Advertisements

ಕರುಣಾನಿಧಿಯನ್ನು ಎಲ್ಲಿ ಅಂತ್ಯ ಸಂಸ್ಕಾರ ಮಾಡಬೇಕು…?

ತಮಿಳುನಾಡು ರಾಜಕೀಯದಲ್ಲಿ ದ್ವೇಷ ಸಾಧನೆ ಅನ್ನುವುದು ರಕ್ತದಲ್ಲೇ ಬಂದಿದೆ. ಅದ್ಯಾವ ರಾಜ್ಯದ ರಾಜಕೀಯದ ಪುಟಗಳನ್ನು ತಿರುಗಿಸಿ ನೋಡಿದರೂ. ತಮಿಳುನಾಡಿನ ರೀತಿಯ ದ್ವೇಷ ರಾಜಕಾರಣ ಕಂಡು ಬರಲು ಸಾಧ್ಯವಿಲ್ಲ.

ಅವತ್ತು ಜಯಲಲಿತಾ ಮತ್ತು ಕರುಣಾನಿಧಿ ನಡುವಿನ ಕದನ, ಅವರಿಬ್ಬರೂ ಸತ್ತ ಮೇಲೂ ಮುಂದುವರಿದಿದೆ ಅನ್ನುವುದು ದುರಂತ.

ಅಯ್ಯ ಇನ್ನಿಲ್ಲ ಅನ್ನುತ್ತಿದ್ದಂತೆ, ಮರೀನಾ ಬೀಚ್ ನಲ್ಲಿ ಕರುಣಾನಿಧಿ ಅಂತಿಮ ಸಂಸ್ಕಾರಕ್ಕೆ ಡಿಎಂಕೆ ಮನವಿ ಮಾಡಿತು. ಆದರೆ ಅಲ್ಲಿ ಸ್ಥಳ ನೀಡಲು ತಮಿಳುನಾಡು ಎಐಎಡಿಎಂಕೆ ನೇತೃತ್ವದ ಸರ್ಕಾರ ನಿರಾಕರಿಸಿದೆ.

ತಮಿಳುನಾಡು ಸರ್ಕಾರದ ಚತುರ ರಾಜಕಾರಣಿ ಸಮಾಧಿಗೆ ಜಾಗ ಕೊಡುವುದಿಲ್ಲ ಅನ್ನುವುದು ಯಾವ ನ್ಯಾಯ ಎಂದು ಕರುಣಾನಿಧಿ ಅಭಿಮಾನಿಗಳು ಕರುಣಿ ಇಲ್ಲದವರಂತೆ ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ಹೀಗಾಗಿ ಏಲ್ಲಿ ಅಂತ್ಯಸಂಸ್ಕಾರ ಮಾಡಬೇಕೆಂಬ ಬಗ್ಗೆ ಇದೀಗ ತಮಿಳುನಾಡಿನಲ್ಲಿ ರಾಜಕೀಯ ಆರಂಭವಾಗಿದೆ.

ಮರೀನಾ ಬೀಚ್ ಬದಲಾಗಿ ಗಿಂಡಿ ಪ್ರದೇಶದಲ್ಲಿ ಅಂತ್ಯಸಂಸ್ಕಾರ ಮಾಡಲು ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರ್ಕಾರ ಜಾಗ ನೀಡಿದೆ.

ಮರೀನಾ ಬೀಚ್ ನಲ್ಲಿನ ಸ್ಮಾರಕಗಳ ಸಂಬಂಧ ಹಲವು ಪ್ರಕರಣಗಳು ಇತ್ಯರ್ಥವಾಗದೆ ನ್ಯಾಯಾಲಯದಲ್ಲಿದೆ. ಹೀಗಾಗಿ ಗಾಂಧಿ ಮಂಟಪದ ಬಳಿ ಕರುಣಾನಿಧಿ ಅಂತ್ಯಸಂಸ್ಕಾರಕ್ಕೆ ಜಾಗ ಕೊಡುತ್ತೇವೆ ಎಂದು ಸರ್ಕಾರ ಹೇಳಿದೆ.

ಆದರೆ ಇದರಿಂದ ಕಿಡಿಕಿಡಿಯಾಗಿರುವ ಡಿಎಂಕೆ ನಾಯಕರು ಎಐಎಡಿಎಂಕೆ ಸಂಸ್ಥಾಪಕ ಎಂ ಜಿ ರಾಮಚಂದ್ರನ್, ಮಾಜಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಮತ್ತು ಡಿಎಂಕೆ ಸ್ಥಾಪಕ ಅಣ್ಣಾದೊರೈ ಅವರನ್ನು ಮರೀನಾ ಬೀಚ್ ನಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಗಿದೆ. ಅವರಷ್ಟೇ ಸಮಾನರಾದ ಕರಣಾನಿಧಿ ಅವರ ಪಾರ್ಥಿವ ಶರೀರಕ್ಕೂ ಇಲ್ಲೇ ಜಾಗ ನೀಡಬೇಕು ಎಂದು ಡಿಎಂಕೆ ಆಗ್ರಹಿಸಿದೆ. ಆದರೆ ಎಲ್ಲಿ ಜಯಲಲಿತಾ ಆತ್ಮ ನೊಂದುಕೊಳ್ಳುತ್ತದೋ ಅಂದಿರುವ ಎಐಡಿಎಂಕೆ ನಿಲುವಿನ ವಿರುದ್ಧ ಡಿಎಂಕೆ ಮಧ್ಯರಾತ್ರಿಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದೆ. ಬೆಳಕರು ಹರಿದ್ರೂ ಪರವಾಗಿಲ್ಲ ವಿಚಾರಣೆ ನಡೆಸಿ ಎಂದು ಕೋರಿಕೊಂಡಿದೆ.

ನ್ಯಾಯಾಧೀಶರ ನಿರ್ಧಾರದ ಮೇಲೆ ನಿಂತಿದೆ. ಈ ದ್ವೇಷದ ರಾಜಕಾರಣವನ್ನು ಎನೆಂದು ಕರೆಯೋಣ.

Advertisements

Leave a Reply

%d bloggers like this: