Advertisements

ಕ್ಯಾನ್ಸರ್  ಟ್ರೀಟ್ಮೆಂಟ್ ನಡುವೆ ಮಗನಿಗೆ ಪತ್ರ ಬರೆದ ಸೋನಾಲಿ ಬೇಂದ್ರೆ

ನ್ಯೂಯಾರ್ಕ್ ನಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿರುವ ಸೋನಾಲಿ ಬೇಂದ್ರೆ ತಮ್ಮ ಮಗ ರಣವೀರ್ನ 13ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾನೆ.

ಮಗನ ಹುಟ್ಟು ಹಬ್ಬದ ಸಲುವಾಗಿಯೇ ಸೋನಾಲಿ ಪ್ರೀತಿಯ ಪತ್ರ ಬರೆದಿದ್ದು, ಮಗನೊಂದಿಗೆ ಕಳೆದ ಕ್ಷಣಗಳ ಫೋಟೋ, ವಿಡಿಯೋ ಕ್ಲಿಪ್ ಅನ್ನು  ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

ರಣವೀರ್ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಬೇಸರದಿಂದ ಹೇಳಿರುವ ಎಂದು ಸೋನಾಲಿಯ ಪತ್ರ ಇದೀಗ ವೈರಲ್ ಆಗಿದೆ.

“ರಣವೀರ್ ! ನೀನು ನನ್ನ ಮಗ, ನನ್ನ ಚಂದಮ, ನನ್ನ ನಕ್ಷತ್ರ, ನನ್ನ ಆಕಾಶ, ನೀನು ನನ್ನ ಪ್ರಪಂಚ…ಹೀಗೆಲ್ಲ ಹೇಳುವುದು ಅತಿಯೆಂದು ಅನ್ನಿಸಬಹುದು. ಈ ಜನ್ಮದಿನದಂದು ನಿನಗೆ ನಾನಿದನ್ನು ಹೇಳಲೇಬೇಕು. ನಿನ್ನನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನೀನೀಗ ಟೀನೇಜರ್. ಆದರೆ ನೀನು ದೊಡ್ಡವನಾಗುತ್ತಿದ್ದೀಯಾ ಎಂಬುದನ್ನು ನನಗೆ ಅಷ್ಟು ಬೇಗ ಸ್ವೀಕರಿಸಲಾಗದು. ನನಗಿನ್ನು ಚಿಕ್ಕ ಮಗು ನೀನು. ನಿನ್ನ ಬಗ್ಗೆ ನಾನೆಷ್ಟು ಹೆಮ್ಮೆ ಪಡುತ್ತೇನೆ ಎಂಬುದನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ. ನಿನ್ನಲ್ಲಿರುವ ಬುದ್ಧಿ, ಹಾಸ್ಯ ಪ್ರವೃತ್ತಿ, ಕರುಣಾ ಗುಣ, ತುಂಟತನ ಇವೆಲ್ಲ ನನ್ನಲ್ಲಿ ನಿನ್ನ ಬಗ್ಗೆ ತುಂಬ ಹೆಮ್ಮೆ, ಪ್ರೀತಿಯನ್ನು ಹುಟ್ಟಿಸಿವೆ. ಇದೇ ಮೊದಲ ಬಾರಿಗೆ ನಾನು ನಿನ್ನ ಜನ್ಮದಿನದ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಇಲ್ಲಿಂದಲೇ ಅಪ್ಪುಗೆ ನಿನಗೆ” ಎಂದಿದ್ದಾರೆ.

Advertisements

Leave a Reply

%d bloggers like this: