Advertisements

ಸೆಲೆಬ್ರೆಟಿಗಳೇ ಎಚ್ಚೆತ್ತುಕೊಳ್ಳಿ – ಕಿಕಿ ಎಂದು ಕೇಕೆ ಹಾಕಿದ ನಿವೇದಿತಾ ಹೊಸ ಚಾಲೆಂಜ್ ಸ್ವೀಕರಿಸೋದಿಲ್ವ..?

ಸಾಮಾಜಿಕ ಜಾಲತಾಣದಲ್ಲಿ ಚಾಲೆಂಜ್ ಗಳಿಗೆ ಭರವಿಲ್ಲ. ಆದರೆ ಸಮಾಜಕ್ಕೆ ಅದರಿಂದ ನಯಾ ಪೈಸೆ ಲಾಭವಿಲ್ಲ, ಐಸ್ ಬಕೆಟ್ ಅಂತೆ, ಕೀಕೀ ಡ್ಯಾನ್ಸ್ ಅಂತೆ… ಹೀಗೆ ಕಂತೆ ಕಂತೆ ಸವಾಲುಗಳು.

ಆದರೆ ನಟ ಸಿದ್ದಾರ್ಥ್ ಈ ಚಾಲೆಂಜ್ ಗೆ ಹೊಸ ರೂಪ ಕೊಟ್ಟಿದ್ದಾರೆ. ಕಂಗೆಟ್ಟಿರುವ ಕೇರಳಕ್ಕೆ ಸಹಾಯಕ್ಕೆ ಮಾಡಿ ತೋರಿಸಿ ಎಂದು ಚಾಲೆಂಜ್ ಹಾಕಿದ್ದಾರೆ. ಮಾತ್ರವಲ್ಲದೆ ತಾವೇ 10 ಲಕ್ಷ ರೂಪಾಯಿ ಹಣವನ್ನು ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರವಾನಿಸಿದ್ದಾರೆ.

“I dare you. I beg of you! What do I have to do to make you read and share this? I did the…. ಎಂದು ಬರೆದುಕೊಂಡಿರುವ ಅವರು ಕೇರಳಕ್ಕೆ ಸಹಾಯ ಮಾಡಿ ಎಂದು ಕೋರಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಸಾವಿರಾರು ಜನ ತಮ್ಮ ಕೈಲಾದ ಹಣವನ್ನು ಕೇರಳಕ್ಕೆ ರವಾನಿಸಿದ್ದಾರೆ. ಕೆಲ ಸೆಲೆಬ್ರೆಟಿಗಳು ಕೂಡಾ  ಸಹಾಯ ಹಸ್ತ ಚಾಚಿದ್ದಾರೆ.ಇಲ್ಲಿ ಮೊತ್ತ ಮುಖ್ಯವಲ್ಲ ಸಹಾಯ ಮಾಡುವ ಮನಸ್ಸು ಮುಖ್ಯ.

ಪುನೀತ್, ದರ್ಶನ್ ಸೇರಿದಂತೆ ಕನ್ನಡದ ಅನೇಕ ಸೆಲೆಬ್ರೆಟಿಗಳು ಕೊಡಗು ಮತ್ತು ಕೇರಳದ ಜನತೆಯ ಸಂಕಷ್ಟಕ್ಕೆ ಮಿಡಿದಿದ್ದಾರೆ.
ಆದರೆ ಕಿಕಿ ಎಂದು ಡ್ಯಾನ್ಸ್ ಮಾಡಿದ ನಿವೇದಿತಾ ಕಣ್ಣಿಗೆ ಈ ಚಾಲೆಂಜ್ ಬಿದ್ದ ಹಾಗಿಲ್ಲ. ನನಗೇನೂ ಗೊತ್ತಿಲ್ಲ ಎಂದು ಆಡುವ ಈಕೆಗೆ ಈ ಚಾಲೆಂಜ್ ಸ್ವೀಕರಿಸುವ ತಾಕತ್ತು ಇಲ್ಲವೇ.

ನಮಗೇನೂ ನಿವೇದಿತಾ ಮೇಲೆ ಕೋಪವಿಲ್ಲ.ಆದರೆ ಕಿಕಿ ಡ್ಯಾನ್ಸ್ ಅನ್ನುವ ಮಾರಿಯನ್ನು ಹೊಡೆದು ಓಡಿಸಲು ಎಲ್ಲರೂ ಪ್ರಯತ್ನ ಪಡುತ್ತಿದ್ದರೆ,ಈಕೆ ತಾನು ಸೆಲೆಬ್ರೆಟಿ ಅನ್ನುವಂತೆ ಕುಣಿದಿರುವುದರ ವಿರುದ್ಧದ ಆಕ್ರೋಶ ಇನ್ನೂ ಇದೆ. ಆಮೇಲೆ ಚಾನೆಲ್ ಗಳ ಕ್ಯಾಮಾರ ಮುಂದೆ ಕಣ್ಣೀರು ಸುರಿಸಿ ನನಗೆ ಗೊತ್ತೇ ಇರಲಿಲ್ಲ ಅಂದಿರುವುದು ಎಷ್ಟರ ಮಟ್ಟಿಗೆ ಸರಿ. ಈಗ ನಟ ಸಿದ್ದಾರ್ಥ್ ಕೊಟ್ಟಿರುವ ಚಾಲೆಂಜ್ ಒಪ್ಪಿಕೊಳ್ಳಿ. ಮಾಡಿರುವ ತಪ್ಪಿಗೆ ಪ್ರಾಯಶ್ಚಿತವಾದರೂ ಆಗಬಹುದು.

ನಿವೇದಿತಾ ಮಾತ್ರವಲ್ಲ ಕನ್ನಡ ಅನೇಕ ಸೆಲೆಬ್ರೆಟಿಗಳು ಎಚ್ಚೆತ್ತುಕೊಳ್ಳಬೇಕಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಮಾತ್ರ ಸೆಲೆಬ್ರೆಟಿಗಳಾಗಿದ್ದರೆ ಸಾಲದು. ನಿಮ್ಮದೇ ಫೋಟೋಗಳಿಗೆ ಲೈಕ್ ಕೊಡುವ ಮಂದಿ ಸಂಕಷ್ಟದಲ್ಲಿದ್ದಾರೆ. ನಿಮ್ಮ ಸೀರಿಯಲ್ ಗಳಿಗೆ ರೇಟಿಂಗ್ ತಂದುಕೊಡುವ ಮಂದಿ ನೋವಿನಲ್ಲಿದ್ದಾರೆ. ನಿಮ್ಮ ಚಿತ್ರಗಳು ಕಾಸು ಮಾಡುವಂತೆ ಮಾಡುವ ಮಂದಿ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ಸೆಲೆಬ್ರೆಟಿಗಳೇ ಎಚ್ಚೆತ್ತುಕೊಳ್ಳಿ. ಪುನೀತ್ , ದರ್ಶನ್, ಸುದೀಪ್, ಯಶ್ ಹೀಗೆ ಅನೇಕ ನಾಯಕರಂತೆ ಹೃದಯ ವೈಶಾಲ್ಯವನ್ನು ರೂಢಿಸಿಕೊಳ್ಳಿ.

Advertisements

Leave a Reply

%d bloggers like this: