Advertisements

ನಟ್ಟ ನಡುರಾತ್ರಿಯಲ್ಲಿ ದಾದಾ ಅವರ ಬೆವರಿಳಿಸಿದ ಕ್ರಿಕೆಟ್ ದೇವರು…!

ಕ್ರಿಕೆಟ್ ದೇವರು ಎಂದೇ ಕರೆಸಿಕೊಂಡ ಸಚಿನ್ ತೆಂಡೂಲ್ಕರ್  ಕುರಿತಾದ ಹಲವು ರೋಚಕ ಕಥೆಗಳನ್ನು  ಅವರ ಸಹ ಆಟಗಾರನಾಗಿದ್ದ ಸೌರವ್ ಗಂಗೂಲಿ ಬಿಚ್ಚಿಟ್ಟಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಸಚಿನ್ ಅವರ ನಿದ್ದೆಯ ನಡಿಗೆಯನ್ನು ರೋಚಕವಾಗಿ ಹೇಳಿದ್ದಾರೆ.

“ ನಮಗಿಬ್ಬರು ಅದು ವೃತ್ತಿ ಬದುಕಿನ ಮೊದಲ ದಿನಗಳು. ಇಂಗ್ಲೆಂಡ್ ನಲ್ಲಿ ಒಂದೇ ರೂಮ್ ನಲ್ಲಿದ್ದೆವು. ಅದೊಂದು ದಿನ ರಾತ್ರಿ ಎಚ್ಚರವಾಗಿ ಕಣ್ಣು ತೆರೆದು ನೋಡಿದಾಗ ಸಚಿನ್ ಓಡಾಡುತ್ತಿದ್ದರು. ಶೌಚಕ್ಕೆ ಎದ್ದಿರಬೇಕು ಎಂದು ಮಲಗಿದೆ.

ಮರು ದಿನ ರಾತ್ರಿಯೂ ಇದೇ ರೀತಿ ನಡೆಯಿತು. ಹೀಗಾಗಿ ಬೆಳಕು ಹರಿದ ತಕ್ಷಣ  ರಾತ್ರಿ ಯಾಕೆ ಒಂಟಿಯಾಗಿ ನಡೆದಾಡುತ್ತಿ ಎಂದು ಕೇಲಿದಾಗ ನನಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸವಿದೆ ಎಂದರು ಸಚಿನ್”

ಸಚಿನ್ ನಿದ್ದೆಗಣ್ಣಿನಲ್ಲಿ ಎದ್ದ ತಕ್ಷಣ ನಡೆದಾಡಲು ಪ್ರಾರಂಭಿಸುತ್ತಾರಂತೆ. ಬಳಿಕ ಕುರ್ಚಿಯಲ್ಲಿ ಕೂರುತ್ತಾರೆ. ಕೆಲ ಹೊತ್ತು ಕೂತವರು ಮತ್ತೆ ಬಂದು ಮಲಗುತ್ತಿದ್ದರಂತೆ.

ಇದನ್ನು ನೋಡಿದ ಗಂಗೂಲಿ ಸಿಕ್ಕಾಪಟ್ಟೆ ಭಯ ಕೂಡಾ ಪಟ್ಟಿದ್ದರಂತೆ.

ನಿಮಗೂ ನಿದ್ದೆಯಲ್ಲಿ ನಡೆಯುವ ಅಭ್ಯಾಸ ಇದೆಯೇ… ತಲೆ ಬಿಸಿ ಬೇಡ, ಸಚಿನ್ ಕೂಡಾ ನಿದ್ದೆಯಲ್ಲಿ ನಡೆಯುತ್ತಿದ್ದರು ಎಂದು ಖುಷಿ ಪಡಿ.

Advertisements

2 Comments on “ನಟ್ಟ ನಡುರಾತ್ರಿಯಲ್ಲಿ ದಾದಾ ಅವರ ಬೆವರಿಳಿಸಿದ ಕ್ರಿಕೆಟ್ ದೇವರು…!

  1. Pingback: ಕುಮಾರಸ್ವಾಮಿಗೆ ಶಾಕಿಂಗ್ ಸುದ್ದಿ ಕೊಟ್ಟ ಮಧು ಬಂಗಾರಪ್ಪ

  2. Pingback: ರೇಪ್ ಆರೋಪ ಹೊರಿಸಿದ 18ರ ಯುವತಿಯನ್ನೇ ಮದುವೆಯಾದ ಭಾರತದ ಆಟಗಾರ!

Leave a Reply

%d bloggers like this: