Advertisements

ಗುರು ಶಿಷ್ಯರ ಸಂಬಂಧವನ್ನು ಜಗತ್ತಿಗೆ ಸಾರಿ ಹೇಳಿದ ಪ್ರಧಾನಿ ನರೇಂದ್ರ ಮೋದಿ

ರಾಷ್ಟ್ರೀಯ ಸ್ಮೃತಿ ಸ್ಥಳದತ್ತ ಮಾಜಿ ಪ್ರಧಾನಿ ವಾಜಪೇಯಿ ಪಾರ್ಥಿವ ಶರೀರದ ಮೆರವಣಿಗೆ ನಡೆಯುತ್ತಿದ್ದರೆ, ವಾಹನ ಹಿಂದೆ ಪ್ರಧಾನಿ ನರೇಂದ್ರಮೋದಿ   ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಡೆದು ಕೊಂಡು ಸಾಗಿದರು. ಏನಿಲ್ಲ ಅಂದರೂ ಬಿಜೆಪಿ ಕಚೇರಿಯಿಂದ ಅಲ್ಲಿಗೆ 9 ಕಿಲೋ ಮೀಟರ್ ದೂರವಿದೆ.

ಅಂತಿಮ ಯಾತ್ರೆಯಲ್ಲಿ ಕಾಲ್ನಡಿಗೆಯಲ್ಲೇ  ಲಕ್ಷಾಂತರ ಜನರ ಮಧ್ಯೆ ಪ್ರಧಾನಿ ಎಂಬ ಹುದ್ದೆಯನ್ನು ಪಕ್ಕಕ್ಕಿಟ್ಟು ನೆಚ್ಚಿನ ಗುರುವಿನ ಅಂತಿಮ ಯಾತ್ರೆಯಲ್ಲಿ ನಡೆದು ಸಾಗುವ ಮೂಲಕ  ಗುರು- ಶಿಷ್ಯರ ನಡುವಿನ ಸಂಬಂಧವನ್ನು ಜಗತ್ತಿಗೆ ಸಾರಿ ಹೇಳಿದರು.

ಪಾರ್ಥಿವ ಶರೀರದ ವಾಹನದ ಹಿಂದೆ ಪ್ರಧಾನಿ ನರೇಂದ್ರಮೋದಿ ಜೊತೆಗೆ ಅಮಿತ್ ಶಾ ಸೇರಿದಂತೆ ಸಂಪುಟ ಸಚಿವರು, ಬಿಜೆಪಿ ಪಕ್ಷದ ಹಿರಿಯ ನಾಯಕರು ಸಾಗಿದರು.

ಅಂದು ವಾಜಪೇಯಿ ಎಲ್ಲೋ ಇದ್ದ ಮೋದಿಯನ್ನು ಕರೆದು ಗುಜರಾತ್ ಸಿಎಂ ಆಗು ಎಂದು ಹರಸಿ ಹಾರೈಸಿ ಕಳುಹಿಸದೇ ಇದ್ದರೆ ಎಂದು ಮೋದಿ ಪ್ರಧಾನಿಯೇ ಆಗುತ್ತಿರಲಿಲ್ಲ ಅನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

 

Advertisements

One Comment on “ಗುರು ಶಿಷ್ಯರ ಸಂಬಂಧವನ್ನು ಜಗತ್ತಿಗೆ ಸಾರಿ ಹೇಳಿದ ಪ್ರಧಾನಿ ನರೇಂದ್ರ ಮೋದಿ

  1. Pingback: ಜಾರ್ಜ್ ಫರ್ನಾಂಡಿಸ್ ಇನ್ನಿಲ್ಲ…ಕಳಚಿತು ರಾಷ್ಟ್ರ ರಾಜಕಾರಣದ ಕೊಂಡಿ – torrentspree

Leave a Reply

%d bloggers like this: