Advertisements

ಮತ್ತೊಂದು ಅದೃಷ್ಟ ಪರೀಕ್ಷೆಗಿಳಿದ ಶ್ರುತಿ ಪ್ರಕಾಶ್

ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಚಂದನವನದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಉತ್ತಮ ಗಾಯಕಿಯಾಗಿರುವ ಕಾರಣ ಚಿತ್ರರಂಗ ಕೈ ಬೀಸುತ್ತದೆ ಅನ್ನುವ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆಯಂತೆ ಅವಕಾಶ ಕೈ ಬೀಸಲಿಲ್ಲ.

ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ತನ್ನ ಧ್ವನಿಯಿಂದಲೇ ಮೋಡಿ ಮಾಡಿದ್ದ ಗಾಯಕಿ ಹಾಗೂ ಮಾಡೆಲ್ ಶೃತಿ ಪ್ರಕಾಶ್ ತಡವಾಗಿ ಅವಕಾಶ ಗಿಟ್ಟಿಸಿಕೊಂಡು ’ಲಂಡನ್ ನಲ್ಲಿ ಲಂಬೋದರ’ ಮೂಲಕ ಚಂದನವನಕ್ಕೆ ಕಾಲಿಟ್ಟರು.

sruthi-2

Jayaram Karthik ಗೆ ಬೆನ್ನ ಹಿಂದೆ ಚೂರಿ ಹಾಕಿದವರಾರು..?

ಇದೀಗ ಶ್ರುತಿಗೆ ಎರಡನೇ ಚಿತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ರಾಮ್ ವಿನಯ್ ಗೌಡ ನಿರ್ದೇಶನದ ’ಫಿದಾ’ ಮೂಲಕ ಅವರು ಮತ್ತೊಂದು ಸುತ್ತಿನ ಅದೃಷ್ಟ ಪರೀಕ್ಷೆ ಬರೆಯಲಿದ್ದಾರೆ. ಈ ಚಿತ್ರದಲ್ಲಿ ಹರ್ಷನ್ ಗೌಡ ಪ್ರಮುಖ ಪಾತ್ರದಲ್ಲಿದ್ದಾರೆ.

ಹರ್ಷನ್ ಗೌಡ ’ಕಾಡು ಮಳೆ’ ಅನ್ನುವ ಚಿತ್ರದಲ್ಲಿ ನಟಿಸಿದ್ದು ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಇನ್ನು ರಾಮ್ ಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಸಾಕಷ್ಟು ಕಿರು ಚಿತ್ರದಲ್ಲಿ ಕೆಲಸ ಮಾಡಿ ಅನುಭವಿರುವ ರಾಮ್ ಕನಸಿನ ಕೂಸು ಫಿದಾಗೆ ಜಗದೀಶ್ ಎಸ್ ಟಿ ಗೌಡ ಬಂಡವಾಳ ಹೂಡುತ್ತಿದ್ದಾರೆ.
2009 ರಲ್ಲಿ ಮೈಸೂರಿನಲ್ಲಿ ನಡೆದ ನೈಜ ಘಟನೆಯಾಧರಿಸಿದ ಚಿತ್ರ ಇದಾಗಿದ್ದು, ಕಳೆದ ಎರಡೂವರೆ ವರ್ಷಗಳಿಂದ ರಾಮ್ ಈ ಚಿತ್ರಕಥೆ ಹೆಣೆಯುತ್ತಿದ್ದಾರೆ.

ಜೆಕೆ ಒಬ್ಬ ಅದ್ಭುತ ಹಾಡುಗಾರ

ಆಗಸ್ಟ್ 17ಕ್ಕೆ ಚಿತ್ರದ ಫೋಟೋ ಶೂಟ್ ಗೋವಾದಲ್ಲಿ ನಡೆಯಲಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರದ ಚಿತ್ರೀಕರಣ ಕಾರ್ಯ ಪ್ರಾರಂಭವಾಗಲಿದೆ.

ಒಟ್ಟಿನಲ್ಲಿ ಮುದ್ದು ಮುಖದ ಶೃತಿಗೆ ಈ ಚಿತ್ರ ಹೆಸರು ತಂದುಕೊಡಲಿ, ಅವಕಾಶದ ಬಾಗಿಲು ತೆರಯಲಿ ಅನ್ನುವುದೇ ನಮ್ಮ ಹಾರೈಕೆ.

Bigg Boss contestant Anupama Gowda to make her Kollywood debut?

 

Advertisements

Leave a Reply

%d bloggers like this: