ರಾಜ್ಯಸಭೆಯ ಕಡತದಿಂದ ಪ್ರಧಾನಿ ಮಾತುಗಳು ಡಿಲೀಟ್ – ಅದು ಅಪರೂಪದ ಪ್ರಕರಣ

ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಪ್ರಧಾನಿ ಆಡಿದ ಮಾತುಗಳನ್ನು ಕಡತದಿಂದ ತೆಗೆದು ಹಾಕುವ ಪ್ರಕರಣ ಅಪರೂಪದಲ್ಲಿ ಅಪರೂಪ. ಯಾಕೆಂದರೆ ಪ್ರಧಾನಿಯಾಗಿರುವವರು ಅಷ್ಟೇ ಸೂಕ್ಷ್ಮವಾಗಿ ಮತ್ತು ಸದನ ಹಾಗೂ ಸದನ ಸದಸ್ಯರ ಗೌರವಕ್ಕೆ ಚ್ಯುತಿ ಬಾರದಂತೆ ಮಾತನಾಡುತ್ತಾರೆ.

ಆದರೆ ನಿನ್ನೆ ರಾಜ್ಯಸಭೆ ಉಪ ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ ಕೆ ಹರಿಪ್ರಸಾದ್ ಅವರು ಎನ್ ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ಅವರ ವಿರುದ್ಧ ಸೋಲನುಭವಿಸಿದ್ದರು.

ಹರಿವಂಶ್ ಅವರ ಸುಲಭ ಗೆಲುವಿನ ನಂತರ ಸದನದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಹರಿವಂಶ್ ಅವರಿಗೆ ಅಭಿನಂದಿಸುವ ವೇಳೆ ಇಂದಿನ ಚುನಾವಣೆ ಇಬ್ಬರು ಹರಿಗಳ ನಡುವಿನದಾಗಿತ್ತು ಎಂದು ಹೇಳಿ ನಂತರ ಹರಿಪ್ರಸಾದ್ ಅವರ ಹೆಸರಿನ ಮೊದಲಿಗೆ ಇರುವ ಬಿ ಕೆ ಮೊದಲಕ್ಷರವನ್ನು ಟೀಕಿಸಿ ಮಾತನಾಡಿದ್ದರು

ಬಳಿಕ ಎಚ್ಚೆತ್ತುಕೊಂಡ ಪ್ರಧಾನಿ ಹರಿಪ್ರಸಾದ್ ಅವರನ್ನು ಹೊಗಳಿ ಪ್ರಜಾಪ್ರಭುತ್ವದ ಪಾವಿತ್ರ್ಯತೆಯನ್ನು ಕಾಪಾಡಿ ತಮ್ಮ ಜವಾಬ್ದಾರಿಯನ್ನು ಈಡೇರಿಸಿದ್ದಾರೆ ಎಂದಿದ್ದರು.

ಆದರೆ ಪ್ರಧಾನಿಯವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಕೆರಳಿದ್ದರು. ಪ್ರಧಾನಿಯವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ್ದ ಬಿಕೆ ಹರಿಪ್ರಸಾದ್, ಪ್ರಧಾನಿಯವರು ತಮ್ಮ ಸ್ಥಾನದ ಮತ್ತು ಸದನದ ಗೌರವಕ್ಕೆ ಚ್ಯುತಿ ತಂದಿದ್ದಾರೆ ಎಂದು ದೂರಿದ್ದರು.

ಹೀಗಾಗಿ ಕಾಂಗ್ರೆಸ್ ಹಿರಿಯ ಮುಖಂಡ ಬಿ ಕೆ ಹರಿಪ್ರಸಾದ್ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಹೇಳಿಕೆಯನ್ನು ರಾಜ್ಯಸಭೆಯ ಕಡತದಿಂದ ಅಳಿಸಿ ಹಾಕಲಾಗಿದೆ.ಇದನ್ನು ರಾಜ್ಯಸಭೆಯ ಕಾರ್ಯದರ್ಶಿಗಳು ಕೂಡಾ ಖಚಿತಪಡಿಸಿದ್ದಾರೆ.

2013ರಲ್ಲಿ ಇದೇ ರೀತಿ ಸದನದಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಿರಿಯ ಸಚಿವ ಅರುಣ್ ಜೇಟ್ಲಿ ನಡುವಿನ ವಾಗ್ವಾದದ ಮಾತುಗಳನ್ನು ಕಡತಗಳಿಂದ ತೆಗೆದುಹಾಕಲಾಗಿತ್ತು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: