Advertisements

ಲಂಡನ್ ನಲ್ಲಿ ವಸಿಷ್ಟ ಸಿಂಹ ಹಾಗೂ ನಟಿ ಮಾನ್ವಿತಾ ಬಂಧನದ ಅಸಲಿ ಕಥೆಯೇ ಬೇರೆ

ಕನ್ನಡದ ಖ್ಯಾತ ನಟರಾದ ವಸಿಷ್ಟ ಸಿಂಹ ಹಾಗೂ ನಟಿ ಮಾನ್ವಿತಾ ಹರೀಶ್ ರನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ ಅನ್ನುವ ಸುದ್ದಿ ನಿನ್ನೆ ಹರಿದಾಡಿತ್ತು. ಆದರೆ ವಿಚಾರಿಸಿದಾಗ ಅವರನ್ನು ಪೊಲೀಸರು ಬಿಟ್ಟು ಕಳುಹಿಸಿದರು ಅನ್ನುವ ಸುದ್ದಿ ಸಿಕ್ತು.ಅಸಲಿಗೆ ಪೊಲೀಸರು ಇವರಿಬ್ಬರನ್ನು ಬಂಧಿಸಿಯೇ ಇಲ್ಲ. ಬದಲಾಗಿ ಇವರಿಬ್ಬರ ಬಳಿಗೆ ಪೊಲೀಸರು ಬಂಧಿಸಿದ್ದಾರೆ.

ಲಂಡನ್ ಖ್ಯಾತ ಬಕ್ಕಿಂಗ್ ಹ್ಯಾಮ್ ಪ್ಯಾಲೆಸ್ ಎದುರು ವಸಿಷ್ಟಾ ಸಿಂಹ ಹಾಗೂ ನಟಿ ಮಾನ್ವಿತಾ ನಾಗತಿಹಳ್ಳಿ ಅವರ ಇನ್ನೂ ಹೆಸರಿಡದ ಚಿತ್ರವೊಂದರ ಡ್ಯುಯೆಟ್ ಹಾಡಿಗೆ ನೃತ್ಯ ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಹೋಗುತ್ತಿದ್ದ ಸ್ಥಳೀಯರು, ಜೋಡಿಯೊಂದು ಅರಮನೆ ಮುಂದೆ ಡ್ಯಾನ್ಸ್ ಮಾಡುತ್ತಿದೆ ಎಂದು ಪೊಲೀಸರಿಗೆ ಕರೆ ಮಾಡಿದ್ದರು.

ಕರೆ ಮಾಡಿದ ಗಂಟೆಯ ನಂತರ ಹೋಗಲು ಅವರೇನೂ ನಮ್ಮ ಪೊಲೀಸರಲ್ಲ. ಲಂಡನ್ ಪೊಲೀಸ್. ತಕ್ಷಣ ಕರೆ ಮಾಡಿದ ವ್ಯಕ್ತಿಯ ದೂರನ್ನು ಸ್ವೀಕರಿಸಿ ಅರಮನೆಯತ್ತ ಧಾವಿಸಿದ್ದಾರೆ.

London police arrested Vasishta Simha & Manvitha Harish

ಏನಾಗುತ್ತಿದೆ ಇಲ್ಲಿ ಎಂದು ವಿಚಾರಿಸಿದಾಗ ನಾಗತಿ ಹಳ್ಳಿ ಟೀಂ ಇದೊಂದು ಸಿನಿಮಾ ಶೂಟಿಂಗ್ ಅಂದಿದೆ. ಅವರಿಗೇನು ಗೊತ್ತು ವಸಿಷ್ಟಾ, ಮಾನ್ವಿತ ಬಗ್ಗೆ. ಪೊಲೀಸರು ಚಿತ್ರೀಕರಣದ ಅನುಮತಿ ಪತ್ರ ಮತ್ತು ಇತರೆ ದಾಖಲೆಗಳನ್ನು ಕೇಳಿದ್ದಾರೆ. ಚಿತ್ರೀಕರಣದ ತಂಡ ಅವೆಲ್ಲವನ್ನೂ ಒದಗಿಸಿದ ನಂತರ ಪರಿಶೀಲನೆ ನಡೆಸಿದ ಪೊಲೀಸರು ಸಮಾಧಾನಗೊಂಡಿದ್ದಾರೆ. ಒದಗಿಸಿದ ಬಳಿಕ ಪೊಲೀಸ್ ಅಧಿಕಾರಿ ಚಿತ್ರೀಕರಣಕ್ಕೆ ಅನುವು ಮಾಡಿಕೊಟ್ಟು ಚಿತ್ರತಂಡಕ್ಕೆ ಶುಭಕೋರಿ ಅಲ್ಲಿಂದ ತೆರಳಿದ್ದಾರೆ.

ಆದರೆ ಈ ವೇಳೆ ಪೊಲೀಸರು ಬಂದ ಘಳಿಗೆಯನ್ನು ಚಿತ್ರೀಕರಿಸಿಕೊಂಡ ನಾಗತಿಹಳ್ಳಿ ತಮ್ಮ ಟ್ವೀಟರ್ ನಲ್ಲಿ ಇವರಿಬ್ಬರ ಬಂಧನವಾಗಿದೆ ಎಂದು ಬರೆದುಕೊಂಡಿದ್ದರು. ಇದೇ ಕಾರಣಕ್ಕೆ ವಸಿಷ್ಟ ಸಿಂಹ ಹಾಗೂ ನಟಿ ಮಾನ್ವಿತಾ ಹರೀಶ್ ರನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ ಅನ್ನುವ ಸುದ್ದಿ ನಿನ್ನೆ ಹರಿದಾಡಿತು.

Advertisements

Leave a Reply

%d bloggers like this: