Advertisements

minimum balance ಹೆಸರಲ್ಲಿ ಬ್ಯಾಂಕ್ ಸಂಪಾದಿಸಿದ್ದು ಕೋಟಿ ಕೋಟಿ..

ನೀವು ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ. ನಿಮಗೊಂದು ಬ್ಯಾಂಕ್ ಖಾತೆ ಇದ್ದು, ನಿಮ್ಮ ಮೊಬೈಲ್ ನಂಬರ್ ಅನ್ನು ಬ್ಯಾಂಕಿಗೆ ಕೊಟ್ಟಿದ್ದರೆ ಮೆಸೇಜ್ ಬಂದಿರುತ್ತದೆ.

ಇನ್ಮುಂದೆ ನಿಮ್ಮ ಖಾತೆಯಲ್ಲಿ 500 ರೂಪಾಯಿ ಅಲ್ಲ ಸಾವಿರ ರೂಪಾಯಿ ಇಡಬೇಕು ಎಂದು ಅವರು ಹೇಳಿರುತ್ತಾರೆ.

ಹೌದು ಇದೀಗ ಬ್ಯಾಂಕ್ ಗಳು ಕಾಸು ಮಾಡುವುದನ್ನು ಚೆನ್ನಾಗಿ ಕಲಿತುಕೊಂಡಿದೆ. ಎಟಿಎಂ ಜಾರ್ಜ್, ಚೆಕ್ ಜಾರ್ಜ್, SMS ಜಾರ್ಜ್ ATM Card ಜಾರ್ಜ್ ಎಂದು ಗ್ರಾಹಕನ ಕೈಗೆ ಚೆನ್ನಾಗಿ ಕತ್ತರಿ ಹಾಕುತ್ತಿದೆ.

ಇದನ್ನೂ ನೋಡಿ : What Happened Between Darshan and Nikhil | ಕುರುಕ್ಷೇತ್ರ ಬಗ್ಗೆ ದರ್ಶನ ಮೌನ

ಅದರಲ್ಲೂ ಮಿನಿಮಮ್ ಬ್ಯಾಲೆನ್ಸ್ ಉಳಿಸಿಕೊಂಡಿಲ್ಲ ಎಂದರೆ  ಬ್ಯಾಂಕುಗಳಿಗೆ ಹಬ್ಬ. ಸೇವೆ ಅನ್ನುವ ಕಾನ್ಸೆಪ್ಟ್ ಮರೆತಿರುವ ಬ್ಯಾಂಕುಗಳು ಇದೀಗ ಕಾಸು ಮಾಡುವ ಬುದ್ದಿಯನ್ನು ರೂಢಸಿಕೊಂಡಿದೆ. ಹೀಗಾಗಿಯೇ ಸರ್ಕಾರಿ ಸೌಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸೇರಿದಂತೆ ಹಲವು ಬ್ಯಾಂಕ್ ಗಳು ಖಾತೆಯಲ್ಲಿ ಕನಿಷ್ಠ ಬಾಕಿ(ಮಿನಿಮಮ್ ಬ್ಯಾಲೆನ್ಸ್) ಉಳಿಸಿಕೊಳ್ಳದ ಗ್ರಾಹಕರಿಗೆ ದಂಡ ವಿಧಿಸುತ್ತಿದ್ದು 2017-18ನೇ ಸಾಲಿನಲ್ಲಿ ದಂಡ ರೂಪವಾಗಿ ಬ್ಯಾಂಕ್ ಗಳು ಬರೋಬ್ಬರಿ 5 ಸಾವಿರ ಕೋಟಿ ರುಪಾಯಿಯನ್ನು ಸಂಗ್ರಹಿಸಿದೆ.

ಜನ್ ಧನ್ ಯೋಜನೆ ಅಡಿ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳದ ಗ್ರಾಹಕರ ಖಾತೆಗಳಲ್ಲೂ ಆರಂಭಿಕ ಉಳಿತಾಯದ ಮೊತ್ತವೇ 30.8 ಕೋಟಿ ರುಪಾಯಿಗಳಷ್ಟಿತ್ತು.

ಇದನ್ನೂ ನೋಡಿ : ಪುನೀತ್‌ ಕೈಗೆ ಕಟ್ಟಿದ ದಾರದ ರಹಸ್ಯವೇನು..?

ಹಾಗಿದ್ದರೂ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಗ್ರಾಹಕರಿಂದ ವಸೂಲಾದ ದಂಡದ ಪ್ರಮಾಣ ಏರಿಕೆಯಾಗಿದೆ. ಹೀಗಿದ್ದರು ಸುಮಾರು 5 ಸಾವಿರ ಕೋಟಿ ರುಪಾಯಿ ಸಂಗ್ರಹವಾಗಿದೆ. ಇದರಲ್ಲಿ 2,433 ಕೋಟಿ ರುಪಾಯಿಯನ್ನು SBI ಸಂಗ್ರಹಿಸಿದೆ.

ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದು ಅದೊಂದು ಉಂಗುರ..!

ಇನ್ನುಳಿದಂತೆ AXIS ಬ್ಯಾಂಕ್, HDFC ಬ್ಯಾಂಕ್ ಮತ್ತು ICICI ಬ್ಯಾಂಕ್ ಗಳು ದಂಡ ರೂಪವಾಗಿ ಹಣ ಸಂಗ್ರಹಿಸಿದೆ. ಹೀಗಾಗಿಯೇ ಬ್ಯಾಂಕ್ ಖಾತೆ ಮಾಡುವ ಮುನ್ನ ಯೋಚಿಸಿ. ನಾಲ್ಕೈದು ಬ್ಯಾಂಕುಗಳಲ್ಲಿ ಖಾತೆ ಇಡುವ ಬದಲು ಒಂದೆರೆಡು ಖಾತೆಯಲ್ಲಿ ಖಾತೆ ಇಟ್ಟುಕೊಂಡು ನೆಮ್ಮದಿಯಾಗಿರಿ.

18 ಸಾವಿರ ಸಂಬಳ ಪಡೆಯೋ ಗುಮಾಸ್ತನ ಮನೆಯಲ್ಲಿ ಸಿಕ್ಕಿರೋದಕ್ಕೆ ಲೆಕ್ಕವೇ ಇಲ್ಲ

Advertisements

Leave a Reply

%d bloggers like this: