Advertisements

ತಬ್ಬಲಿ ಯುವತಿಗೆ ಮೆಡಿಕಲ್ ಸೀಟು ಕೊಡಿಸಿದ ಕುಮಾರಣ್ಣ

ಕುಮಾರಸ್ವಾಮಿಯವರ ಹಲವು ಕಾರ್ಯಕ್ರಮಗಳನ್ನು ಟೀಕಿಸಿರಬಹುದು. ಆದರೆ ಅವರ ಒಳ್ಳೆಯ ಕೆಲಸಗಳನ್ನು ಟೀಕಿಸಿರುವುದರಲ್ಲಿ ಅರ್ಥವಿಲ್ಲ.

ಜನತಾದರ್ಶನ ಮತ್ತು ಗ್ರಾಮವಾಸ್ತವ್ಯ ಅನ್ನುವ ಎರಡು ಅಭೂತಪೂರ್ವ ಕಾರ್ಯಕ್ರಮಗಳನ್ನು ರೂಪಿಸಿದ ಕುಮಾರಸ್ವಾಮಿ ಆ ಮೂಲಕ ಮಾಡಿದ ಜನಸೇವೆ ಅಪಾರ.

ಜನತಾದರ್ಶನದಲ್ಲಿ ಕಷ್ಟ ಎಂದು ಬಂದ ಮಂದಿಯನ್ನು ಕುಮಾರಸ್ವಾಮಿ ಬರೀಕೈಯಲ್ಲಿ ಕಳುಹಿಸಿದ ಉದಾಹರಣೆ ಇಲ್ಲ. ಒತ್ತಡ ಎಷ್ಟೇ ಇದ್ದರೂ ಜನತಾದರ್ಶನದಲ್ಲಿ ಸಿಡುಕಿದವರಲ್ಲ ಕುಮಾರಸ್ವಾಮಿ.

ಹೀಗೆ ತಬ್ಬಲಿ ಯುವತಿಯೊಬ್ಬಳಿಗೆ ಜನತಾದರ್ಶನದಲ್ಲಿ ನೀಡಿದ ಭರವಸೆಯನ್ನು ಕುಮಾರಸ್ವಾಮಿ ನೆರವೇರಿಸಿದ್ದಾರೆ.

ನವಲಗುಂದ ತಾಲೂಕು ಹಾಲಕುಸುಗಲ್ ನ ದಿವ್ಯ ರಾಣಿ ತಂದೆ ತಾಯಿಯನ್ನು ಕಳೆದುಕೊಂಡು ಬೆಳೆದ ಹುಡುಗಿ. ಅನಾಥೆಯಾಗಿ ಬೆಳೆದರೂ ಆಕೆ ಪಿಯುಸಿಯಲ್ಲಿ ಶೇ.82 ಹಾಗೂ ನೀಟ್ ನಲ್ಲಿ 9 ಸಾವಿರ Rank ಪಡೆದಿದ್ದಳು. ಕಣ್ಣ ಮುಂದೆ ವೈದ್ಯಳಾಗಬೇಕು ಅನ್ನುವ ಕನಸಿತ್ತು. ಆದರೆ ಬಡತನ ಅದಕ್ಕೆ ಬಂಡೆಕಲ್ಲಾಗಿತ್ತು.

Divya

ಈ ವೇಳೆ ರೈತ ಸಂಘದ ಮಾಣಿಕ್ಯ ಎಂಬವರು ದಿವ್ಯ ರಾಣಿಯನ್ನು ಜನತಾದರ್ಶನಕ್ಕೆ ಕರೆ ತಂದಿದ್ದರು. ಈ ವೇಳೆ ದಿವ್ಯ ರಾಣಿಯ ಕಷ್ಟ ಹಾಗೂ ಉತ್ಸಾಹ ಕೇಳಿದವರು, ವೈದ್ಯಕೀಯ ಸೀಟು ನಾನು ಕೊಡಿಸುತ್ತೇನೆ. ಓದಿ ಸಾಧಿಸುತ್ತೇನೆ ಅನ್ನುವ ಭರವಸೆ ಕೊಡು ಎಂದಿದ್ದರು. ಇದಕ್ಕೆ ಸೈ ಎಂದು ದಿವ್ಯ ಊರಿಗೆ ಹಿಂತಿರುಗಿದ್ದರು. ಇದೀಗ ಬೆಂಗಳೂರಿನ ಸಪ್ತಗಿರಿ ಕಾಲೇಜಿನಲ್ಲಿ ಪ್ರವೇಶಕ್ಕೆ ಅವಕಾಶ ದೊರೆತಿದ್ದು, ಇಂದಿನಿಂದ ದಿವ್ಯ ರಾಣಿ ಡಾ.ದಿವ್ಯ ಅನ್ನಿಸಿಕೊಳ್ಳುವತ್ತ ಹೆಜ್ಜೆ ಹಾಕಲಿದ್ದಾರೆ.

Advertisements

Leave a Reply

%d bloggers like this: