ಬದಲಾಗುತ್ತಿದೆ ಕರ್ನಾಟಕ ಪೊಲೀಸ್ ಪೇದೆಗಳ ಟೋಪಿ..!

ಕರ್ನಾಟಕದ ಪೊಲೀಸ್‌ ಕಾನ್‌ಸ್ಟೆಬಲ್‌ಗಳು ಧರಿಸುತ್ತಿರುವ ಟೋಪಿಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಪೊಲೀಸ್ ಇಲಾಖೆ, ಟೋಪಿ ಬದಲಾವಣೆಗೆ ನಿರ್ಧರಿಸಿದೆ.

ಈ ಕುರಿತು ಇಂದು ನಡೆದ  ಡಿಜಿ ಮತ್ತು ಐಜಿಪಿಗಳ ಸಭೆಯಲ್ಲಿ ಕಾನ್ ಸ್ಟೇಬಲ್ ಗಳಿಗೆ ಹೊಸ ಮಾದರಿಯ ಪಿ-ಕ್ಯಾಪ್ ಧರಿಸುವ ಕುರಿತು ಚರ್ಚೆ ನಡೆಸಲಾಗಿದೆ.

ಸಭೆಯಲ್ಲಿ ಕಾನ್‌ಸ್ಟೆಬಲ್‌ಗಳಿಗೆ ಹೊಸ ಮಾದರಿಯ ಪಿ-ಕ್ಯಾಪ್‌ ಧರಿಸಲು ಅವಕಾಶ ಮಾಡಿಕೊಟ್ಟು ಪರಿಶೀಲನೆ ನಡೆಸಲಾಯ್ತು. ಈ ಮೂಲಕ ಪೊಲೀಸ್‌ ಅಧಿಕಾರಿಗಳು ಬಳಸುವ ಮಾದರಿಯ ಕ್ಯಾಪ್ ಜಾರಿಗೆ ಸಿದ್ದತೆ ನಡೆಸಲಾಗಿದೆ.ಈ  ಹಿನ್ನೆಲೆಯಲ್ಲಿ ತಮಿಳುನಾಡು ಹಾಗೂ ಕೇರಳ ಪೊಲೀಸರ ಮಾದರಿಯಲ್ಲಿ ಪಿ-ಕ್ಯಾಪ್‌ ಬಳಕೆಗೆ ಚಿಂತನೆ ಮಾಡಲಾಗಿದೆ.

ಪೊಲೀಸ್​ ಪೇದೆಗಳು ಸದ್ಯ ಈ ಹಿಂದೆ ರೂಪಿಸಿದಂತಹ ಸ್ಲೋಚಾಟ್​ನಂತಹ ಟೋಪಿಗಳನ್ನು ಧರಿಸುತ್ತಿದ್ದಾರೆ. ಅಂದುಕೊಂಡ ಹಾಗೇ ಎಲ್ಲವೂ ನಡೆದರ ಕೆಲವೇ ದಿನಗಳಲ್ಲಿ ರಾಜ್ಯದ ಪೊಲೀಸ್‌ ಕಾನ್‌ಸ್ಟೆಬಲ್‌ಗಳ ಟೋಪಿ ಸ್ಲೊಚಾಟ್‌ ಕ್ಯಾಪ್‌ನಿಂದ ಪಿ-ಕ್ಯಾಪ್‌ಗೆ ಬದಲಾವಣೆಯಾಗಲಿದೆ.

police-cap

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: