ಜೆಡಿಎಸ್ ಗೆ ವಾಪಾಸ್ ಬರ್ತಾರ ಸಿದ್ದರಾಮಯ್ಯ….?

ಮತ್ತೆ ಬರ್ತಾರ ಜೆಡಿಎಸ್ ಗೆ

ಅಪ್ಪ ಮಕ್ಕಳ ಪಕ್ಷ ಎಂದು ಪ್ರತಿಪಕ್ಷಗಳಿಂದ ಪದೇ ಪದೇ ಟೀಕೆಗೆ ಒಳಗಾಗಿರುವ ಜೆಡಿಎಸ್ ಗೆ ನೂತನ ಸಾರಥಿ ಬಂದಿದ್ದಾರೆ. ಕುಟುಂಬದ ಹೊರಗಿನ ವ್ಯಕ್ತಿ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರದ ವ್ಯಕ್ತಿಯೊಬ್ಬರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ನೇಮಿಸುವ ಮೂಲಕ ತಮ್ಮ ಮೇಲಿನ ಕಳಂಕ ತೊಡೆದು ಹಾಕಲು ಜೆಡಿಎಸ್ ವರಿಷ್ಠರು ಮುಂದಾಗಿದ್ದಾರೆ.

ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಹವಾ ಕ್ರಿಯೇಟ್ ಮಾಡಿದ್ದ ಹೆಚ್. ವಿಶ್ವನಾಥ್ ರಾಹುಲ್ ಗಾಂಧಿಯನ್ನೇ ಟೀಕಿಸಿದ್ದರು.

ರಾಹುಲ್ ವರ್ತನೆ ಬಾಲಿಶತನದಿಂದ ಕೂಡಿತ್ತು – JDS ರಾಜ್ಯಾಧ್ಯಕ್ಷನ ಅಚ್ಚರಿಯ ಹೇಳಿಕೆ

ಈ ನಡುವೆ ಪಕ್ಷ ಸಂಘಟನೆಗೆ ನನ್ನದೇ ನೀಲ ನಕ್ಷೆ ಇದೆ ಎಂದು ಹೇಳಿದ್ದ ವಿಶ್ವನಾಥ್ ಜನತಾ ಪರಿವಾರವನ್ನು ಒಗ್ಗೂಡಿಸುವ ಬಗ್ಗೆ ಮಾತನಾಡಿದ್ದರು. ಜನತಾ ಪಕ್ಷವನ್ನು ಒಗ್ಗೂಡಿಸುವುದು ಅಂದರೆ ಕಾಂಗ್ರೆಸ್ ಅನ್ನು ಒಡೆಯುವುದು ಎಂದೇ ಅರ್ಥ. ಯಾಕೆಂದರೆ ಜನತಾ ಪರಿವಾರ ಜೊತೆ ಗುರುತಿಸಿಕೊಂಡಿದ್ದ ನಾಯಕರ ಪೈಕಿ ಬಹುತೇಕರು ಸೇರಿರುವುದು ಕಾಂಗ್ರೆಸ್ ಪಕ್ಷವನ್ನು. ಬಿಜೆಪಿಯಲ್ಲೂ ಒಂದಿಷ್ಟು ಮಂದಿ ಇದ್ದಾರೆ.

Siddaramaiah offers crown to Kumaraswamy, years after expulsion

ಜೆಡಿಎಸ್ ಕಚೇರಿಯಲ್ಲಿ ಮಾತನಾಡಿರುವ ವಿಶ್ವನಾಥ್ ಅವರು,ಜನತಾ ಪರಿವಾರವನ್ನು ಒಗ್ಗೂಡಿಸಬೇಕಿದೆ. ಪಕ್ಷ ಮತ್ತು ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ನಾವೆಲ್ಲರೂ ಒಂದಾಗಬೇಕು ಎಂದಿದ್ದರು. ಅದರೆ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಮತ್ತೆ ಕರೆತರಲು ವಿಶ್ವನಾಥ್ ಯೋಚಿಸಿದ್ದಾರೆ ಅಂದಾಯ್ತು. ಹೌದು ಜನತಾ ಪರಿವಾರವನ್ನು ಒಗ್ಗೂಡಿಸಬೇಕಿದೆ ಅನ್ನುವುದರ ಜೊತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುನಃ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಬೇಕೆಂದು ಕೂಡಾ ಹೇಳಿದ್ದಾರೆ.

Grooming Siddaramaiah was My ‘Biggest Mistake’, Says Deve Gowda

ಸಿದ್ದರಾಮಯ್ಯ ಅವರು ಬೆಳೆದಿದ್ದು ಜನತಾ ಪರಿವಾರದಲ್ಲಿಯೇ ಆಗಿದೆ. ದೇವೇಗೌಡ ಅವರು ಸಿದ್ದರಾಮಯ್ಯ ಅವರನ್ನು ಬೆಳೆಸಿದ್ದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮಾಡಿದ್ದೂ ಕೂಡ ಜೆಡಿಎಸ್. ಹೀಗಾಗಿ ಸಿದ್ದರಾಮಯ್ಯ ಅವರು ತಾಯಿ ಪಕ್ಷಕ್ಕೆ ಮತ್ತೆ ಸೇರ್ಪಡೆಗೊಳ್ಳಬೇಕೆಂದು ಅವರು ಇದೇ ಸಭೆಯಲ್ಲಿ ತಿಳಿಸಿದ್ದಾರೆ.

ಜೆಡಿಎಸ್ ತೊರೆದು ಹೋದ ಸಿದ್ದರಾಮಯ್ಯ ಕುಮಾರಸ್ವಾಮಿ ಹಾಗೂ ದೇವೇಗೌಡರನ್ನು ಹಿಗ್ಗಾ ಮುಗ್ಗಾ ಜಾಡಿಸಿದ್ದರು. ಅವರು ಮತ್ತೆ ಪಕ್ಷಕ್ಕೆ ಬರ್ತಾರ ಅನ್ನುವ ಪ್ರಶ್ನೆ ಎಲ್ಲರಲ್ಲಿದೆ. ಅದೇನೂ ಮಹಾ ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದವರು ಮೈತ್ರಿ ಸರ್ಕಾರ ನಡೆಸುತ್ತಿಲ್ಲವೇ… ರಾಜಕೀಯದಲ್ಲಿ ಯಾರೊಬ್ಬರೂ ಶಾಶ್ವತ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: