Advertisements

ಚಿತ್ರ ವಿಚಿತ್ರ ಹೇರ್ ಸ್ಟೈಲ್ ಮಾಡಿದವರಿಗೆ ಠಾಣೆಯಲ್ಲೇ ಕಟ್ಟಿಂಗ್, ಶೇವಿಂಗ್

ಕೋಲಾರ : ಕಳೆದ ಗುರುವಾರ ಮಾಲೂರು ಪಟ್ಟಣದಲ್ಲಿ ನಡೆದ ವಿದ್ಯಾರ್ಥಿನಿ ರಕ್ಷಿತಾ ಕೊಲೆ ಪ್ರಕರಣ ಹಿನ್ನಲೆಯಲ್ಲಿ ನಗರದಲ್ಲಿ ಬೀಡಾಡಿ ದನಗಳಂತೆ ಓಡಾಡುತ್ತಿದ್ದ ಪುಂಡು ಪೋಕರಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ಪ್ರಾರಂಭಿಸಿದ್ದಾರೆ.

ಹೀಗಾಗಿ ದಿಢೀರ್ ಕಾರ್ಯಾಚರಣೆ ನಡೆಸಿದ ಮಾಲೂರು ಪೊಲೀಸರು ವಿಚಿತ್ರ ಹೇರ್ ಸ್ಟೈಲ್ ಮಾಡಿಕೊಂಡಿದ್ದ ಹಾಗೂ ಚಿತ್ರ ವಿಚಿತ್ರವಾಗಿ ಗಡ್ಡ ಬಿಟ್ಟಿದ್ದ ಕೆಲ ಪೋಕರಿಗಳು ಠಾಣೆಗೆ ಕರೆ ತಂದಿದ್ದಾರೆ.

ಮಾತ್ರವಲ್ಲದೆ ತಲೆ, ಗಡ್ಡ ಬೋಳಿಸಿ ಇನ್ಮುಂದೆ ನಿಯ್ಯತ್ತಿನಿಂದ ಓಡಾಡಿಕೊಂಡಿದ್ದರೆ ಸರಿ, ಮತ್ತೆ ಚಿತ್ರ ವಿಚಿತ್ರ ಸ್ಟೈಲ್ ನಲ್ಲಿ ಕಾಣಿಸಿಕೊಂಡರೆ ಎಚ್ಚರ ಎಂದು ಹೇಳಿ ಕಳುಹಿಸಿದ್ದಾರೆ.

ಯುವಕರಲ್ಲಿ ಶಿಸ್ತು ಹಾಗೂ ಕಾನೂನಿನ ಬಗ್ಗೆ ಅರಿವು ಮೂಡಿಸಲು ಪೊಲೀಸರು ಮಾಡಿದ ಕಾರ್ಯ ನಿಜಕ್ಕೂ ಗ್ರೇಟ್. ಬೆಂಗಳೂರಿನಲ್ಲೂ ಇಂತಹುದೊಂದು ಕೆಲಸವಾಗಬೇಕು. ಚಿತ್ರ ವಿಚಿತ್ರ ಸ್ಟೈಲ್ ಮಾಡಿಕೊಂಡು ಚುಚ್ಚಬಾರದ ಜಾಗಕ್ಕೆ ರಿಂಗ್ ಚುಚ್ಚಿಕೊಂಡು ಓಡಾಡುವ ಪುಂಡರು ಸಾಕಷ್ಟು ಜನರಿದ್ದಾರೆ.

Lady police officer ತಾಕತ್ತು

ನೋಡುಗರನ್ನು ಭಯ ಬೀಳಿಸುವುದು, ಹವಾ ಕ್ರೀಯೆಟ್ ಮಾಡುವುದು ಈ ಪಡ್ಡೆಗಳ ಉದ್ದೇಶ. ಇಂಥ ಗಿರಾಕಿಗಳೇ ಹೆಚ್ಚಾಗಿ ವೀಲ್ಹಿಂಗ್ ಎಂದು ಸಾಯುತ್ತಿರುತ್ತಾರೆ.

ಮಾಲೂರು ಇನ್ಸ್ ಪೆಕ್ಟರ್ ಸತೀಶ್ ಮಾಡಿದ ಕಾರ್ಯ ಬೆಂಗಳೂರು ಪೊಲೀಸರಿಗೂ ಮಾದರಿಯಾದರೆ ಚೆಂದ.

Advertisements

Leave a Reply

%d bloggers like this: