Advertisements

ಲೋಕಾ ಅಖಾಡಕ್ಕೆ ಉಪೇಂದ್ರ – ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ರಿಯಲ್ ಸ್ಟಾರ್

ಉಪೇಂದ್ರ ರಾಜಕೀಯ ಪ್ರವೇಶ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ ನಂಬಿದವರೇ ಕೈ ಕೊಟ್ಟ ಕಾರಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕನಸು ನನಸಾಗಿರಲಿಲ್ಲ.

ಹೀಗೆ ಮತ್ತೊಮ್ಮೆ ರಾಜಕಾರಣದ ರಂಗ ಪ್ರವೇಶಕ್ಕೆ ರಿಯಲ್ ಸ್ಟಾರ್ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ಕಳೆದ ಬಾರಿ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಮೂಲಕ ರಾಜಕಾರಣ ಪ್ರವೇಶಿಸಿದ್ದ ಉಪೇಂದ್ರ, ನಿಶ್ಚಿತಾರ್ಥಕ್ಕೂ ಮುನ್ನವೇ ಡಿವೋರ್ಸ್ ಅನ್ನುವಂತೆ ಆ ಪಕ್ಷದಿಂದ ಹೊರಬಂದಿದ್ದರು.

ಈಗ ಹೊಸ ಪಕ್ಷವೊಂದನ್ನು ಹುಟ್ಟು ಹಾಕಲು ಸಿದ್ದವಾಗಿರುವ ಉಪೇಂದ್ರ ‘ಉತ್ತಮ ಪ್ರಜಾಕೀಯ’ ಎಂಬ ಪಕ್ಷವನ್ನು ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಎಂಟ್ರಿ ಕೊಡಲಿರುವ ಉಪೇಂದ್ರ, ಸೆಪ್ಟಂಬರ್ 18ರ ತಮ್ಮ ಹುಟ್ಟುಹಬ್ಬದಂದು ಹೊಸ ಪಕ್ಷದ ಕುರಿತು ಮಾಹಿತಿ ನೀಡಲಿದ್ದಾರೆ. ಅಂದೇ ಪಕ್ಷದ ಚಿಹ್ನೆಯೂ ಬಿಡುಗಡೆಯಾಗಲಿದೆ.

ಈ ನಡುವೆ ಲೋಕಸಭೆ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಉಪೇಂದ್ರ ತಾವು ಲೋಕಸಭೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಬೆಂಗಳೂರಿನ ಕ್ಷೇತ್ರವೊಂದರ ಮೇಲೆ ಕಣ್ಣಿಟ್ಟಿರುವ ಅವರು ಗೆಲುವಿಗಾಗಿ ರಣತಂತ್ರ ಹೆಣೆಯುತ್ತಿದ್ದಾರೆ.

ಮೂಲಗಳ ಪ್ರಕಾರ ಉಪೇಂದ್ರ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಗಳಿವೆಯಂತೆ.

Uppi

Advertisements

Leave a Reply

%d bloggers like this: