Advertisements

ಸೀತಾರಾಮ ಕಲ್ಯಾಣ ಟೀಸರ್ ನಲ್ಲಿ ರಚಿತಾ ರಾಮ್ ನಾಪತ್ತೆ – ಗುಳಿಕೆನ್ನೆಯ ಬೆಡಗಿ ಹೇಳಿದ್ದೇನು..?

ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾರಾಮ ಕಲ್ಯಾಣ ಟೀಸರ್ ಬಿಡುಗಡೆಗೊಂಡ ನಂತ್ರ ಯೂ ಟ್ಯೂಬ್ ನಲ್ಲಿ ನಂಬರ್ 01 ಟ್ರೆಂಡಿಂಗ್‍ನಲ್ಲಿ ಕಾಣಿಸಿಕೊಂಡಿದ್ದು. ಹಾಗಂತ ಟ್ರೆಂಡಿಂಗ್‍ನಲ್ಲಿ ಕಾಣಿಸಿಕೊಂಡ ತಕ್ಷಣ ಅದು ಹಿಟ್ ಆಗಿದೆ ಎಂದು ಅರ್ಥವಲ್ಲ. ಅಥವಾ ಚೆನ್ನಾಗಿದೆ ಎಂದು ಅರ್ಥವಲ್ಲ. ಜನರಿಗೆ ಟೀಸರ್ ಬಗ್ಗೆ ಕುತೂಹಲವಿದ್ದ ಕಾರಣಕ್ಕೆ ಅದು ಟ್ರೆಂಡಿಂಗ್ ನಲ್ಲಿ ಕಾಣಿಸಿಕೊಂಡಿತ್ತು.

ಆದರೆ ಆಗ ಎದ್ದಿದ್ದು ಟೀಸರ್ ನಲ್ಲಿ ಚಿತ್ರದ ನಾಯಕಿ ನಟಿ ರಚಿತಾ ರಾಮ್ ಯಾಕೆ ಕಾಣಿಸಿಕೊಂಡಿಲ್ಲ ಎಂದು. ಬೇಕು ಅಂತಾ ಕತ್ತರಿ ಹಾಕಿದ್ರ, ಎಲ್ಲಿ ನಿಖಿಲ್ ಸೈಡ್ ಲೈನ್ ಆಗುತ್ತಾರೆ ಅನ್ನುವ ಭಯವೇ ಅನ್ನುವ ಪ್ರಶ್ನೆ ಎದ್ದಿತ್ತು. ಆದರೆ ಇದೀಗ ಈ ಸಂಬಂಧ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ರಚಿತಾ ರಾಮ್ ತಾವು ಟೀಸರ್ ನಲ್ಲಿ ಯಾಕಿಲ್ಲ ಅನ್ನುವುದಕ್ಕೆ ಉತ್ತರಿಸಿದ್ದಾರೆ.

ಟೀಸರ್ ನಲ್ಲಿ ಯಾರು ಕಾಣಿಸಿಕೊಂಡಿದ್ದಾರೆ ಅನ್ನುವುದು ಮುಖ್ಯವಲ್ಲ. ಸಿನಿಮಾದಲ್ಲಿ ನಾನು ನಟಿಸಿದ್ದೇನೆ ಎಂಬುದೇ ಮುಖ್ಯ ಎಂದಿದ್ದಾರೆ.

ಜೊತೆಗೆ ಇನ್ನೇನು ಕೆಲವು ದಿನಗಳಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.ಆಗ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಎಂದಿದ್ದಾರೆ. ಆದರೂ ರಚಿತಾ ರಾಮ್ ಯಾಕಿಲ್ಲ ಅನ್ನುವ ಪ್ರಶ್ನೆ ಎತ್ತಿದ ಜನರಿಗೆ ಧನ್ಯವಾದ ಹೇಳಿರುವ ರಚಿತಾ ರಾಮ್, ಜನರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದಿದ್ದಾರೆ.

Advertisements

One Comment on “ಸೀತಾರಾಮ ಕಲ್ಯಾಣ ಟೀಸರ್ ನಲ್ಲಿ ರಚಿತಾ ರಾಮ್ ನಾಪತ್ತೆ – ಗುಳಿಕೆನ್ನೆಯ ಬೆಡಗಿ ಹೇಳಿದ್ದೇನು..?

  1. Pingback: ನಿಖಿಲ್ ಆಯ್ತು..ಇದೀಗ ಅಂಬಿ ಪುತ್ರನ ಜೊತೆ ರಚಿತಾ….. – torrentspree

Leave a Reply

%d bloggers like this: