Advertisements

ಡೀಲ್ ನನಗೆ ಕೊಡಿ ರಾಫೆಲ್ ಗಿಂತ ಉತ್ತಮ ಯುದ್ಧ ವಿಮಾನ ನಿರ್ಮಿಸುತ್ತೇನೆ – ಮೋದಿಗೆ ಕಾಂಗ್ರೆಸ್ ಸಂಸದ ಸವಾಲು

ಲೋಕಸಭೆ ಚುನಾವಣೆ ಸಮೀಪದಲ್ಲಿರುವ ಸಂದರ್ಭದಲ್ಲೇ ರಾಫೆಲ್ ಯುದ್ಧ ವಿಮಾನ ಖರೀದಿ ಕುರಿತಂತೆ ಹೋರಾಟವನ್ನು ತೀವ್ರಗೊಳಿಸಲು ಕಾಂಗ್ರೆಸ್ ನಿರ್ಧರಿಸಿದೆ.

ಈ ನಡುವೆ ಲೋಕಸಭೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಸಂಸದ ಸುನಿಲ್ ಜಾಖರ್ ನಾನು ರಾಫೆಲ್ ಗಿಂತ ಉತ್ತಮ ಯುದ್ಧ ವಿಮಾನ ನಿರ್ಮಾಣ ಮಾಡುತ್ತೇನೆ. ಆ ಡೀಲ್ ಅನ್ನು ನನಗೆ ಕೊಡಿ ಎಂದು ಮನವಿ ಮಾಡಿದರು.

ಶುಕ್ರವಾರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸುನಿಲ್ ಜಾಖರ್, ಯುದ್ಧ ವಿಮಾನದ ಕಾಗದದ ಪ್ರತಿಕೃತಿಯನ್ನು ಪ್ರದರ್ಶಿಸಿ, ನಾನು ಉದ್ಯಮಿಗಳಿಗಿಂತ ಉತ್ತಮ ಯುದ್ಧ ವಿಮಾನ ತಯಾರಿಸುತ್ತೇನೆ. ನನಗೆ ಆ ಒಪ್ಪಂದ ನೀಡಿ ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಮನವಿ ಮಾಡಿದರು.

ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ , ರಾಫೆಲ್ ಒಪ್ಪಂದದಲ್ಲಿ 45 ಸಾವಿರ ಕೋಟಿ ರುಪಾಯಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು.

ಬಳಿಕ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ರಾಫೆಲ್ ಹಗರಣವನ್ನು ಜಂಟಿ ಸಂಸದೀಯ ಸಮಿತಿ ತನಿಖೆಗೆ ಒಪ್ಪಿಸಿಬೇಕು ಎಂದು ಆಗ್ರಹಿಸಿದರು.

Advertisements

Leave a Reply

%d bloggers like this: