Advertisements

ಸತ್ತಿದ್ದು ಕರುಣಾನಿಧಿ.. ಕೋಟಿ ನಷ್ಟವಾಗಿದ್ದು ಬಿಬಿಎಂಪಿಗೆ

ಹೆಡ್ ಲೈನ್ಸ್ ನೋಡಿ ತಲೆ ಕೆಡಿಸಿಕೊಳ್ಳುವುದು ಗ್ಯಾರಂಟಿ. ಹೌದು ತಮಿಳುನಾಡಿನ ನಾಯಕ ಸತ್ತರೆ ಕನ್ನಡ ನಾಡಿನ ಬಿಬಿಎಂಪಿಗೆ ನಷ್ಟ ಅನ್ನುವುದರಲ್ಲಿ ಅರ್ಥವೇನಿದೆ. ನಮಗೆ ತಲೆ ಕೆಟ್ಟಿದೆ ಎಂದು ನೀವು ಅಂದುಕೊಳ್ಳಬಹುದು.

ಆದರೆ ಇದು ಸುಳ್ಳು ಸುದ್ದಿಯಲ್ಲ. ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಅವರ ಸಾವಿನಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸುಮಾರು ಒಂದು ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.

ಆಗಸ್ಟ್ 8ರಂದು ಬಿಬಿಎಂಪಿ ಕೆಂಪೇಗೌಡ ಅವರ ಜಯಂತಿ ಆಚರಿಸಲು ಸಕಲ ಸಿದ್ಧತೆ ನಡೆಸಿತ್ತು. ಇದಕ್ಕಾಗಿ ಸಿದ್ದತೆಗಳು ಪೂರ್ಣಗೊಂಡಿತ್ತು. ಆದರೆ ಮಂಗಳವಾರ ಸಂಜೆ ಕರುಣಾನಿಧಿ ನಿಧನ ಹೊಂದಿದ ಹಿನ್ನೆಲೆಯಲ್ಲಿ ಬುಧವಾರದ ಕೆಂಪೇಗೌಡ ಜಯಂತಿಯನ್ನು ಮುಂದೂಡಬೇಕಾಗಿದೆ ಬಂದಿದೆ.

ಕೆಂಪೇಗೌಡ ದಿನಾಚರಣೆ ಸಲುವಾಗಿ ಬಿಬಿಎಂಪಿ ಕೇಂದ್ರ ಕಚೇರಿ, ಯುಟಿಲಿಟಿ ಕಟ್ಟಡ ಸೇರಿದಂತೆ 8 ವಲಯಗಳಲ್ಲಿ ವಿದ್ಯುತ್ ದೀಪಾಲಂಕರ ಮಾಡಲಾಗಿತ್ತು. ಕಾರ್ಯಕ್ರಮಕ್ಕಾಗಿ ಸ್ಟೇಜ್, ಪೆಂಡಾಲ್, ಚೆಯರ್, ಹೂವು ಎಲ್ಲವನ್ನೂ ತರಿಸಲಾಗಿತ್ತು. ಊಟ, ತಿಂಡಿ, ನೀರಿಗೂ ಆರ್ಡರ್ ಕೊಡಲಾಗಿತ್ತು.

ಆದರೆ, ಕಾರ್ಯಕ್ರಮವನ್ನು ಮುಂದೂಡಲು ಆದೇಶಿಸಿರುವುದರಿಂದ ಕೆಲವೊಬ್ಬರಿಗೆ ಪೇಮೆಂಟ್ ಮಾಡಲೇಬೇಕು. ಇನ್ನು ಕೆಲವರಿಗೆ ಮುಂದೂಡಿದೆ ಅನ್ನುವ ಮಾಹಿತಿ ಕೊಟ್ಟರೆ ಪರವಾಗಿಲ್ಲ.

ಹೀಗಾಗಿ ಬಿಬಿಎಂಪಿಗೆ ಸುಮಾರು 1 ಕೋಟಿ ನಷ್ಟ ಅನುಭವಿಸಬೇಕಾಗಿದೆ. 2 ದಿನದೊಳಗೆ ಕೆಂಪೇಗೌಡ ಜಯಂತಿ ಆಚರಿಸಿದರೆ ನಷ್ಟದ ಪ್ರಮಾಣ ಕಡಿಮೆಯಾಗಬಹುದು. ಸಿಎಂ ಡೇಟ್ ಸಿಕ್ತಿಲ್ಲ ಅಂದರೆ ಕೋಟಿಯ ಮೊತ್ತ ಏರುವುದರಲ್ಲಿ ಸಂಶಯವಿಲ್ಲ.

Advertisements

Leave a Reply

%d bloggers like this: