Advertisements

18 ಸಾವಿರ ಸಂಬಳ ಪಡೆಯೋ ಗುಮಾಸ್ತನ ಮನೆಯಲ್ಲಿ ಸಿಕ್ಕಿರೋದಕ್ಕೆ ಲೆಕ್ಕವೇ ಇಲ್ಲ

ಹೆಸರು ಅಸ್ಲಂ ಖಾನ್, ಕೆಲಸ ಇಂದೋರ್ ನಗರ ಸಭೆಯಲ್ಲಿ ಗುಮಾಸ್ತ, ತಿಂಗಳ ಸಂಬಳ 18 ಸಾವಿರ, ಸಾಧನೆ ಭ್ರಷ್ಟಾಚಾರ ಆರೋಪ ಹಿನ್ನಲೆಯಲ್ಲಿ ಅಮಾನತು, ಪ್ರಭಾವ ಬಳಸಿ ಕೆಲವೇ ದಿನಗಳಲ್ಲಿ ವಾಪಾಸ್.

ಇದು ಮಧ್ಯ ಪ್ರದೇಶದ ಇಂದೋರ್ ನಲ್ಲಿ ಲೋಕಾಯುಕ್ತ ದಾಳಿ ವೇಳೆ ಸಿಕ್ಕ ವ್ಯಕ್ತಿಯ ಕಿರು ಪರಿಚಯ.

ಇಂದೋರ್ ನಗರ ಸಭೆಯಲ್ಲಿ ಕಾರ್ಯನಿರ್ವಹಿಸುವ ಗುಮಾಸ್ತ ಅಸ್ಲಂ ಖಾನ್ ಮೇಲೆ ದೂರುಗಳ ದೂರುಗಳು ಬಂದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಲೋಕಾಯುಕ್ತ ಅಧಿಕಾರಿಗಳು ಅಸ್ಲಂ ಮನೆ ಮೇಲೆ ದಾಳಿ ನಡೆಸಿದ್ದಾರೆ. ಅದು ಒಂದು ಮನೆಯ ಮೇಲಲ್ಲ. ಬದಲಾಗಿ ಬರೋಬ್ಬರಿ 5 ಮನೆಗಳ ಮೇಲೆ.

ಈ ವೇಳೆ ಸಿಕ್ಕರೆ ಲಕ್ಷ ಲೆಕ್ಕದಲ್ಲಿ ಸಿಗಬಹುದು ಎಂದು ಒಳ ಪ್ರವೇಶಿಸಿದ ಅಧಿಕಾರಿಗಳೇ ಸುಸ್ತಾಗಿದ್ದಾರೆ. ತಿಂಗಳಿಗೆ 18 ಸಾವಿರ ಸಂಬಳ ಪಡೆಯುವ ಅಸ್ಲಂ ಖಾನ್ ಮನೆಯಲ್ಲಿ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಅಧಿಕಾರಿಗಳಿಗೆ ಲೆಕ್ಕ ಹಾಕಲು ಅಸಾಧ್ಯವಾಗಿದ್ದು, ಒಂದಿಷ್ಟು ದಿನ ಟೈಂ ಕೊಡಿ ಲೆಕ್ಕ ಹೇಳ್ತಿವಿ ಅಂದಿದ್ದಾರೆ ಅಧಿಕಾರಿಗಳು.

ಇನ್ನು ಅಸ್ಲಾಂ ಕಟ್ಟಿಸಿಕೊಂಡ 5 ಮನೆಗಳು ನೋಡಿದರೆ, ಮಧ್ಯಪ್ರದೇಶದ ರಾಜಕಾರಣಿಗಳು ವೇಸ್ಟ್ ಬಾಡಿಗಳು ಅಂದುಕೊಳ್ಳಬೇಕು. ಖಾದಿ ಮಂದಿಯನ್ನು ನಾಚಿಸುವ ರೀತಿಯಲ್ಲಿ ಇದೇ ಮನೆ..ಅಲ್ಲ ಬಂಗಲೆಗಳನ್ನು ಕಟ್ಟಿಸಿಕೊಂಡಿದ್ದಾನೆ.

ಇನ್ನು ಈತನ ಮೇಲೆ ಭ್ರಷ್ಟಚಾರ ಆರೋಪ ಬರುತ್ತಿರುವ ಮೊದಲ ಬಾರಿಯಲ್ಲ. ಈ ಹಿಂಗೆ ಒಂದು ಬಾರಿ ಅಸ್ಲಂ ಖಾನ್‍ನನ್ನು ಅಮಾನತು ಮಾಡಲಾಗಿತ್ತು. ತನ್ನ ಪ್ರಭಾವ ಬಳಸಿ ಕೆಲವೇ ದಿನಗಳಲ್ಲಿ ಮತ್ತೆ ಹಾಜರಿ ಪುಸ್ತಕದಲ್ಲಿ ಸಹಿ ಹಾಕಿದ ಕಿಲಾಡಿ ಈತ.

ಇಂದೋರ್ ನಗರ ಸಭೆ ಅಂದರೆ ಅಸ್ಲಾಂ ಅನ್ನುವಷ್ಟರ ಮಟ್ಟಿಗೆ ಹವಾ ಇಟ್ಟುಕೊಂಡಿದ್ದ ಈತ ನಗರಸಭೆಗೆ ಸಂಬಂಧಿಸಿದ ಕೆಲಸಗಳು ಆಗಬೇಕಾದರೆ ಅಸ್ಲಾಂ ಖಾನ್‍ ಎಂಟ್ರಿ ಹೊಡೆಯಲೇಬೇಕಿತ್ತು.

ಇನ್ನು ಹಿರಿಯ ಅಧಿಕಾರಿಗಳು ಕೂಡಾ ಅಸ್ಲಾಂ ಸಹಾಯಕ್ಕೆ ಇದ್ದರು ಅನ್ನುವುದು ಗೊತ್ತಾಗಿದೆ.

ಐದು ಮನೆಗಳನ್ನು ಪರಿಶೀಲನೆ ಮುಂದುವರಿದಿದ್ದು, ಬ್ಯಾಂಕ್ ಪಾಸ್ ಬುಕ್ ನೊಳಗೆ ಎಂಟ್ರಿಯಾದ ಅಂಕೆ ಸಂಖ್ಯೆಗಳನ್ನು ಲೆಕ್ಕ ಹಾಕಿಯೇ ಅಧಿಕಾರಿಗಳು ಸುಸ್ತಾಗಿದ್ದಾರೆ. ಇನ್ನಷ್ಟೇ ಆಸ್ತಿ ಪಾಸ್ತಿ, ಚಿನ್ನಾಭರಣಗಳ ಲೆಕ್ಕ ಮುಗಿಯಬೇಕಿದೆ.

Advertisements

One Comment on “18 ಸಾವಿರ ಸಂಬಳ ಪಡೆಯೋ ಗುಮಾಸ್ತನ ಮನೆಯಲ್ಲಿ ಸಿಕ್ಕಿರೋದಕ್ಕೆ ಲೆಕ್ಕವೇ ಇಲ್ಲ

  1. Pingback: minimum balance ಹೆಸರಲ್ಲಿ ಬ್ಯಾಂಕ್ ಸಂಪಾದಿಸಿದ್ದು ಕೋಟಿ ಕೋಟಿ..

Leave a Reply

%d bloggers like this: