Advertisements

ತನ್ನದೇ ವಾಹಿನಿಯನ್ನು ಬೋಗಸ್ ಅಂದ್ರು ಬಿಟ್ರು ರಂಗಣ್ಣ….!

ಹೆಡ್ ಲೈನ್ ನೋಡಿ ಏನಪ್ಪ ಇದು ಎಂದು ಅಚ್ಚರಿಯಾಗಬಹುದು. ಹೌದು ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್ ತನ್ನದೇ ಒಡೆತನದ ಪಬ್ಲಿಕ್ ಟಿವಿಯನ್ನು ಬೋಗಸ್ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ರಾಜ್ಯದ ಡ್ಯಾಂ ಗಳಲ್ಲಿ ಬಿರುಕು ಬಂದಿದೆ ಅನ್ನುವ ವದಂತಿಗಳ ಕುರಿತಂತೆ ಮಾತನಾಡಿದ ರಂಗನಾಥ್ ಅವೆಲ್ಲವೂ ಬೋಗಸ್..ಹೀಗೆಲ್ಲಾ ಸುಳ್ಳು ಸುದ್ದಿ ಹಬ್ಬಿಸುವವರ ಕಪಾಳಕ್ಕೆ ಹೊಡೆಯರಿ ಎಂದು ಹೇಳಿದ್ದಾರೆ.

ದುರಂತ ಅಂದರೆ ರಂಗನಾಥ್ ಹೀಗೆಲ್ಲಾ ಮಾತನಾಡುತ್ತಿರಬೇಕಾದರೆ,ಅವರದ್ದೇ ಚಾನೆಲ್ ಕೆಳಗಡೆ ಡ್ಯಾಂಗಳಲ್ಲಿ ಬಿರುಕು ಅನ್ನುವ ಸುದ್ದಿ ಓಡುತ್ತಿತ್ತು. ಯಾರನ್ನೂ ಬೋಗಸ್ ಅನ್ನೋಣ… ಯಾರ ಕಪಾಳಕ್ಕೆ ಹೊಡೆಯಬೇಕು ಹೇಳಿ.

 ಆದರೆ ಪಬ್ಲಿಕ್ ಟಿವಿ ಕೊಡಗಿನ ನೆರೆ ವಿಚಾರದಲ್ಲಿ ಒಂದೊಳ್ಳೆ ಕೆಲಸ ಮಾಡಿದೆ. ಸಹಾಯದ ಕರೆಗೆ ಒಗೊಟ್ಟು ಜನ ತಂದುಕೊಟ್ಟಿರುವ ವಸ್ತುಗಳನ್ನು ಸದುಪಯೋಗಪಡಿಸಿಕೊಳ್ಳಲಾಗುತ್ತದೆ. ಆದರೆ ಬಂದಿರುವ ಹಣಕಾಸು ಸಹಾಯವನ್ನು ಯಾವುದೇ ಕಾರಣಕ್ಕೂ ಪಬ್ಲಿಕ್ ಟಿವಿ ಖರ್ಚು ಮಾಡುವುದಿಲ್ಲ ಎಂದು ರಂಗನಾಥ್ ಸ್ಪಷ್ಟಪಡಿಸಿದ್ದಾರೆ. ಮಳೆ ಎಲ್ಲಾ ನಿಂತ ಮೇಲೆ ಈ ಹಣಕ್ಕೆ ಮತ್ತಷ್ಟು ಹಣ ಕೂಡಿಸಿ ಕೊಚ್ಚಿ ಹೋದ ಬದುಕನ್ನು ಕಟ್ಟಿ ಕೊಡುವ ಕಾರ್ಯ ಮಾಡುತ್ತಾರಂತೆ.

Madi
ನಿಜಕ್ಕೂ ಇದು ಅದ್ಭುತ ಕಾರ್ಯ. ಈಗ ಹಣವನ್ನು ಕೊಡಗಿನಲ್ಲಿ ಸುರಿದರೆ ಪ್ರಯೋಜನವಿಲ್ಲ. ಈಗ ಏನಿದ್ದರೂ ಸರ್ಕಾರ ಹಣ ಖರ್ಚು ಮಾಡಬೇಕು. ಮಳೆ ಎಲ್ಲಾ ನಿಂತು ಸಹಜ ಸ್ಥಿತಿ ಬಂದ ಬಳಿಕ ಸ್ವಯಂ ಸೇವಾ ಸಂಘಟನೆಗಳು ಕೊಡಗನ್ನು ಮತ್ತೆ ಕಟ್ಟುವ ಕೆಲಸಕ್ಕೆ ಕೈ ಹಾಕುವುದು ಉತ್ತಮ.

ptv

Advertisements

One Comment on “ತನ್ನದೇ ವಾಹಿನಿಯನ್ನು ಬೋಗಸ್ ಅಂದ್ರು ಬಿಟ್ರು ರಂಗಣ್ಣ….!

  1. Pingback: ಇವತ್ತು ಸೋಷಿಯಲ್ ಮೀಡಿಯಾದಲ್ಲಿ ಹಿರೋ ಉಪ್ಪಳದ ಶೆಟ್ಟಿ… ಯಾಕೆ ಗೊತ್ತಾ…?

Leave a Reply

%d bloggers like this: