Advertisements

ಯಾಕಮ್ಮ ಲೇಟು..? ನೀವು ಬೇಗ ಬಂದ್ರೆ ಡಿಸಿನೂ ಬರಬೇಕಾ…?

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹಾಸನ ಉಸ್ತುವಾರಿ ಸಚಿವ ರೇವಣ್ಣ ಗರಂ ಆದ ಘಟನೆ ನಡೆದಿದೆ.ಹಾಸನ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭ 9 ಗಂಟೆಗೆ ಆಯೋಜಿತವಾಗಿತ್ತು. ಪ್ರತೀ ಸಲ ಲೇಟಾಗಿ, ಅಥವಾ ಕಾರ್ಯಕ್ರಮ ಶುರುವಾಗಲು ಇನ್ನೊಂದಿಷ್ಟು ನಿಮಿಷ ಇರುತ್ತದೆ ಅನ್ನುವಾಗ ಬರುವಾಗ ರೇವಣ್ಣ ಇಂದು 20 ನಿಮಿಷ ಮುಂಚೆಯೇ ಸ್ಥಳಕ್ಕೆ ಬಂದಿದ್ದರು.

ಆದರೆ ಸಚಿವರು ಲೇಟಾಗಿ ಬರ್ತಾರೆ ಎಂದು ಡಿಸಿ ಮೇಡಂ ಕೂಡಾ ನಿಧಾನವಾಗಿಯೇ ಬಂದಿದ್ದಾರೆ. ಆದರೆ ಸಚಿವರು ಬಂದ್ರೂ ಡಿಸಿ ಬಂದಿಲ್ಲ ಅಂದ್ರೆ ಏನರ್ಥ ಎಂದು ರೇವಣ್ಣ ಪಿತ್ತ ನೆತ್ತಿಗೇರಿದೆ.

ಹೀಗಾಗಿ 9 ಗಂಟೆ ದಾಟುತ್ತಿದ್ದಂತೆ ಸ್ಥಳಕ್ಕೆ ಬಂದ ಸಿಂಧೂರಿಯವರನ್ನು ರೇವಣ್ಣ ತರಾಟೆಗೆ ತೆಗೆದುಕೊಂಡಿದ್ದಾರೆ. ಹೀಗೆಲ್ಲಾ ಮಾಡಿದ್ರೆ ಆಗಲ್ಲ ಎಂದು ಲೈಟಾಗಿ ಗದರಿದ್ದಾರೆ.

ಇನ್ನು ಡಿಸಿ ಮೇಲಿನ ಸಿಟ್ಟು ಕೆಲ ಹೊತ್ತು ಹಾಗೇ ಇತ್ತು. ಹೀಗಾಗಿ ಡಿಸಿಯವರನ್ನು ಮಾತನಾಡಿಸುವ ಗೋಜಿಗೆ ರೇವಣ್ಣ ಹೋಗಲಿಲ್ಲ. ಒಂದಿಷ್ಟು ಹೊತ್ತಾದ ಮೇಲೆ ಸಿಟ್ಟು ತಣಿದ ರೇವಣ್ಣ ಕೂಲ್ ಆಗಿಯೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Advertisements

One Comment on “ಯಾಕಮ್ಮ ಲೇಟು..? ನೀವು ಬೇಗ ಬಂದ್ರೆ ಡಿಸಿನೂ ಬರಬೇಕಾ…?

  1. Pingback: ಸಸ್ಪೆಂಡ್ ಮಾಡುತ್ತಾ ಕೂತ್ರೆ…? ಡಿಸಿ ಸಿಂಧೂರಿ ಮಾತು ಕೇಳಿ ರೇವಣ್ಣ ಗಪ್ ಚುಪ್ – torrentspree

Leave a Reply

%d bloggers like this: