Advertisements

ಕುಮಾರಸ್ವಾಮಿಗೆ ಶಾಕಿಂಗ್ ಸುದ್ದಿ ಕೊಟ್ಟ ಮಧು ಬಂಗಾರಪ್ಪ

ಲೋಕಸಭೆಗೆ ಚುನಾವಣೆ ಘೋಷಣೆಯಾಗಿಲ್ಲ. ಆದರೂ ಕೇಂದ್ರದಲ್ಲಿ ತೃತೀಯ ರಂಗದ ಮೂಲಕ ಮಹತ್ವದ ಹುದ್ದೆಯನ್ನು ಗಿಟ್ಟಿಸಿಕೊಳ್ಳುವ ಲೆಕ್ಕಚಾರದಲ್ಲಿ ದೇವೇಗೌಡರು ರಾಜ್ಯದಲ್ಲಿ ಕನಿಷ್ಠ ಸ್ಥಾನಗಳನ್ನು ಗೆಲ್ಲುಲು ತಂತ್ರ ರೂಪಿಸುತ್ತಿದ್ದಾರೆ.

ಕಾಂಗ್ರೆಸ್ ಜೊತೆಗಿನ ಮೈತ್ರಿಯ ಲಾಭವನ್ನು ಬಳಸಿಕೊಂಡು ಜೆಡಿಎಸ್ ಪತಾಕೆ ಹಾರಿಸುವುದು ಈಗಿನ ಯೋಜನೆ.

ಹೀಗಾಗಿ ಹಲವು ಜವಾಬ್ದಾರಿಗಳನ್ನು ಕುಮಾರಸ್ವಾಮಿ ಹೆಗಲಿಗೆ ಹೊರಿಸಲಾಗಿದೆ. ಈ ಪೈಕಿ ಯಡಿಯೂರಪ್ಪ ಲೋಕಸಭೆ ಸ್ಪರ್ಧಿಸಿದರೆ ಅವರನ್ನು ಸೋಲಿಸುವುದು ಮೊದಲ ಗುರಿ. ಸೋಲಿಸಲು ಸಾಧ್ಯವಾಗದಿದ್ದರೆ ಗೆಲುವಿಗೆ ಹರಸಾಹಸ ಪಡುವಂತೆ ಮಾಡಬೇಕು ಅನ್ನುವುದೇ ಗುರಿ. ಒಂದು ವೇಳೆ ಯಡಿಯೂರಪ್ಪ ಸ್ಪರ್ಧಿಸದಿದ್ದರೆ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಬೇಕು ಅನ್ನುವುದೇ ಈಗಿನ ಟಾಸ್ಕ್.

ನಟ್ಟ ನಡುರಾತ್ರಿಯಲ್ಲಿ ದಾದಾ ಅವರ ಬೆವರಿಳಿಸಿದ ಕ್ರಿಕೆಟ್ ದೇವರು…!

ಈ ಹಿನ್ನಲೆಯಲ್ಲಿ ಸಿಎಂ ಕುಮಾರಸ್ವಾಮಿಯವರು ಬಿಎಸ್‍ವೈ ವಿರುದ್ಧ ಪ್ರಬಲ ಪ್ರತಿಸ್ಪರ್ಧಿಗಾಗಿ ಹುಡುಕಾಟ ನಡೆಸಿದ್ದಾರೆ. ಶಿವಮೊಗ್ಗ ಕ್ಷೇತ್ರದಿಂದ ಮಧು ಬಂಗಾರಪ್ಪನವರನ್ನು ಅಖಾಡಕ್ಕಿಳಿಸಲು ಕೂಡಾ ಅವರು ಮುಂದಾಗಿದ್ದರು. ಆದರೆ ವಿಧಾನಸಭಾ ಚುನಾವಣೆಯ ಸೋಲಿನಿಂದ ಹೊರ ಬರಲು ಒದ್ದಾಡುತ್ತಿರುವ ಮಧು ಬಂಗಾರಪ್ಪ ಮತ್ತೊಮ್ಮೆ ಸೋಲಿನ ರುಚಿ ಉಣ್ಣಲು ತಯಾರಿಲ್ಲ ಅಂದಿದ್ದಾರೆ.

ಯಡಿಯೂರಪ್ಪ ಜಿಲ್ಲೆಯಲ್ಲಿ ಪ್ರಬಲ ನಾಯಕರು, ಅವರನ್ನು ಎದುರಿಸಿ ಗೆಲ್ಲುವುದು ಕಷ್ಟ ಎಂದು ಅರಿತಿರುವ ಮಧು ಲೋಕಸಭಾ ಚುನಾವಣೆಯ ಕಣದಿಂದ ಹಿಂದೆ ಸರಿದಿದ್ದಾರೆ.ಯಡಿಯೂರಪ್ಪ ಸ್ಪರ್ಧಿಸದಿದ್ದರೂ ಅವರ ಪುತ್ರ ಕಣಕ್ಕಿಳಿಯುವ ಸಾಧ್ಯತೆ ಇದೆ.

ಈ ಮೀನು ತಿಂದರೆ ಕ್ಯಾನ್ಸರ್ ಗ್ಯಾರಂಟಿ…!

ಹೀಗಾಗಿ ಕಳೆದ ಬಾರಿ ಸ್ಪರ್ಧಿಸಿದ್ದ  ಗೀತಾ ಶಿವರಾಜ್ ಕುಮಾರ್ ಅವರ ಕಡೆ ಜೆಡಿಎಸ್ ನಾಯಕರ ದೃಷ್ಟಿ ಹೊರಳಿದೆ.

Shivarrajkumar and geetha with kumaraswamy
ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಶಿವರಾಜ್ ಕುಮಾರ್ ದಂಪತಿ
Advertisements

Leave a Reply

%d bloggers like this: