Advertisements

ನಿಧನದ ಮೇಲೂ ಇತಿಹಾಸ ನಿರ್ಮಿಸಿದ ಕರುಣಾನಿಧಿ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಡಿಎಂಕೆ ಅಧಿನಾಯಕ ಕರುಣಾನಿಧಿ ಉಸಿರು ನಿಲ್ಲಿಸಿದ ನಂತರವೂ ಇತಿಹಾಸ ನಿರ್ಮಿಸಿದ್ದಾರೆ.

ಮುತ್ತುವೇಲ್ ಕರುಣಾನಿಧಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಲೋಕಸಭೆ ಹಾಗೂ ರಾಜ್ಯಸಭೆ ತನ್ನ ಕಲಾಪವನ್ನು ಬುಧವಾರಕ್ಕೆ ಮುಂದೂಡಿತು.

2 ಕಿಮೀ ಅಂತರದಲ್ಲಿ ಇಬ್ಬರು ಹೆಂಡತಿಯರು – ಅಯ್ಯನದ್ದು ವರ್ಣರಂಜಿತ ಬದುಕು

ಸಂಸದರಾಗಿರದ ವ್ಯಕ್ತಿಯೊಬ್ಬರಿಗೆ ಸಂತಾಪ ಸೂಚಿಸಿ ಕಲಾಪವನ್ನು ಮುಂದೂಡಿರುವುದು ಲೋಕಸಭೆ ಇತಿಹಾಸದಲ್ಲಿ ಇದೇ ಮೊದಲು ಅನ್ನುವುದೇ ವಿಶೇಷ. ಈ ಮೂಲಕ ಸಂಸದರಾಗಿರದ ವ್ಯಕ್ತಿಯೊಬ್ಬರಿಗೆ ಶ್ರದ್ದಾಂಜಲಿ ಸಲ್ಲಿಸಿ ಕಲಾಪವನ್ನು ಮುಂದೂಡಿದ ದಾಖಲೆ ಕರುಣಾನಿಧಿಗೆ ಸಂದಿದೆ.

ತಮಿಳುನಾಡು ರಾಜಕೀಯದಲ್ಲಿ ತನ್ನದೇ ಛಾಪು ಮೂಡಿಸಿದ್ದ ಕರುಣಾನಿಧಿ ರಾಷ್ಟ್ರ ರಾಜಕಾರಣದಲ್ಲೂ ಸದ್ದು ಮಾಡಿದ್ದರು. ರಾಷ್ಟ್ರ ಮಟ್ಟದಲ್ಲೂ ಅವರ ದನಿಗೆ ಗೌರವ ಇತ್ತು. ಆದರೆ ಐದು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ 13 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಎಂದಿಗೂ ಅವರು ಸಂಸತ್ತು ಪ್ರವೇಶಕ್ಕೆ ಪ್ರಯತ್ನಿಸಿರಲಿಲ್ಲ. ತಮ್ಮ ಮಕ್ಕಳು ಸಂಸದರಾಗಲಿ ಎಂದು ಬಯಸಿದ ಕಾರಣದಿಂದ ಅವರು ಸಂಸದರಾಗಿ ಆಯ್ಕೆಯಾಗಿರಲಿಲ್ಲ.

ಕರುಣಾನಿಧಿ ಸಾವಿನ ಸುದ್ದಿ ಕೇಳಿ ಮೋದಿ ಹೇಳಿದ್ದೇನು..?

ಈ ಹಿನ್ನೆಲೆಯಲ್ಲಿ ಸಂಸದರಾಗದೇ ಇದ್ದ ಮಾಜಿ ಸಿಎಂಗೆ ಗೌರವ ಸಲ್ಲಿಸಿ ಸಂಸತ್ ಕಲಾಪ ಮುಂದೂಡಲಾಗಿದೆ.

ಇಂದು ಬೆಳಗ್ಗೆ ಸಂಸತ್ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಸುಮಿತ್ರಾ ಮಹಾಜನ್ ಕರುಣಾನಿಧಿ ಅವರು ಒಬ್ಬ ದಾರ್ಶನಿಕ ಮತ್ತು ಜನಸಾಮಾನ್ಯರ ನಾಯಕ ಎಂದು ಬಣ್ಣಿಸಿದರು. ಈ ಮೂಲಕ ಗೌರವ ಸಲ್ಲಿಸಿದರು.

ಮೌನಾಚರಣೆ ಬಳಿಕ ಸ್ಪೀಕರ್ ಕಲಾಪವನ್ನು ನಾಳೆಗೆ ಮುಂದೂಡಿದರು. ರಾಜ್ಯಸಭೆಯಲ್ಲೂ ಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು,ಕರುಣಾನಿಧಿ ಬಹುಮುಖಿ ವ್ಯಕ್ತಿತ್ವ ಬಣ್ಣಿಸಿ ಕಲಾಪ ಮುಂದೂಡಿದರು.

ಕೆಲವರಿಗೆ ಗೌರವ ಸಿಗಬೇಕು ಅನ್ನವುದಾದರೆ ಪುಣ್ಯ ಮಾಡಿರಬೇಕು ಅನ್ನುವುದು ಇದಕ್ಕೆ.

Advertisements

Leave a Reply

%d bloggers like this: