Advertisements

ಬೆಳಗಾವಿ ರೈತನಿಗೆ ಅಚ್ಚರಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡು ಗ್ರಾಮದ 25 ವರ್ಷದ ರೈತ ರಾಹುಲ್ ಬೆಕನಾಲಕರ್ ಹಸು ಗೌರಿ ಹೆರಿಗೆ ವೇಳೆ ಗೌರಿ ಮತ್ತು ಅದರ ಕರು ಸಾವನ್ನಪ್ಪಿತ್ತು.ಹೆರಿಗೆ ವೇಳೆ ಗ್ರಾಮದಲ್ಲಿ ವೈದ್ಯಕೀಯ ಸಹಾಯ ದೊರೆಯುತ್ತಿದ್ದರೆ ಹಸು ಮತ್ತು ಕರು ಬದುಕುತ್ತಿತ್ತು. ಆದರೆ ತಮ್ಮ ಗ್ರಾಮ ಅಥವಾ ಸುತ್ತಮುತ್ತಲ ಗ್ರಾಮದಲ್ಲಿ ಪಶುವೈದ್ಯ ಚಿಕಿತ್ಸಾ ಘಟಕವಿಲ್ಲದ ಕಾರಣ ಕುಟುಂಬದ ಆದಾಯ ಮೂಲವೊಂದನ್ನು ಕಳೆದುಕೊಳ್ಳಬೇಕಾಯ್ತು.

ಹೀಗಾಗಿ ನೋವಿನಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ರಾಹುಲ್, “ತಾವು ವಾಸವಿರುವ ಹೋಬಳಿ 30 ಗ್ರಾಮಗಳನ್ನು ಹೊಂದಿದೆ. ಸರಿಯಾದ ಚಿಕಿತ್ಸೆಯಿಲ್ಲದೇ ನಮ್ಮ ಮನೆಯ ಹಸು ಮತ್ತು ಕರು ಸಾವನ್ನಪ್ಪಿತ್ತು.

2008 ರಲ್ಲಿ ನಡೆದ ಅಪಘಾತದಲ್ಲಿ ತಮ್ಮ ತಂದೆ ಸಾವನ್ನಪ್ಪಿದ್ದಾರೆ. ಹಸು ನಮ್ಮ ಕುಟುಂಬದ ಆದಾಯ ಮೂಲವಾಗಿತ್ತು ಹಸು ಮತ್ತು ಕರು ಸತ್ತ ನಂತರ ಜೀವನ ನಡೆಸುವುದು ಕಷ್ಟವಾಗಿದೆ. ತಾನು ಬಿ.ಕಾಂ ವ್ಯಾಸಂಗ ಮಾಡುತ್ತಿರುವ ನನಗೆ ಮುಂದೇನು ಅನ್ನುವು ತೋಚದಾಗಿದೆ.

ಆದರೆ ನನಗೆ ಬಂದ ಪರಿಸ್ಥಿತಿ ಮತ್ತೊಬ್ಬರಿಗೆ ಬರುವುದು ಬೇಡ.  ಹೀಗಾಗಿ ನಮ್ಮ ಗ್ರಾಮ ಅಥವಾ ಸುತ್ತಮುತ್ತಲ ಗ್ರಾಮದಲ್ಲಿ ಪಶುವೈದ್ಯ ಆಸ್ಪತ್ರೆ ಪ್ರಾರಂಭಿಸಿ ಎಂದು ಕೋರಿದ್ದರು.

ಮೇ 29 ರಂದು ಪತ್ರ ಬರೆದ ರಾಹುಲ್ ಅವರಿಗೆ ಆಗಸ್ಟ್ 6 ರಂದು ಅಚ್ಚರಿ ಕಾದಿತ್ತು.

ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಮನೆಗೆ ಭೇಟಿ ನೀಡಿ, ಮಾಹಿತಿ ಪಡೆದರು. ಜಿಲ್ಲೆಯ ಹಲವು ಅಧಿಕಾರಿಗಳಿಂದ ರಾಹುಲ್ ಅವರಿಗೆ ಕರೆ ಬಂತು.

ಪಶು ಸಂಗೋಪನಾ ಇಲಾಖೆಯ  ಬೆಂಗಳೂರಿನ ಅಧಿಕಾರಿಗಳು, ಸವದತ್ತಿ ಮತ್ತು ಮುರಗೋಡು ಅಧಿಕಾರಿಗಳು ಫೋನಿನಲ್ಲಿ ರಾಹುಲ್ ಜೊತೆ ಮಾತನಾಡಿದ್ದಾರೆ.

ಹಸು ಮತ್ತು ಕರು ಸತ್ತ ಬಗ್ಗೆ ಯಾವುದಾದರೂ ದೂರು ದಾಖಲಿಸಿದ್ದೀರಾ ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ. ನಿಮ್ಮ ಹಸು ಸತ್ತ ವಿಷಯ ಕುರಿತಂತೆ ಮೇಲಿನ ಅಧಿಕಾರಿಗಳಿಂದ ಸಿಕ್ಕಾಪಟ್ಟೆ ಒತ್ತಡವಿದೆ, ದಯವಿಟ್ಟು ಸಹಕರಿಸಿ ಎಂದಿದ್ದಾರೆ. ಆಗ್ಲೇ ಗೊತ್ತಾಗಿದ್ದು ಇದು ಮೋದಿಗೆ ಪತ್ರ ಬರೆದ ಪ್ರಭಾವ ಎಂದು.

ಇದೀಗ ಅಧಿಕಾರಿಗಳು ಪಶು ಭಾಗ್ಯ ಯೋಜನೆ ಬಗ್ಗೆ ರಾಹುಲ್ ಅವರಿಗೆ ವಿವರಿಸಿದ್ದಾರೆ ಪರಿಹಾರ ನೀಡುವ ಭರವಸೆ ಕೊಟ್ಟಿದ್ದಾರೆ. ಜೊತೆಗೆ ಪಶು ಚಿಕಿತ್ಸಾಲಯ ಸ್ಥಾಪಿಸುವ ಬಗ್ಗೆಯು ತಿಳಿಸಿದ್ದಾರೆ.

ರಾಹುಲ್ ಬರೆದಿರುವ ಪತ್ರದ ಸಾರಾಂಶ ನಿಜವೇ ಎಂದು ನೋಡಿದರೆ, ರಾಜ್ ಸರ್ಕಾರಕ್ಕೆ ನಾಚಿಕೆಯಾಗಬೇಕು.

ಮುರಗೋಡು ಸವದತ್ತಿ ತಾಲೂಕಿನಲ್ಲಿದೆ. ಪಶು ಸಂಗೋಪನಾ ಚಿಕಿತ್ಸೆ ಘಟಕ ಬೈಲಹೊಂಗಲದಲ್ಲಿದೆ. ಅಲ್ಲಿಂದ ವೈದ್ಯರು ಬಂದು ಚಿಕಿತ್ಸೆ ನೀಡಬೇಕಾದರೇ  ಪ್ರತಿ ಸಲ 5 ರಿಂದ 6 ಸಾವಿರ ರೂ ಫೀಸು ಕೇಳುತ್ತಾರೆ.

ಸವದತ್ತಿ ತಾಲೂಕಿನಲ್ಲಿ ನೂರಾರು ಮಂದಿ ಹಸುಗಳನ್ನು ಸಾಕಿದ್ದಾರೆ. ಜಾನುವಾರುಗಳಿಗೆ ತುರ್ತು ಚಿಕಿತ್ಸೆ ಬೇಕು ಅಂದರೆ ಮುಗಿಯಿತು ಕಥೆ. ಬೆಳಗಾವಿ, ಧಾರವಾಡ ಅಥವಾ ಬೈಲಹೊಂಗಲದಿಂದ ವೈದ್ಯರು ತಲುಪುವ ಹೊತ್ತಿಗೆ ಅನಾಹುತ ಸಂಭವಿಸಿರುತ್ತದೆ.

ರಾಹುಲ್ ಮೋದಿಗೆ ಪತ್ರ ಬರೆದರು, ಅಧಿಕಾರಿಗಳು ದೌಡಾಯಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದರೆ ಏನಾಗುತ್ತಿತ್ತು. ಪಶು ಆಸ್ಪತ್ರೆ ಕಟ್ಟಲು ದುಡ್ಡು ಬೇಕು. ನಾನೇನು ದುಡ್ಡಿನ ಮರ ನೆಟ್ಟಿಲ್ಲ ಅನ್ನುತ್ತಿದ್ದರು.

Advertisements

Leave a Reply

%d bloggers like this: