Advertisements

ಮಮತಾ ಕೋಟೆಗೆ ಅಮಿತ್ ಶಾ ಲಗ್ಗೆ – cheap gimmick ಮೊರೆ ಹೋದ ದೀದಿ

BJP ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಯಾವುದೇ ಕಾರಣಕ್ಕೂ ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸಲು ಬಿಡುವುದಿಲ್ಲ. ಇಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಲು ಅವರಿಗೆ ಅವಕಾಶ ನೀಡೋದಿಲ್ಲ. ಅವರು ಅದು ಹೇಗೆ ಬರುತ್ತಾರೋ ನೋಡೋಣ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಕಿದ ಸವಾಲನ್ನು ಸ್ವೀಕರಿಸಿದ ಅಮಿತ್ ಶಾ ತಕ್ಕ ಉತ್ತರ ನೀಡಿದ್ದಾರೆ.

ಕೋಲ್ಕತಾ ನಗರದಲ್ಲಿ ಬಿಜೆಪಿ ಪಕ್ಷದ ರ‍್ಯಾಲಿಯನ್ನು ತಡೆಯಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿವೆ. ಹೌದು ಬಿಜೆಪಿ ಪಕ್ಷದ ಶಕ್ತಿ ಪ್ರದರ್ಶನವನ್ನು ತಡೆಯಲು ಮಮತಾ ರವರು ಮಾಡಿದ ಯೋಜನೆಗಳೆಲ್ಲವೂ ವಿಫಲವಾಗಿವೆ.

ಅಮಿತ್ ಶಾ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಕಾರ್ಯಕರ್ತರ ಮೇಲೆ ನಿನ್ನೆ ರಾತ್ರಿ ಹಲ್ಲೆ ನಡೆಸಲಾಗಿತ್ತು. ಆದರೆ ಮಮತಾ ಅವರ ವರ್ತನೆಯಿಂದ ಬೇಸತ್ತಿರುವ ಬೆಂಗಾಳಿಗಳು ಬಿಜೆಪಿಗೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇನ್ನು ಶಾ ಪ್ರವಾಸದ ಅಬ್ಬರದಿಂದ ಬೆವತು ಹೋಗಿದ್ದ ಮಮತಾ Flex, Flag ರಾಜಕೀಯದ ಮೊರೆ ಹೋಗಿದ್ದರು. ಅಮಿತ್ ಶಾ ಸ್ವಾಗತಕ್ಕೆ ಹಾಕಿದ್ದ ಫ್ಲೆಕ್ಸ್ ನಡುವೆ ಬಂಗಾಳ ವಿರೋಧಿ ಬಿಜೆಪಿ ಹಿಂದಕ್ಕೆ ಹೋಗು ಎಂಬ ಫ್ಲೆಕ್ಸ್ ನಿಲ್ಲಿಸಲಾಗಿತ್ತು.

Amith-sha-westbengal4

ಇನ್ನು ಬಿಜೆಪಿ ಬಾವುಟ ಕಟ್ಟಿದ ಜಾಗದಲ್ಲಿ ಮಮತಾ ತನ್ನ ಪಕ್ಷದ ಬ್ಯಾನರ್ ಗಳನ್ನು ಕಟ್ಟಿಸಿದ್ದರು. ನೋಡುಗರಿಗೆ ಮಮತಾ ವರ್ತನೆ ಚಿಕ್ಕ ಮಕ್ಕಳ ಆಟದಂತೆ ಕಾಣಿಸಿತ್ತು.

ಇನ್ನು ಸೇರಿದ್ದ ಬೃಹತ್ ಜನ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ,ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಅಧಿಕಾರದಿಂದ ಬೇರು ಸಮೇತ ಕಿತ್ತುಹಾಕಲು ನಾವು ಇಲ್ಲಿ ಬಂದಿದ್ದೇವೆ. ಶೀಘ್ರದಲ್ಲೇ ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯಾಗಲಿದೆ. ವೋಟ್ ಬ್ಯಾಂಕ್ ಗಾಗಿ ಮಮತಾ ಬ್ಯಾನರ್ಜಿ ಎನ್ ಆರ್ ಸಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಮಗೆ ದೇಶ ಮೊದಲು. ನಂತರ ವೋಟ್ ಬ್ಯಾಂಕ್. ಹೀಗಾಗಿ ಎನ್ಆರ್ ಸಿ ಮೂಲಕ ಎಲ್ಲಾ ಅಕ್ರಮ ವಲೆಸಿಗರನ್ನು ದೇಶದಿಂದ ಹೊರ ಹಾಕಲಾಗುವುದು ಎಂದರು.

Amith-sha-westbengal

ಹಿಂದೆ ಪಶ್ಚಿಮ ಬಂಗಾಳದಲ್ಲಿ ನಿತ್ಯ ರಬೀಂದ್ರ ಸಂಗೀತ ಆಲಿಸುತ್ತಿದ್ದೆವು, ಆದರೆ ಈಗ ಇಲ್ಲಿ ಕೇವಲ ಬಾಂಬ್‌ ಸ್ಫೋಟದ ಸದ್ದನ್ನು ಮಾತ್ರ ಕೇಳುತ್ತಿದ್ದೇವೆ ಇದಕ್ಕೆಲ್ಲಾ ದೀದಿ ಸರ್ಕಾರ ಕಾರಣ ಎಂದು ವಾಗ್ದಾಳಿ ನಡೆಸಿದ ಶಾ ಬಾಂಗ್ಲಾ ನುಸುಳುಕೋರರನ್ನು ರಕ್ಷಿಸುತ್ತಿರುವುದೇಕೆ ಎಂದು ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಬೇಕು. ಜೊತೆಗೆ ಇದೇ ವಿಚಾರದಲ್ಲಿ ರಾಹುಲ್‌ ಗಾಂಧಿ ಕೂಡ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.

Amith-sha-westbengal3

ಒಟ್ಟಿನಲ್ಲಿ ಅಮಿತ್ ಶಾ ಕಾರ್ಯಕ್ರಮ ಬಂಗಾಲದಲ್ಲಿ ಯಶಸ್ವಿಯಾಗಿದೆ, ತೃತೀಯ ರಂಗದ ಮೂಲಕ ಪ್ರಧಾನಿಯಾಗುವ ಕನಸು ಕಾಣುತ್ತಿರುವ ಮಮತಾ ಇನ್ನೊಂದಿಷ್ಟು ದಿನ ಮಾಡುವುದು ಅನುಮಾನ.

Advertisements

Leave a Reply

%d bloggers like this: