ಚಿತ್ರದ ಫೋಟೋ ಸಖತ್ ಹಾಟ್ – ನಡುವೆ ಅಂತರವಿರಲಿ ಎಂದು ಅಂತರವಿಲ್ಲದೆ ನಟಿಸಿದ ಐಶಾನಿ ಶೆಟ್ಟಿ

ಐಶಾನಿ ಶೆಟ್ಟಿ ವಾಸ್ತು ಪ್ರಕಾರ ಹಾಗೂ ರಾಕೆಟ್ ಸಿನಿಮಾಗಳಲ್ಲಿ ನಟಿಸಿ ಸುದ್ದಿ ಮಾಡಿದ್ದರು. ವಾಸ್ತು ನೋಡದೆ ರಾಕೆಟ್ ಹತ್ತಿದ್ದರೆ ಅನ್ನುವ ಅನುಮಾನ ಕೂಡಾ ಮೂಡಿ ಬಂದಿತ್ತು. ಅದಕ್ಕೆ ಕಾರಣ ರಾಕೆಟ್ ನಂತರ ಅವರು ಚಂದನವನದಲ್ಲಿ ಕಾಣಿಸಿಕೊಂಡಿರಲಿಲ್ಲ.

ರಾಕೆಟ್‌ ಚಿತ್ರದ ನಂತರ ಐಶಾನಿ ಶೆಟ್ಟಿ ಅಕ್ಷರಶಃ ಮಾಯವಾಗಿದ್ದರು. ಐಶಾನಿ ಶೆಟ್ಟಿ ಎಲ್ಲಿ ಹೋದರು ಎಂದು ಹುಡುಕಿದರೆ, ಅವರು ತಮ್ಮ ಸ್ಟಡೀಸ್‌ ಮುಗಿಸುತ್ತಿದ್ದಾರೆ ಎಂಬ ಉತ್ತರ ಗಾಂಧಿನಗರದಿಂದ ಬಂದಿತ್ತು. ಆ ನಂತರ ಅವರು ಕಾಜಿ ಎಂಬ ಕಿರುಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ ಎಂಬ ಸುದ್ದಿ ಬಂತು. ಕಾಜಿ ಮುಗಿದಿರುವುದಷ್ಟೇ ಅಲ್ಲ, ಈಗಾಗಲೇ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಿರುಚಿತ್ರೋತ್ಸವದಲ್ಲೂ ಆಯ್ಕೆಯಾಗಿ ಪ್ರದರ್ಶನ ಕಂಡಿದೆ. ಆ ಖುಷಿಯಲ್ಲಿದ್ದ ಐಶಾನಿ ಶೆಟ್ಟಿಗೆ, ದೆಹಲಿಯಲ್ಲಿ ನಡೆಯುತ್ತಿರುವ 8ನೇ ದಾದಾ ಸಾಹೇಬ್‌ ಫಾಲ್ಕೆ ಅಕಾಡೆಮಿ ಫಿಲ್ಮ್ ಫೆಸ್ಟಿವಲ್‌ಗೆ ಆಯ್ಕೆಯಾಗಿ ಎರಡು ಪ್ರಶಸ್ತಿಗಳನ್ನೂ ಗೆದ್ದಿದೆ.

ಇದೀಗ ಕಾಜಿ ಮುಗಿಸಿ ಪ್ರಶಸ್ತಿ ಗೆದ್ದಿರುವ ಖುಷಿಯಲ್ಲಿರುವ ಅವರು ಮೆಲ್ಲನೆ ಒಂದೊಂದೇ ಸಿನೆಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದರ ಮೊದಲ ಹಂತವಾಗಿ ಅವರು ನಡುವೆ ಅಂತರವಿರಲಿ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು. ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ನಟಿಸಿದ್ದಾರೆ.

Naduve Antaravirali6
ಪ್ರಖ್ಯಾತ್ ಪರಮೇಶ್ ಎಂಬ ಹೊಸ ಹುಡುಗ ನಾಯಕನಾಗಿರುವ ನಡುವೆ ಅಂತರವಿರಲಿ ಚಿತ್ರದಲ್ಲಿ ಐಶಾನಿ ಶೆಟ್ಟಿ ಅಂತರವಿರದ ದೃಶ್ಯಗಳಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿದ್ದಾರೆ.

Naduve Antaravirali4

ಎಳೆ ವಯಸ್ಸಿನ ಉಸಿರಿದು ಬಿಸಿ
ತಿಳಿ ಮನಸ್ಸಿನ ಕನಸಿದು ಹಸಿ
ಮೊದಲನೇ ಸಲ ಮಿಲನದ ಕುಸಿ
ಬಯಕೆ ಮಳೆ ಜೋರಾಗಿ ಧಾವಿಸಿ
ಸಾಲಿನ ಹಾಡುಗಳಲ್ಲಿ ಐಶಾನಿ ನಟನೆ ನೋಡಿದರೆ ನಿದ್ದೆ ಕಳೆದುಕೊಳ್ಳುವುದು ಗ್ಯಾರಂಟಿ.

Naduve Antaraviral5

ಒಂದು ಹಾಡಿನಲ್ಲಿ ಹೀಗೆ ಕಾಣಿಸಿಕೊಂಡಿರುವ ರಾಕೆಟ್ ಬೆಡಗಿ ಇಡೀ ಚಿತ್ರದಲ್ಲಿ ಹೇಗೆ ಕಾಣಿಸಿಕೊಂಡಿದ್ದಾರೋ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: