Advertisements

ಅದೊಂದು ಸಹಿಗಾಗಿ ಕರುಣಾನಿಧಿ ಆರು ತಿಂಗಳು ಅಭ್ಯಾಸ ಮಾಡಿದ್ದರು

ಕರುಣಾನಿಧಿಯವರು ಮಾಡುತ್ತಿದ್ದ ಸಹಿ ಹಿಂದೆ ವಿಶೇಷ ಸಂದೇಶವಿದೆ ಅನ್ನುವ ಅಂಶ ಇದೀಗ ಬಯಲಾಗಿದೆ. ತಮ್ಮ ಗೋಪಾಲಪುರಂ ನಿವಾಸವನ್ನು ಅಣ್ಣೈ ಅಂಜುಗಂ ಟ್ರಸ್ಟ್ ಗೆ ಕೊಡುಗೆಯಾಗಿ ನೀಡಿದ್ದ ವೇಳೆ ಸಹಿ ಮಾಡುವಾಗ ಸಹಿಯ ಹಿಂದಿನ ವಿಶೇಷತೆಯನ್ನು ಅವರು ಬಹಿರಂಗಪಡಿಸಿದ್ದರಂತೆ.

ದ್ರಾವಿಡ ನಾಡು ನನ್ನ ಸಹಿಯಲ್ಲಿದೆ. ಸಹಿಯಲ್ಲಿನ ವಿ ಆಕಾರದ ತಿರುವು ಭಾರತದ ಭೂಪಟದಲ್ಲಿ ದಕ್ಷಿಣ ಭಾರತವನ್ನು ಪ್ರತಿನಿಧಿಸುತ್ತದೆ.ಸಹಿಯ ಕೆಳಗಿನ ತಿರುವು ಶ್ರೀಲಂಕಾವನ್ನು ಪ್ರತಿನಿಧಿಸುತ್ತದೆ ಎಂದು ಅವರು ಆತ್ಮೀಯರಲ್ಲಿ ಹೇಳಿಕೊಂಡಿದ್ದರಂತೆ.

ಅಂದ ಹಾಗೇ ಇಂತಹುದೊಂದು ಸಹಿ ಹಾಕುವುದನ್ನು ಅಭ್ಯಾಸ ಮಾಡಲು ಅವರು ಆರು ತಿಂಗಳು ಸತತ ಅಭ್ಯಾಸ ಮಾಡಿದ್ದರಂತೆ.

ಹಲವು ದಶಕಗಳ ಹಿಂದೆ ಅವರು ತಿರುಚಿ ಜೈಲಿನಲ್ಲಿದ್ದಾಗ ಈ ರೀತಿ ವಿಶೇಷ ಸಹಿ ಮಾಡಲು ಅಭ್ಯಾಸ ಮಾಡಿದ್ದರಂತೆ.

Advertisements

Leave a Reply

%d bloggers like this: