Advertisements

ಕೆಟ್ಟು ನಿಂತ ರೈಲಿನಿಂದ ಪರೀಕ್ಷೆ ತಪ್ಪಿಸಿಕೊಂಡ 3 ಸಾವಿರ ಮಂದಿ

ಒಂದೇ ಒಂದು ರೈಲು ಕೆಟ್ಟು ನಿಂತ ಕರ್ಮದಿಂದ ಬೆಂಗಳೂರಿನಲ್ಲಿ ಭಾನುವಾರ ಡಿಆರ್ ಪರೀಕ್ಷೆ ಬರೆಯಬೇಕಾಗಿದ್ದ ಹುಬ್ಬಳ್ಳಿ – ಧಾರವಾಡದ 3 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.

ಮಾರ್ಗಮಧ್ಯೆ ಗೂಡ್ಸ್ ಟ್ರೈನ್‌ ಕೆಟ್ಟು ನಿಂತ ಕಾರಣ, ಪ್ರಯಾಣ ಪ್ರಾರಂಭಿಸಬೇಕಾಗಿದ್ದ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲು ರಾತ್ರಿ ಪೂರ್ತಿ ನಿಂತಲ್ಲೇ ನಿಂತಿತು. ಇದರಿಂದ ಕಂಬಾರಗಣವಿ ನಿಲ್ದಾಣದಲ್ಲಿ ಪ್ರಯಾಣಿಕರು ರಾತ್ರಿ ಕಳೆಯಬೇಕಾಯಿತು.

ಶನಿವಾರ ರಾತ್ರಿ 9.45ಕ್ಕೆ ಧಾರವಾಡಕ್ಕೆ ಬರಬೇಕಿದ್ದ ರೈಲು ಬಂದಾಗ ಭಾನುವಾರ ಬೆಳಗ್ಗೆ 5.30ಕ್ಕೆ ಆಗಿತ್ತು. ಹೀಗಾಗಿ ಡಿಆರ್ ಪರೀಕ್ಷೆಯಿಂದ ನಾವೆಲ್ಲಾ ವಂಚಿತರಾಗಿದ್ದು, ರೈಲ್ವೆ ಇಲಾಖೆ ವಿರುದ್ಧ ಪ್ರತಿಭಟನೆ ಪ್ರಾರಂಭಿಸಿದ್ದಾರೆ.

ಧಾರವಾಡ ಬೆಳಗಾವಿ ಸೋಲಾಪುರ ಸೇರಿ ವಿವಿಧ ಜಿಲ್ಲೆಗಳಿಂದ ಬಂದಿರುವ ಅಭ್ಯರ್ಥಿಗಳು, ರೈಲ್ವೆಯ ಲೋಪದಿಂದ ಬೆಂಗಳೂರು ತಲುಪದೇ ಹುಬ್ಬಳ್ಳಿಯಲ್ಲಿಯೇ ಉಳಿದಿದ್ದು, ಪರೀಕ್ಷೆಯನ್ನು ಮುಂದೂಡಬೇಕು, ಅಥವಾ ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ರಾತ್ರಿಯಿಡೀ ಮಾರ್ಗಮಧ್ಯೆ ರೈಲು ಕೆಟ್ಟು ನಿಂತ ಕಾರಣ ಡಿಆರ್ ಪರೀಕ್ಷೆಗೆ ಹೋಗಬೇಕಿದ್ದ 3,000ಕ್ಕೂ ಹೆಚ್ಚು ಅಭ್ಯರ್ಥಿಗಳು ತೊಂದರೆ ಸಿಲುಕಿದ್ದಾರೆ.

ನಿಗದಿಯಂತೆ ಭಾನುವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನಲ್ಲಿ ಡಿಆರ್ ಪರೀಕ್ಷೆ ನಡೆಯಲಿದೆ.

Advertisements

Leave a Reply

%d bloggers like this: