Advertisements

ಕರುಣಾನಿಧಿ ಸಾವಿನ ಸುದ್ದಿ ಕೇಳಿ ಮೋದಿ ಹೇಳಿದ್ದೇನು..?

ಅಯ್ಯ ಅಸ್ತಂಗತ ಅನ್ನುವ ಸುದ್ದಿ ಕೇಳಿ ತಮಿಳುನಾಡು ಕಣ್ಣೀರು ಸುರಿಸುತ್ತಿದೆ. ತಮಿಳರ ರಾಜಕೀಯ ಪ್ರೇಮವೇ ಇದಕ್ಕೆ ಕಾರಣ ಅನ್ನುವುದರಲ್ಲಿ ಎರಡು ಮಾತಿಲ್ಲ. ಈ ನಡುವೆ ಡಿಎಂಕೆ ವರಿಷ್ಠ, ದ್ರಾವಿಡ ನಾಯಕ ಎಂ. ಕರುಣಾನಿಧಿ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಕರುಣಾನಿಧಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು ಕರುಣಾನಿಧಿ ಭಾರತದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. ಜನ ಸಮೂಹ  ನಾಯಕ, ರಾಜಕೀಯ ಚಿಂತಕ, ಕಥೆಗಾರನನ್ನು ನಾವು ಕಳೆದುಕೊಂಡಿದ್ದೇವೆ.ಬಡವರ ಕಲ್ಯಾಣಕ್ಕಾಗಿ ಅವರು ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು ಎಂದಿದ್ದಾರೆ.

Modi-karuna

ಇನ್ನು ದ್ರಾವಿಡರ ನಿಧಿ ಇನ್ನಿಲ್ಲ ಅನ್ನುವ ಸುದ್ದಿ ಕೇಳಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ,ಕರುಣಾನಿಧಿ ಜೀವನ ಸ್ಪೂರ್ತಿಯುತವಾದದ್ದು, ಚಿತ್ರ ಕಥೆಗಾರನಾಗಿ ತಮಿಳು ಚಿತ್ರ ರಂಗ ಪ್ರವೇಶಿಸಿದ್ದ ಕರುಣಾನಿಧಿ ಐದು ಬಾರಿ ಮುಖ್ಯಮಂತ್ರಿಯಾಗಿದ್ದರು.1975ರಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾದಾಗ ಅವರ ಹೋರಾಟವನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

Amith-Sha-Karuna

ನನ್ನ ಜೀವನದಲ್ಲಿ ಇದು ಕರಾಳ ದಿನ.ಕರುಣಾನಿಧಿ ಅವರನ್ನು ಮರೆಯಲು ಸಾಧ್ಯವಿಲ್ಲ. ಅವರ ಆತ್ಮಕ್ಕೆ ಶಾಂತಿ ಕೋರುವುದಾಗಿ ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.

Rajanai-karuna

ಕರುಣಾನಿಧಿ ದೇಶದ ರಾಜಕೀಯದ ದೈತ್ಯ ನಾಯಕರಾಗಿದ್ದರು . ತಮಿಳು ರಾಜಕೀಯ ತನ್ನ ಗತ ವೈಭವಕ್ಕೆ ಮತ್ತೆ ಮರಳದು ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಸಂತಾಪ ಸೂಚಿಸಿದ್ದಾರೆ.

Shashi-Karuna

ಮಾಜಿ ಪ್ರಧಾನಿ ದೇವೇಗೌಡರು ಕೂಡಾ ಕರುಣಾನಿಧಿ ಅನ್ನುವ ಸುದ್ದಿ ಕೇಳಿ ಕಂಬನಿ ಮಿಡಿದಿದ್ದಾರೆ.

HDD-Karuna

Advertisements

One Comment on “ಕರುಣಾನಿಧಿ ಸಾವಿನ ಸುದ್ದಿ ಕೇಳಿ ಮೋದಿ ಹೇಳಿದ್ದೇನು..?

  1. Pingback: ನಿಧನದ ಮೇಲೂ ಇತಿಹಾಸ ನಿರ್ಮಿಸಿದ ಕರುಣಾನಿಧಿ

Leave a Reply

%d bloggers like this: