಶ್ರಯ ಪಡೆದಿರುವ ನಾಯಿಗಳನ್ನು ಬಿಟ್ಟು ಬರಲು ನಿರಾಕರಿಸಿದ್ದಾರೆ. ಕೊನೆಗೆ ಪ್ರಾಣಿ ದಯಾ ಸಂಘಟನೆಗಳು ಶ್ವಾನಗಳನ್ನು ರಕ್ಷಿಸಿದ ಬಳಿಕ ಸುನೀತಾ ದೋಣಿ ಏರಿದ್ದಾರೆ.

Advertisements

Leave a Reply

%d bloggers like this: